More

    ಏಪ್ರಿಲ್‌ 1 ರಿಂದ ಜಾನುವಾರುಗಳಿಗೆ ಕಾಲು, ಬಾಯಿ ರೋಗ ತಡೆ ಲಸಿಕೆ

    ಕಾರವಾರ: ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರದಡಿ 5ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮವು ಏಪ್ರಿಲ್ 1 ರಿಂದ 30 ರ ವರೆಗೆ ಜಿಲ್ಲೆಯಾದ್ಯಂತ ಏಕ ಕಾಲಕ್ಕೆ ನಡೆಯಲಿದೆ.
    ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ ಅದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಗುರುವಾರ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾಲು ಬಾಯಿ ಲಸಿಕಾ ಕಾರ್ಯಕ್ರಮದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆ ನಡೆಸಿದರು. ಪಶು ವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಮೋಹನ ಕುಮಾರ್ ಮಾತನಾಡಿ, ಲಸಿಕಾ ಕಾರ್ಯಕ್ರಮಕ್ಕೆ 4957 ಬ್ಲಾಕ್‌ಗಳನ್ನು ರಚಿಸಲಾಗಿದೆ. 233 ಲಸಿಕಾದಾರರು ಪ್ರತಿದಿನ ಹೈನುಗಾರರ ಮನೆ ಬಾಗಿಲಿಗೆ ತರೆಳಿ ಜಾನುವಾರುಗಳಿಗೆ ಲಸಿಕೆಯನ್ನು ಉಚಿತವಾಗಿ ನೀಡುತ್ತಾರೆ ಎಂದು ಸಭೆಯಲ್ಲಿ ವಿವರ ನೀಡಿದರು.
    ಇದು ಪ್ರತಿ 6 ತಿಂಗಳಿಗೊಮ್ಮೆ ನಡೆಯುವ ಕಾರ್ಯಕ್ರಮವಾಗಿದೆ. ಪ್ರತಿ ಗ್ರಾಮದಲ್ಲಿ ಲಸಿಕೆ ನೀಡುವ ದಿನಾಂಕವನ್ನು ಮಂಚಿತವಾಗಿ ಆಯಾ ಗ್ರಾಪಂಗಳ ಮೂಲಕ ತಿಳಿಸಲಾಗುವುದು. ಲಸಿಕೆದಾರರು ತಮ್ಮ ಮನೆಗೆ ಬಂದಾಗ ಜಾನುವಾರು ಮಾಲೀಕರು ಸಹಕಾರ ನೀಡಬೇಕು ಎಂದು ಅವರು ವಿನಂತಿಸಿದರು.

    ಇದನ್ನೂ ಓದಿ: ಅಕ್ರಮವಾಗಿ ಚಿನ್ನ ಸಾಗಣೆ ಭಟ್ಕಳದ ವ್ಯಕ್ತಿ ಮಂಗಳೂರಲ್ಲಿ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts