More

    ಮುಂಬೈನಲ್ಲಿ ಭಾರತ-ಆಸ್ಟ್ರೇಲಿಯಾ ಮಹಿಳೆಯರ ಕಾದಾಟ: ಕನ್ನಡತಿ ಶ್ರೇಯಾಂಕಾ ಪದಾರ್ಪಣೆ ನಿರೀಕ್ಷೆ

    ಮುಂಬೈ: ಸತತ ಎರಡು ಟೆಸ್ಟ್ ಪಂದ್ಯ ಜಯಿಸಿ ಭರ್ಜರಿ ಾರ್ಮ್‌ನೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ಮಹಿಳಾ ತಂಡ ಏಕದಿನ ಸರಣಿಗೆ ಸಜ್ಜಾಗಿದೆ. ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಸರಣಿಯ ಮೊದಲ ಪಂದ್ಯ ವಾಂಖೆಡೆ ಕ್ರೀಡಾಂಗಣದಲಿ ಗುರುವಾರ ನಡೆಯಲಿದ್ದು, ಹರ್ಮಾನ್‌ಪ್ರೀತ್ ಕೌರ್ ಬಳಗ ತನ್ನ ದಾಖಲೆಯನ್ನು ಉತ್ತಮ ಪಡಿಸಿಕೊಳ್ಳುವತ್ತ ಗಮನಹರಿಸಿದೆ.

    ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಸೋಲಿನೊಂದಿಗೆ ಸುದೀರ್ಘ ತವರಿನ ಋತುವಿನ ಆರಂಭ ಕಂಡಿರುವ ಭಾರತ, ಟೆಸ್ಟ್ ಪಂದ್ಯಗಳಲ್ಲಿ ಐತಿಹಾಸಿಕ ಗೆಲುವಿನೊಂದಿಗೆ ಕಂಬ್ಯಾಕ್ ಮಾಡಿದೆ. ಪ್ರಸ್ತುತ ಾರ್ಮ್‌ನಲ್ಲಿ ಹರ್ಮಾನ್‌ಪ್ರೀತ್ ಬಳಗವೇ ೇವರೀಟ್ ಎನಿಸಿದರೂ, ಏಳು ಬಾರಿಯ ವಿಶ್ವ ಚಾಂಪಿಯನ್ ಆಸೀಸ್ ಎದುರು ಕಳಪೆ ಏಕದಿನ ದಾಖಲೆ ಹೊಂದಿದೆ. ಆಡಿರುವ 50 ಪಂದ್ಯಗಳಲ್ಲಿ ಭಾರತ ಇದುವರೆಗೆ ಕೇವಲ 10 ಗೆಲುವು ದಾಖಲಿಸಿದ್ದು, 40ರಲ್ಲಿ ಸೋಲು ಅನುಭವಿಸಿದೆ. ತವರಿನಲ್ಲಿ ಆಡಿದ 21 ಪಂದ್ಯಗಳಲ್ಲಿ 4 ಬಾರಿ ಮಾತ್ರ ಗೆಲುವು ದಾಖಲಿಸಿದೆ. 2007ರ ಬಳಿಕ ಆಸೀಸ್ ಎದುರು ಭಾರತ ಜಯ ಕಂಡಿಲ್ಲ. 2012ರಲ್ಲಿ ಉಭಯ ತಂಡಗಳು ವಾಂಖೆಡೆಯಲ್ಲಿ ಕೊನೆಯದಾಗಿ ಮುಖಾಮುಖಿಯಾದಾಗ ಭಾರತ 5 ವಿಕೆಟ್‌ಗಳಿಂದ ಸೋಲುಂಡಿತ್ತು. ಆಗ ಮೂರು ಪಂದ್ಯಗಳ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಮುಖಭಂಗಕ್ಕೆ ಒಳಗಾಗಿದ್ದ ಭಾರತ, ಚೇತೋಹಾರಿ ಪ್ರದರ್ಶನ ನೀಡುವ ಹಂಬಲದಲ್ಲಿದೆ.

    2023ರಲ್ಲಿ ಭಾರತ 3 ಏಕದಿನ ಪಂದ್ಯಗಳನ್ನಾಡಿದ್ದು ಜೆಮೀಮಾ ರೋಡ್ರಿಗಸ್ 129 ರನ್ ಕಲೆಹಾಕಿ ಗರಿಷ್ಠ ಸ್ಕೋರರ್ ಎನಿಸಿದ್ದಾರೆ. ಆಸೀಸ್ ಪರ 11 ಪಂದ್ಯಗಳಲ್ಲಿ ಬೆಥ್ ಮೂನಿ 387 ರನ್‌ಗಳಿಸಿ ಉತ್ತಮ ಾರ್ಮ್‌ನಲ್ಲಿದ್ದಾರೆ. ಟೆಸ್ಟ್ ಪಂದ್ಯದ ಸೋಲಿನ ಬಳಿಕ ಪುರುಷ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರಿಂದ ಕೆಲ ಸಲಹೆ ಪಡೆದಿರುವುದಾಗಿ ತಿಳಿಸಿರುವ ಅಲಿಸಾ ಹೀಲಿ ಬಳಗ ತಿರುಗೇಟು ನೀಡುವ ವಿಶ್ವಾಸದಲ್ಲಿದೆ.

    ಶ್ರೇಯಾಂಕಾ ಪದಾರ್ಪಣೆ?
    ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗಿಟ್ಟಿಸಿಕೊಂಡಿದ್ದ ಕರ್ನಾಟಕದ ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ಚೊಚ್ಚಲ ಬಾರಿಗೆ ಏಕದಿನ ತಂಡ ಆಯ್ಕೆಯಾಗಿದ್ದು, ಪದಾರ್ಪಣೆ ಮಾಡುವ ನಿರೀಕ್ಷೆ ಇದೆ. ಜತೆಗೆ ಸೈಕಾ ಇಶಾಕ್, ಮನ್ನತ್ ಕಶ್ಯಪ್, ಟಿಟಾಸ್ ಸಾಧು ಮೊದಲ ಬಾರಿಗೆ ಏಕದಿನ ಸರಣಿಗೆ ಹೊಸಮುಖ ಎನಿಸಿದ್ದು, ಮುಂಬರುವ ಟಿ20 ವಿಶ್ವಕಪ್ ಹಾಗೂ 2025ರ ಏಕದಿನ ವಿಶ್ವಕಪ್‌ಗೆ ಪೂರ್ವಭಾವಿಯಾಗಿ ಭಾರತ ತಂಡ ಸಿದ್ಧತೆ ಆರಂಭಿಸಿದೆ.

    ಆರಂಭ: ಮಧ್ಯಾಹ್ನ 1.30
    ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts