More

    ಬಿಡದಿ ತಲುಪಿದ ಮುತ್ತಪ್ಪ ರೈ ಪಾರ್ಥಿವ ಶರೀರ, ದಾರಿಯುದ್ದಕ್ಕೂ ಪುಷ್ಪನಮನ

    ರಾಮನಗರ (ಬಿಡದಿ): ಜಯಕರ್ನಾಟ ಸಂಘಟನೆ ಸಂಸ್ಥಾಪಕ, ಭೂಗತ ಲೋಕದ ಮಾಜಿ ಡಾನ್​ ಮುತ್ತಪ್ಪ ರೈ ಪಾರ್ಥಿವ ಶರೀರ ಹೊತ್ತು ಸಾಗುತ್ತಿದ್ದ ವಾಹನಕ್ಕೆ ಅವರ ಅಭಿಮಾನಿಗಳು ದಾರಿಯುದ್ದಕ್ಕೂ ಪುಷ್ಪನಮನ ಸಲ್ಲಿಸಿದರು.

    ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಯಲ್ಲಿ ಶುಕ್ರವಾರ ನಸುಕಿನ 2 ಗಂಟೆ ಸುಮಾರಿನಲ್ಲಿ ಮುತ್ತಪ್ಪ ರೈ ಮೃತಪಟ್ಟಿದ್ದರು. ಅವರ ಪಾರ್ಥಿವ ಶರೀರದೊಂದಿಗೆ ಬೆಳಗ್ಗೆ 11.20ರ ಸುಮಾರಿಗೆ ಆಸ್ಪತ್ರೆಯಿಂದ ಹೊರಟ ವಾಹನ ಮಧ್ಯಾಹ್ನ 2.15ಕ್ಕೆ ಬಿಡದಿ ಪ್ರವೇಶಿಸಿತು. ಬರುವ ಮಾರ್ಗ ಮಧ್ಯೆ ರಸ್ತೆಯುದ್ದಕ್ಕೂ ರೈ ಅಭಿಮಾನಿಗಳು, ಜಯಕರ್ನಾಟಕ ಸಂಘಟನೆ ಪದಾಧಿಕಾರಿಗಳು ಪಾರ್ಥಿವ ಶರೀರವಿದ್ದ ವಾಹನಕ್ಕೆ ಹೂವು ಎರಚಿ ನಮಿಸಿದರು.

    ಇದನ್ನೂ ಓದಿರಿ ಭೂಗತ ಲೋಕದ ಮಾಜಿ ಡಾನ್​​ಗೆ ಮರುಜನ್ಮ ನೀಡಿದ ಬಿಡದಿ

    ಕರೊನಾ ಲಾಕ್​ಡೌನ್​ ಪರಿಣಾಮ ಮೃತರ ಕುಟುಂಬಸ್ಥರು ಸೇರಿ 25 ಮಂದಿಗಷ್ಟೇ ಅಂತಿಮ ಕಾರ್ಯದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಹಾಗಾಗಿ ಮುತ್ತಪ್ಪ ರೈ ಅಂತಿಮ ಯಾತ್ರೆ ನಡೆಸಿದ ವಾಹನದ ಮೇಲೆ ಅವರ ಬೆಂಬಲಿಗರು ಹೂವು ಹಾಕಿ ಅಭಿಮಾನ ಮೆರೆದರು. ಇನ್ನು ಬಿಡದಿಯ ಹೆದ್ದಾರಿ ಮೇಲ್ಸೇತುವೆ ಮೇಲೆ ಹತ್ತಾರು ಬುಟ್ಟಿಯಲ್ಲಿ ಹೂ ತುಂಬಿಕೊಂಡು ಕಾಯುತ್ತಿದ್ದ ಜಯಕರ್ನಾಟಕ ಸಂಘಟನೆಯ ಸ್ಥಳೀಯ ಪದಾಧಿಕಾರಿಗಳು ಆಂಬುಲೆನ್ಸ್​ ಬರುತ್ತಿದ್ದಂತೆ ಹೂವು ಸುರಿದು ಬೀಳ್ಕೊಟ್ಟರು.

    ಸ್ಥಳದಲ್ಲೇ ಕಾಯುತ್ತಿದ್ದ ಸಂಸದ ಡಿ.ಕೆ.ಸುರೇಶ್​, ಎಂಎಲ್ಸಿಗಳಾದ ಎಸ್. ರವಿ, ಲಿಂಗಪ್ಪ, ಮಾಗಡಿ ಮಾಜಿ ಶಾಸಕ ಬಾಲಕೃಷ್ಣ, ಬ್ಯಾಟಪ್ಪ ಅವರು ವಾಹನದಲ್ಲೇ ಮುತ್ತಪ್ಪರ ಅಂತಿಮ ದರ್ಶನ ಪಡೆದರು. ಮುತ್ತಪ್ಪ ರೈರ ನೆಚ್ಚಿನ ಸ್ಥಳ ಬಿಡದಿ ಸ್ವಗೃಹದ ಆವರಣದಲ್ಲಿ ಹಿಂದು ಸಂಪ್ರದಾಯದಂತೆ ಅವರ ಅಂತಿಮ ವಿಧಿವಿಧಾನ ನಡೆಸಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದು, ಸಂಜೆ 4ಕ್ಕೆ ಕಾರ್ಯ ನೆರವೇರಲಿದೆ.

    ಇದನ್ನೂ ಓದಿರಿ VIDEO| ಪತ್ನಿಯ ನೆನೆದು ಕಣ್ಣೀರಿಟ್ಟಿದ್ರೂ ಮುತ್ತಪ್ಪ ರೈ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts