More

    ತುಮರಿಕೊಪ್ಪದಲ್ಲಿ ನೊಣಗಳ ಕಾಟ

    ಕಲಘಟಗಿ: ಕಳೆದ ಒಂದು ವಾರದಿಂದ ತಾಲೂಕಿನ ತುಮರಿಕೊಪ್ಪ ಗ್ರಾಮದಲ್ಲಿ ನೊಣಗಳ ಕಾಟ ಹೆಚ್ಚಾಗಿದ್ದು, ಮನೆಯಲ್ಲಿ ಕುಳಿತುಕೊಳ್ಳಲು, ಊಟ ಮಾಡಲು ಹಿಂದೇಟು ಹಾಕುವ ಸ್ಥಿತಿ ಜತೆಗೆ ರೋಗಗಳ ಭೀತಿಯೂ ಕಾಡುತ್ತಿದೆ.

    ಗ್ರಾಮದ ನಿವಾಸಿ ಚಿನ್ನಪ್ಪ ಬುದ್ದನಿ ಎಂಬುವವರು ಗ್ರಾಮಕ್ಕೆ ಹೊಂದಿಕೊಂಡು ಅಂದಾಜು 200ರಿಂದ 300 ಮೀಟರ್ ಅಂತರದಲ್ಲಿ ಕೋಳಿ ಫಾಮ್ರ್ ಮಾಡಿದ್ದಾರೆ. ಸದ್ಯ ಈ ಫಾಮರ್್​ನಲ್ಲಿ ಕೋಳಿಗಳು ಇಲ್ಲದಿರುವ ಕಾರಣದಿಂದ ನೊಣಗಳು ಗ್ರಾಮಕ್ಕೆ ದಾಂಗುಡಿ ಇಟ್ಟಿವೆ. ಗ್ರಾಮದಿಂದ 1 ರಿಂದ 2 ಕಿಮೀ ಅಂತರದಲ್ಲಿ ಕೋಳಿ ಸಾಕಾಣಿಕೆ ಮಾಡಬೇಕೆಂಬ ನಿಯಮ ಇದೆ. ಆದರೆ, ಫಾಮ್ರ್ 500 ಮೀಟರ್ ಅಂತರದೊಳಗೆ ಇರುವುದರಿಂದ ಈ ಸಮಸ್ಯೆ ಇಲ್ಲಿ ಉಲ್ಬಣಗೊಂಡಿದೆ.

    ಗ್ರಾಮದ ಪ್ರತಿಯೊಂದು ಮನೆಯಲ್ಲಿಯೂ ನೊಣಗಳ ಹಾವಳಿ ಹೆಚ್ಚಾಗಿದೆ. ಅಡುಗೆ ಮನೆ, ಕುಡಿಯುವ ನೀರಿನ ಟಾಕಿ, ಊಟದ ತಟ್ಟೆ ಸೇರಿ ಎಲ್ಲೆಂದರಲ್ಲಿ ನೊಣ ಕುಳಿತುಕೊಳ್ಳುತ್ತಿವೆ. ಗ್ರಾಮಸ್ಥರೆಲ್ಲ ಮನೆಯ ಬಾಗಿಲು ಮುಚ್ಚಿಕೊಂಡು ಜೀವನ ನಡೆಸುವಂತಹ ಸ್ಥಿತಿ ನಿರ್ವಣವಾಗಿದೆ. ಇದರಿಂದ ಸಹಜವಾಗಿಯೇ ಗ್ರಾಮದ ಜನರಿಗೆ ರೋಗಗಳ ಭೀತಿ ಎದುರಾಗಿದೆ.

    ಕೋಳಿ ಫಾಮರ್್​ನಿಂದ ಗ್ರಾಮಸ್ಥರಿಗೆ ಸಾಕಷ್ಟು ತೊಂದರೆ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ರೋಗ ಭೀತಿ ಹೋಗಲಾಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಗ್ರಾಮದಲ್ಲಿ ನೊಣಗಳ ಕಾಟವಿರುವುದು ನಮ್ಮ ಗಮನಕ್ಕೆ ಬಂದಿದೆ. ಕೂಡಲೇ ತಾಲೂಕು ಆರೋಗ್ಯ ಅಧಿಕಾರಿ ಹಾಗೂ ಪಿಡಿಒ ಅವರ ನೇತೃತ್ವದಲ್ಲಿ ಗ್ರಾಮದಲ್ಲಿ ಔಷಧ ಸಿಂಪಡಿಸುವ ಮೂಲಕ ಸಮಸ್ಯೆ ಬಗೆಹರಿಸಲಾಗುವುದು.

    | ಚಂದ್ರು ಪೂಜಾರ

    ತಾಪಂ ಇಒ ಕಲಘಟಗಿ

    ಕೋಳಿ ಫಾಮರ್್​ನಲ್ಲಿ ಕೋಳಿಗಳು ಇಲ್ಲದಿರುವುದರಿಂದ ನೊಣಗಳ ಕಾಟ ತುಂಬಾ ಹೆಚ್ಚಾಗಿ ಗ್ರಾಮಸ್ಥರಿಗೆ ತೊಂದರೆ ಉಂಟಾಗುತ್ತಿದೆ. ಈ ಕುರಿತು ತಹಸೀಲ್ದಾರ್ ಗಮನಕ್ಕೂ ತಂದಿದ್ದೇವೆ. ಕೂಡಲೇ ಈ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ.

    | ನಾಗವ್ವ ಅಂಗಡಿ ಗ್ರಾಪಂ ಅಧ್ಯಕ್ಷೆ

    ಕಳೆದ ಒಂದು ವಾರದ ಹಿಂದೆ ಚಿನ್ನಪ್ಪ ಎಂಬುವವರ ಫಾಮ್ರ್ ನಲ್ಲಿರುವ ಕೋಳಿಗಳನ್ನು ತೆಗೆದಿರುವುದರಿಂದ ಅಲ್ಲಿದ್ದ ನೊಣಗಳೆಲ್ಲ ಗ್ರಾಮಕ್ಕೆ ಬಂದಿವೆ. ಕುಡಿಯುವ ನೀರು, ಅಡುಗೆ ಪಾತ್ರೆ ಸೇರಿದಂತೆ ಊಟದ ತಟ್ಟೆಯಲ್ಲೂ ಬಂದು ಬೀಳುತ್ತಿವೆ. ಇದರಿಂದ ನಮಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಕೂಡಲೇ ಇದಕ್ಕೆ ಸೂಕ್ತ ಪರಿಹಾರ ಒದಗಿಸಬೇಕು.

    | ಮಂಜಯ್ಯ ಹೆಬ್ಬಳ್ಳಿ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts