More

    ಬಸ್‌ಗಾಗಿ ಹೆದ್ದಾರಿ ತಡೆದ ವಿದ್ಯಾರ್ಥಿಗಳು

    ರಾಯಬಾಗ: ವಿದ್ಯಾರ್ಥಿಗಳಿಗೆ ಬಸ್ ನಿಲುಗಡೆ ಮಾಡದಿರುವುದನ್ನು ಖಂಡಿಸಿ ತಾಲೂಕಿನ ಹುಬ್ಬರವಾಡಿ ಗ್ರಾಮದ ಶಾಲಾ ವಿದ್ಯಾರ್ಥಿಗಳು ಪಾಲಕರೊಂದಿಗೆ ಬುಧವಾರ ರಾಯಬಾಗ-ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯಲ್ಲಿ ಬಸ್ ತಡೆಹಿಡಿದು ಪ್ರತಿಭಟನೆ ನಡೆಸಿದರು. ಬಳಿಕ ಪಾಲಕರೊಂದಿಗೆ ಬಸ್ ಮೂಲಕ ರಾಯಬಾಗ ಪೊಲೀಸ್ ಠಾಣೆಗೆ ಬಂದು ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.

    ಹುಬ್ಬರವಾಡಿ ಮಾರ್ಗವಾಗಿ ಸಂಚರಿಸುವ ಎಲ್ಲ ಬಸ್‌ಗಳು ಭರ್ತಿಯಾಗಿ ಹೋಗುತ್ತಿದ್ದು, ಗ್ರಾಮದಲ್ಲಿ ಬಸ್ ನಿಲುಗಡೆ ಮಾಡುತ್ತಿಲ್ಲ. ಇದರಿಂದ ಸರಿಯಾದ ಸಮಯಕ್ಕೆ ಶಾಲೆ ಬಂದು ಮರಳಿ ಗ್ರಾಮಕ್ಕೆ ಹೋಗಲು ತಡವಾಗುತ್ತಿದೆ. ನಿಗದಿತ ಸಮಯಕ್ಕೆ ಶಾಲೆ ತಲುಪಲು ಸಾಧ್ಯವಾಗುತ್ತಿಲ್ಲ. ಒಂದೊಂದು ದಿನ ಬಸ್ ಇಲ್ಲದೆ ಇರುವುದರಿಂದ ತಾವೆಲ್ಲರೂ ನಡೆದುಕೊಂಡು ಹೋಗಿದ್ದು, ಮನೆ ತಲುಪಲು ರಾತ್ರಿಯಾಗಿರುತ್ತದೆ ಎಂದು ಅಳಲು ತೋಡಿಕೊಂಡರು. ನಿಗದಿತ ಸಮಯದಲ್ಲಿ ಗ್ರಾಮಕ್ಕೆ ಹೆಚ್ಚುವರಿ ಬಸ್ ಬಿಡಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದರು. ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ವ್ಯವಸ್ಥೆ ಮಾಡಿಕೊಡುವಂತೆ ಸಿಪಿಐ ಎಚ್.ಡಿ.ಮುಲ್ಲಾ ಅವರು ಡಿಪೋ ಮ್ಯಾನೇಜರ್‌ಗೆ ತಿಳಿಸಿದರು. ಡಿಪೋ ಮ್ಯಾನೇಜರ್ ಅವರು ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಬಸ್ ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಮತ್ತು ಪಾಲಕರು ಪ್ರತಿಭಟನೆ ಹಿಂಪಡೆದರು. ರೇಣುಕಾ ಬಬಲೇಶ್ವರ, ಪ್ರತೀಕ್ಷಾ ಮಾನೆ, ಗಿರೆವ್ವ ಬಬಲೇಶ್ವರ, ಅಸ್ಮಿತಾ ಶಿರಗನ್ನವರ, ಅಮೃತಾ ಪಾಟೀಲ, ಸುಜಾತಾ ಬಬಲೇಶ್ವರ, ದೀಪಾ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts