More

    ರೋಗ ತಡೆಯಲು ಲಸಿಕೆ ಹಾಕಿಸಿಕೊಳ್ಳಿ

    ಗುರುಗುಂಟಾ: ಗ್ರಾಮದ ಜಾನುವಾರುಗಳಿಗೆ ಪಶು ಇಲಾಖೆಯಿಂದ ಕಾಲು ಬಾಯಿ ಲಸಿಕೆಯನ್ನು ಶನಿವಾರ ಹಾಕಲಾಯಿತು.

    ಪಶು ಇಲಾಖೆಯ ಜಿಲ್ಲಾ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಎಸ್.ಎಸ್.ಪಾಟೀಲ್ ಅವರು ಮಾತನಾಡಿ, ಜಿಲ್ಲೆಯಲ್ಲಿ 3.57 ಲಕ್ಷ ಆಕಳು, ಎಮ್ಮೆ ದನಗಳಿವೆ. ಅವುಗಳಿಗೆ ಹಾಕುವಷ್ಟು ಲಸಿಕೆ ಇಲಾಖೆಯಲ್ಲಿ ಲಭ್ಯವಿದೆ. ಲಸಿಕೆ ಹಾಕುವುದರಿಂದ ಜಾನುವಾರುಗಳಿಗೆ ರೋಗ ತಗಲುವುದಿಲ್ಲ. ವರ್ಷದಲ್ಲಿ ಮಾರ್ಚ್-ಏಪ್ರಿಲ್, ಆಗಸ್ಟ್ -ಸೆಪ್ಟೆಂಬರ್ ತಿಂಗಳಿನಲ್ಲಿ ಎರಡು ಹಂತದಲ್ಲಿ ಲಸಿಕಾ ಹಾಕಲಾಗುತ್ತದೆ ಎಂದು ತಿಳಿಸಿದರು.

    ಜಿಲ್ಲೆಯಲ್ಲಿ 3.57 ಲಕ್ಷ ಜಾನುವಾರುಗಳಿಗೆ ಲಸಿಕೆ

    ಜಿಲ್ಲೆಯಲ್ಲಿ ಕುರಿ-ಮೇಕೆ ಸಂಖ್ಯೆಗಳಿಗುಣವಾಗಿ ಎಲ್ಲ ವಿಧದ ಲಸಿಕೆ ಲಭ್ಯವಿದೆ. ನಿಯಮಾನುಸಾರ ಲಸಿಕೆಯನ್ನು ಹಾಕಲಾಗುತ್ತದೆ. ಪಿಪಿಆರ್ ಲಸಿಕೆ ಮಾತ್ರ ಆಯಾ ಪಶು ಆಸ್ಪತ್ರೆಯ ಕುರಿ, ಮೇಕೆಗಳ ಸಂಖ್ಯೆ ಅನುಗುಣವಾಗಿ ಶೇ.30 ಲಸಿಕೆ ಪೂರೈಸಲಾಗುತ್ತದೆ ಎಂದು ತಿಳಿಸಿದರು.
    ಲಿಂಗಸಗೂರು ಪಶು ಸಹಾಯಕ ನಿರ್ದೇಶಕ ಡಾ.ರಾಚಪ್ಪ, ಪಶು ವೈದ್ಯಾಧಿಕಾರಿ ಪ್ರಶಾಂತ, ದೇವರಾಜ, ಜಾನುವಾರು ಅಧಿಕಾರಿ ಡಾ.ಸತ್ಯನಾರಾಯಣ, ಸಿಬ್ಬಂದಿ ವೆಂಕಟೇಶ ಇದ್ದರು.

    ಇದನ್ನೂ ಓದಿ: ಅಪ್ರಾಪ್ತ ವಯಸ್ಕಳಿಗೆ ಲೈಂಗಿಕ ಕಿರುಕುಳ; ನಾಲ್ವರು ಪೊಲೀಸ್​ ಅಧಿಕಾರಿಗಳು ಅರೆಸ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts