More

    ಮೈಸೂರಿನಲ್ಲಿ ಹಾರುವ ಹಾವು!; ಒಂದು ವಾರದಿಂದ ಜನರಲ್ಲಿ ಆತಂಕ…

    ಮೈಸೂರು: ಹಾರುವ ಹಾವಿನ ಬಗ್ಗೆ ವೈಲ್ಡ್​ಲೈಫ್ ಕುರಿತ ಚಾನೆಲ್​ಗಳಲ್ಲಿ, ಎಲ್ಲೋ ಅವು ಹಾರುತ್ತಿರುವ ಕುರಿತು ಪತ್ರಿಕೆ, ಟಿವಿಗಳಲ್ಲಿ ಬಹಳಷ್ಟು ಮಂದಿ ಕೇಳಿರುತ್ತಾರೆ. ಆದರೆ ಮೈಸೂರಿನ ಜನರಿಗೆ ಅದನ್ನು ಕಣ್ಣಾರೆ ನೋಡುವ ಅವಕಾಶ ಸಿಕ್ಕಿದೆ.

    ಹಾರುವ ಹಾವನ್ನು ಕಂಡು ಕೆಲವರು ಬೆರಗಾಗಿದ್ದು ಒಂದೆಡೆಯಾದರೆ ಮತ್ತೆ ಕೆಲವರು ಭಯಭೀತರಾಗಿದ್ದರು. ಮೈಸೂರಿನ ಆರ್​ಬಿಐ ವಸತಿ ಗೃಹದಲ್ಲಿ ಒಂದು ವಾರದ ಹಿಂದೆ ಕಾಣಿಸಿಕೊಂಡಿದ್ದ ಹಾರುವ ಹಾವು ಇಲ್ಲಿನ ಜನರಲ್ಲಿ ಆತಂಕ ಮೂಡಿಸಿತ್ತು.

    ಪಶ್ಚಿಮಘಟ್ಟ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಹಾವು ಮರದಿಂದ ಮರಕ್ಕೆ ಹಾರುತ್ತದೆ. ಹಸಿರು ಮಿಶ್ರಿತ ಕೆಂಪು ಬಣ್ಣದ ಈ ಹಾವು ಸಾಮಾನ್ಯವಾಗಿ ಮೂರು ಅಡಿ ಉದ್ದ ಇರುತ್ತದೆ. ಉರಗ ಸಂರಕ್ಷಕ ಕೆಂಪರಾಜು ಅವರು ಮಂಗಳವಾರ ಈ ಹಾವನ್ನು ಹಿಡಿದಿದ್ದಾರೆ. ಹೀಗೆ ಸಂರಕ್ಷಿಸಲಾಗಿರುವ ಈ ಹಾರುವ ಹಾವನ್ನು ಮೈಸೂರು ವಸ್ತು ಸಂಗ್ರಹಾಲಯಕ್ಕೆ ನೀಡುವುದಾಗಿ ಅವರು ಹೇಳಿದ್ದಾರೆ.

    https://www.facebook.com/VVani4U/videos/1761589770686881

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts