More

    ಗಮನಸೆಳೆದ ಮಕ್ಕಳು, ಶಿಕ್ಷಕರು

    ಇಳಕಲ್ಲ: ತಾಲೂಕಿನ ನಂದವಾಡಗಿ ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ 2023-24 ಸಾಲಿನ ಶಾಲಾ ಸಂಸತ್ತು ಚುನಾವಣೆ ನಡೆಸಲಾಯಿತು.

    ಸಾರ್ವತ್ರಿಕ ಚುನಾವಣೆಯಂತೆ ಮಕ್ಕಳ ಮತದಾರರ ಪಟ್ಟಿ, ನಾಮಪತ್ರ ಸಲ್ಲಿಕೆ, ಹಿಂಪಡೆದುಕೊಳ್ಳುವಿಕೆ, ಪ್ರಚಾರ, ಮತದಾನದ ದಿನ, ಮತದಾನದ ಎಣಿಕೆ ಸೇರಿ ಎಲ್ಲ ಚುನಾವಣೆ ಪ್ರಕ್ರಿಯೆಗಳನ್ನು ಮುಖ್ಯಶಿಕ್ಷಕರು, ಶಿಕ್ಷಕರು ಅಚ್ಚುಕಟ್ಟಾಗಿ, ಕ್ರಮಬದ್ಧ ಹಾಗೂ ನಿಯಮನುಸಾರವಾಗಿ ನಡೆಸಿದರು.

    ಮತದಾನದಂದು ವಿದ್ಯಾರ್ಥಿನಿಯರು ಸರದಿಯಲ್ಲಿ ನಿಂತು ಹಕ್ಕು ಚಲಾಯಿಸಿದರು. 20 ವಿದ್ಯಾರ್ಥಿನಿಯರು ಸ್ಪರ್ಧಾಳುಗಳಾಗಿ ಕಣದಲ್ಲಿದ್ದರು. ಅಂತಿಮವಾಗಿ ಸವಿತಾ ವಗ್ಗರ ಅತಿ ಹೆಚ್ಚು ಮತ ಪಡೆದರು. ಶಾಂತಾ ವಸದಮಠ, ಮೈಮುನಾ ಹುನಕುಂಟಿ, ಸ್ನೇಹಾ ವಗ್ಗರ, ಸುನಿತಾ ಲದಿನ್ನಿ, ಸಾನಿಯಾ ಹುನಕುಂಟಿ, ಶ್ರೀದೇವಿ ಈಟಿ, ಅನ್ನಪೂರ್ಣ ಗೌಡರ ಆಯ್ಕೆಗೊಂಡರು.

    ಮುಖ್ಯ ಚುನಾವಣಾಧಿಕಾರಿಯಾಗಿ ಮುಖ್ಯಶಿಕ್ಷಕ ಪ್ರಭಯ್ಯ ಲೂತಿಮಠ, ಪ್ರೊಸೆಡಿಂಗ್ ಅಧಿಕಾರಿಗಳಾಗಿ ಶಿಕ್ಷಕರಾದ ಜ್ಯೋತಿ, ವಿ.ಎಸ್. ಕುಂಬಾರ, ಅಸಿಸ್ಟಂಟ್ ಪ್ರೊಸಿಡಿಂಗ್ ಅಧಿಕಾರಿಗಳಾಗಿ ಜಿ.ಆರ್. ನದಾಫ್, ಎಸ್.ವಿ. ಬಳೂಲದ, ಪೋಲಿಂಗ್ ಅಧಿಕಾರಿಯಾಗಿ ಬಸವರಾಜ ಬಲಕುಂದಿ, ಡಾ. ವಿಶ್ವನಾಥ ತೋಟಿ ಕರ್ತವ್ಯ ನಿರ್ವಹಿಸಿದರು.

    ಚುನಾವಣೆ ಕಣದಲ್ಲಿ ಭಾಗವಹಿಸಿದ ಎಲ್ಲ ಅಭ್ಯರ್ಥಿಗಳಿಗೆ ಹಾಗೂ ವಿಜೇತ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಪಾಲಕರು, ಸಾರ್ವಜನಿಕರು ಭಾಗವಹಿಸಿ ವೀಕ್ಷಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts