More

    ಫುಟ್‌ಬಾಲ್ ದಿಗ್ಗಜ ಎಸ್‌ಎಸ್ ಹಕೀಂ ನಿಧನ

    ನವದೆಹಲಿ: ಭಾರತ ಫುಟ್‌ಬಾಲ್ ತಂಡದ ಮಾಜಿ ಆಟಗಾರ ಸೈಯದ್ ಶಾಹೀದ್ ಹಕೀಂ (82) ಭಾನುವಾರ ಹೃದಯಾಘಾತದಿಂದ ಕಲಬುರಗಿಯಲ್ಲಿ ಭಾನುವಾರ ನಿಧನರಾದರು. 1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಆಡಿದ್ದ ಹೈದರಾಬಾದ್‌ನ ಆಟಗಾರ ‘ಹಕೀಂ ಸಾಬ್’ ಎಂದೇ ಚಿರಪರಿಚಿತರಾಗಿದ್ದರು. ಭಾನುವಾರ ಬೆಳಗ್ಗೆ ಸುಮಾರು 9 ಗಂಟೆ ವೇಳೆ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಪತ್ನಿ ಸಾದಿಯಾ ಸೈಯೆದ್ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಮೂಲತಃ ಹೈದರಾಬಾದ್‌ನವರಾದ ಹಕೀಂ, ಮೂರೂವರೆ ವರ್ಷಗಳಿಂದ ಪತ್ನಿ ಜತೆ ನಗರದಲ್ಲಿ ವಾಸವಾಗಿದ್ದರು. ಹೈದರಾಬಾದ್‌ನಿಂದ ನಾಲ್ಕು ದಿನ ಹಿಂದೆ ಕಲಬುರಗಿಗೆ ಆಗಮಿಸುವ ಮುನ್ನ ಎದೆನೋವು ಕಾಣಿಸಿತ್ತು. ಬಳಿಕ ಯುನೈಟೆಟ್ ಆಸ್ಪತ್ರೆಗೆ ದಾಖಲಿಸಿದಾಗ ಹೃದಯ ಸಮಸ್ಯೆ ಪತ್ತೆಯಾಗಿದ್ದರಿಂದ ಗುಲ್ಬರ್ಗ ಹಾರ್ಟ್ ಫೌಂಡೇಷನ್ ಹಾಸ್ಟಿಟಲ್‌ಗೆ ಸ್ಥಳಾಂತರಿಸಲಾಗಿತ್ತು.

    ಇದನ್ನೂ ಓದಿ: ಯುಎಇಯಲ್ಲಿ ಅಭ್ಯಾಸ ಆರಂಭಿಸಿದ ಮುಂಬೈ ಇಂಡಿಯನ್ಸ್, ಸಿಎಸ್‌ಕೆ ತಂಡಗಳು, 

    ಕಳೆದ 5 ದಶಕಗಳಿಂದ ಭಾರತೀಯ ಫುಟ್‌ಬಾಲ್‌ನಲ್ಲಿ ಗುರುತಿಸಿಕೊಂಡಿದ್ದ ಹಕೀಂ, ದ್ರೋಣಾಚಾರ್ಯ ಪ್ರಶಸ್ತಿಗೆ ಭಾಜನರಾಗಿದ್ದರು. 1982ರ ಏಷ್ಯಾಡ್ ಗೇಮ್ಸ್‌ನಲ್ಲಿ ಭಾರತ ತಂಡಕ್ಕೆ ಮುಖ್ಯಕೋಚ್ ಆಗಿದ್ದ ಪಿಕೆ ಬ್ಯಾನರ್ಜಿ ಅವರಿಗೆ ಸಹಾಯಕ ಕೋಚ್ ಆಗಿದ್ದರು. ಟೂರ್ನಿಯೊಂದಲ್ಲಿ ಭಾರತ ತಂಡಕ್ಕೆ ಪೂರ್ಣ ಪ್ರಮಾಣದ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಮಹಿಂದ್ರಾ ಯುನೈಟೆಡ್ (ಅಂದು ಮಹಿಂದ್ರಾ ಆಂಡ್ ಮಹಿಂದ್ರಾ) 1988ರಲ್ಲಿ ಡುರಾಂಡ್ ಕಪ್ ಜಯಿಸಿತ್ತು.

    ಇದನ್ನೂ ಓದಿ: ಆರ್‌ಸಿಬಿ ತಂಡದ ಮುಖ್ಯ ಕೋಚ್ ಆಗಿ ಮೈಕ್ ಹೆಸ್ಸನ್

    ಫಿಫಾ ಬ್ಯಾಡ್ಜ್ ಹೊಂದಿದ್ದ ಅಂತಾರಾಷ್ಟ್ರೀಯ ರೆಫ್ರಿಯಾಗಿದ್ದ ಹಕೀಂ, ಏಷ್ಯನ್ ಕ್ಲಬ್ ಕಪ್ ಪಂದ್ಯಗಳಿಗೆ ರೆಫ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಭಾರತೀಯ ವಾಯು ಸೇನೆಯ ಪ್ರಮುಖ ಆಟಗಾರನಾಗಿದ್ದ ಹಕೀಂ, ಭಾರತದಲ್ಲಿ ನಡೆದ 2017ರ 17 ವಯೋಮಿತಿ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಯೋಜನಾ ನಿರ್ದೇಶಕರಾಗಿದ್ದರು. ಸೆಂಟ್ರಲ್ ಮಿಡ್‌ಫೀಲ್ಡರ್ ಆಟಗಾರನಾಗಿದ್ದ ಹಕೀಂ, 1960ರ ರೋಮ್ ಒಲಿಂಪಿಕ್ಸ್‌ನಲ್ಲಿ ರಾಷ್ಟ್ರೀಯ ತಂಡದಲ್ಲಿದ್ದರೂ ಏಕೈಕ ಪಂದ್ಯವಾಡಲು ವಿಫಲರಾಗಿದ್ದರು. ಹಕೀಂ ಅವರ ತಂದೆ ಸಯ್ಯದ್ ಅಬ್ದುಲ್ ರಹೀಂ ಅವರೇ ತಂಡದ ಮುಖ್ಯಕೋಚ್ ಆಗಿದ್ದರು. ಅವರ ತಂದೆಯೇ ಕೋಚ್ ಆಗಿದ್ದರೂ ಹಕೀಂ ಅವರಿಗೆ ರೋಮ್‌ನಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. 1962ರ ಏಷ್ಯಾಡ್‌ನಲ್ಲಿ ಸ್ವರ್ಣ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ಹಕೀಂ ಉತ್ತಮ ಫಾರ್ಮ್‌ನಲ್ಲಿದ್ದರೂ ರಾಮ್ ಬಹದೂರ್, ಮರಿಯಪ್ಪ ಕೆಂಪಯ್ಯ, ಪ್ರಶಾಂತ್ ಸಿನ್ಹಾರಂಥ ಬಲಿಷ್ಠ ಆಟಗಾರರು ತಂಡದಲ್ಲಿದ್ದ ಕಾರಣ ಅವರಿಗೆ ಆಡಲು ಅವಕಾಶ ದಕ್ಕಿರಲಿಲ್ಲ. ಪ್ರತಿಷ್ಠಿತ ಧ್ಯಾನ್‌ಚಂದ್ ಪ್ರಶಸ್ತಿಗೂ ಭಾಜನರಾಗಿದ್ದರು. ಜೀವಮಾನ ಸಾಧನೆಗೆ ಧ್ಯಾನ್‌ಚಂದ್ ಪ್ರಶಸ್ತಿ ಪಡೆದ ಭಾರತದ 2ನೇ ಫುಟ್‌ಬಾಲ್ ಆಟಗಾರ ಎನಿಸಿಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts