More

    ಸ್ವಾಮೀಜಿಯಾಗಲಿದ್ದಾರೆ ಮಾಜಿ ಸಚಿವ ಪುಟ್ಟಸ್ವಾಮಿ! ಗಾಣಿಗ ಮಠದ ಪೀಠಾಧಿಪತಿ ಆಗಿ ಸದ್ಯದಲ್ಲೇ ಪಟ್ಟಾಭಿಷೇಕ!

    ಬೆಂಗಳೂರು: ಇದುವರೆಗೆ ಮಾಜಿ ಸಚಿವರಾಗಿದ್ದ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಬಿ.ಜೆ.ಪುಟ್ಟಸ್ವಾಮಿ ಇನ್ನುಮುಂದೆ ಸ್ವಾಮೀಜಿ.
    ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಪ್ರಥಮ ಪೀಠಾಧಿಪತಿಗಳಾಗಿ ಅವರು ಪೀಠಾರೋಹಣ ಮಾಡಲಿದ್ದು, ಶೀಘ್ರದಲ್ಲೇ ಪಟ್ಟಾಭಿಷೇಕ ನಡೆಯಿದೆ. ಆ ಬಳಿಕ ಅವರು ಪೂರ್ಣಾನಂದಪುರಿ ಸ್ವಾಮೀಜಿ ಆಗಲಿದ್ದಾರೆ.

    ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿ ನಗರೂರು ಗ್ರಾಮ ಬಡಾವಣೆಯಲ್ಲಿರುವ ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದಲ್ಲಿ ಮೇ 15 ರಂದು ಬೆಳಗ್ಗೆ 11.50ಕ್ಕೆ ಪೀಠಾರೋಹಣ ಹಾಗೂ ಪಟ್ಟಾಭಿಷೇಕ ಮಹೋತ್ಸವ ನಡೆಯಲಿದೆ.

    ಶ್ರೀ ಕೈಲಾಸ ಆಶ್ರಮದ ಶ್ರೀ ಜಯೇಂದ್ರಪುರಿ ಮಹಾಸ್ವಾಮಿಗಳು ದೀಕ್ಷೆ ಬೋಧಿಸಲಿದ್ದಾರೆ. ನಾಡಿನ ವಿವಿಧ ಮಠಗಳ 15ಕ್ಕೂ ಹೆಚ್ಚು ಪೀಠಾಧಿಪತಿಗಳು, ಹಿರಿಯ ರಾಜಕಾರಣಿಗಳು ಈ ಪೀಠಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

    ನಮ್ಮ ಜನಾಂಗಕ್ಕೆ ದಾರಿದೀಪವಾಗಬೇಕು. ಜನಾಂಗದ ಏಳ್ಗೆಗೆ ಶ್ರಮಿಸಬೇಕೆಂಬ ಸದುದ್ದೇಶದಿಂದ ನಾನು ಪೀಠಾರೋಹಣ ಮಾಡುತ್ತಿದ್ದೇನೆ. ಆಸ್ತಿ ಮಾಡಬೇಕು, ಮಜಾ ಮಾಡಬೇಕು ಎಂಬ ಉದ್ದೇಶದಿಂದ ನಾನು ಸ್ವಾಮೀಜಿ ಆಗುತ್ತಿಲ್ಲ. ಬಡ ಮಕ್ಕಳ ಏಳ್ಗೆ ನನ್ನ ಗುರಿ. ನಮ್ಮ ಜನಾಂಗ ಅತ್ಯಂತ ಹಿಂದುಳಿದಿದ್ದು, ಅದರ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇನೆ.
    | ಬಿ.ಜೆ.ಪುಟ್ಟಸ್ವಾಮಿ, ಮಾಜಿ ಸಚಿವರು.

    ಸ್ವಾಮೀಜಿಯಾಗಲಿದ್ದಾರೆ ಮಾಜಿ ಸಚಿವ ಪುಟ್ಟಸ್ವಾಮಿ! ಗಾಣಿಗ ಮಠದ ಪೀಠಾಧಿಪತಿ ಆಗಿ ಸದ್ಯದಲ್ಲೇ ಪಟ್ಟಾಭಿಷೇಕ!
    ತಮ್ಮ ಪಟ್ಟಾಭಿಷೇಕಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ
    ಸ್ವಾಮೀಜಿಯಾಗಲಿದ್ದಾರೆ ಮಾಜಿ ಸಚಿವ ಪುಟ್ಟಸ್ವಾಮಿ! ಗಾಣಿಗ ಮಠದ ಪೀಠಾಧಿಪತಿ ಆಗಿ ಸದ್ಯದಲ್ಲೇ ಪಟ್ಟಾಭಿಷೇಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts