More

    27ರಂದು ತೀರ್ಥಹಳ್ಳಿಯಲ್ಲಿ ಜಾನಪದ ಸಮ್ಮೇಳನ

    ತೀರ್ಥಹಳ್ಳಿ: ತಾಲೂಕಿನ ಪ್ರಥಮ ಜಾನಪದ ಸಮ್ಮೇಳನ ಫೆ.27ರಂದು ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದು ಹಿರಿಯ ಜಾನಪದ ಕಲಾವಿದ ಉಬ್ಬೂರು ರಾಮಣ್ಣ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷೆ ಲೀಲಾವತಿ ಜಯಶೀಲ ಹೇಳಿದರು.

    ಶಾಸಕ ಆರಗ ಜ್ಞಾನೇಂದ್ರ ಸಮ್ಮೇಳನ ಉದ್ಘಾಟಿಸಲಿದ್ದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಎನ್.ಬಿ.ದೇವಪ್ಪ ಪುಸ್ತಕ ಬಿಡುಗಡೆ ಮಾಡಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಸಮ್ಮೇಳನದಲ್ಲಿ ಜಾನಪದ ಕಲಾ ವಸ್ತುಪ್ರದರ್ಶನ, ಹಿರಿಯ ಸಾಹಿತಿ ಡಾ. ಜೆ.ಕೆ.ರಮೇಶ್ ಅಧ್ಯಕ್ಷತೆಯಲ್ಲಿ ತೀರ್ಥಹಳ್ಳಿ ಸುತ್ತಮುತ್ತಲಿನ ಜಾನಪದ ಈ ವಿಷಯ ಕುರಿತು ವಿಚಾರಗೋಷ್ಠಿ, 14 ಜನಪದ ಕಲಾ ಪ್ರಕಾರಗಳ ಪ್ರದರ್ಶನ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸ್ಥಾಪಕ ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ, ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಕೆ.ಗೋವಿಂದ ಭಟ್ ಸೇರಿದಂತೆ ಅನೇಕ ಜಾನಪದ ಕಲಾವಿದರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ, ಶಿಷ್ಟ ಕಲೆಯಂತೆ ಜಾನಪದ ಕಲೆಗೂ ಘನತೆ ತರುವ ಕಾರ್ಯ ವ್ಯಾಪಕವಾಗಿ ನಡೆಯಬೇಕಾದ ಅನಿವಾರ್ಯತೆ ಇದೆ. ಇಂತಹ ಸಮ್ಮೇಳನಗಳ ಮೂಲಕ ಹೊಸ ತಲೆಮಾರಿಗೆ ಜಾನಪದ ಕಲೆಯನ್ನು ತಲುಪಿಸುವ ಪ್ರಯತ್ನ ಆಗಬೇಕಿದೆ. ಅಂಟಿಗೆ-ಪಿಂಟಿಗೆ, ಕೋಲಾಟ ಮುಂತಾದ ಪಾರಂಪರಿಕವಾದ ಜನಪದ ಕಲೆ ತಾಲೂಕಿನಲ್ಲಿ ವಿಸ್ತಾರವಾಗಿದೆ ಎಂದು ಹೇಳಿದರು.
    ಪರಿಷತ್ತಿನ ಉಪಾಧ್ಯಕ್ಷ ನಡಬೂರು ವೆಂಕಟೇಶ್, ಕಾರ್ಯದರ್ಶಿ ಬಿ.ಬಿ.ಮಂಜಪ್ಪ, ಪ್ರೇಮಾ ಡಿ.ಕೌಲಾನಿ, ಶರ್ಮಿಳಾ ಮಂಜುನಾಥ್, ರೂಪಾ ವೆಂಕಟೇಶ್, ಮಮತಾ ಸಾಯಿನಾಥ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts