More

    ಹೂವಿನ ಹಿಂದಿನ ರೋಚಕ ಕಥೆಯಿದು.. ಕಾಲಕ್ಕೆ ತಕ್ಕಂತೆ ಬದಲಾಗುತ್ತೆ ಸಸ್ಯಗಳ ಯೋಚನೆ!

    ಮುಂದುವರಿದ ಭಾಗ..

    ಹೂವಿನ ಹಿಂದಿನ ರೋಚಕ ಕಥೆಯಿದು.. ಕಾಲಕ್ಕೆ ತಕ್ಕಂತೆ ಬದಲಾಗುತ್ತೆ ಸಸ್ಯಗಳ ಯೋಚನೆ!ಸಸ್ಯಗಳು ಅಭಿವೃದ್ಧಿ ಹೊಂದುತ್ತಾ ಯಾವ ಕೀಟಕ್ಕೆ ಯಾವ ವಾಸನೆ ಇಷ್ಟ, ಯಾವ ಬಣ್ಣ ಇಷ್ಟ ಎನ್ನುವುದನ್ನು ಹಲವು ಪ್ರಯೋಗಗಳನ್ನು ಮಾಡಿ ತಿಳಿದು, ತಮ್ಮ ವಿಶಿಷ್ಟವಾದ ಹಾರ್ಮೋನ್‌ಗಳನ್ನು ವೃದ್ಧಿಮಾಡಿಕೊಂಡು, ಅವುಗಳ ಮುಖಾಂತರ ತರತರವಾದ ಬಣ್ಣಗಳು ವಾಸನೆಯುಳ್ಳ ಹೂವುಗಳಿಗೆ ಜನ್ಮ ನೀಡಿ, ಹೂವು ಪರಾಗಣವಾಗಲು ಕೀಟಗಳು ಮತ್ತು ಪಕ್ಷಿಗಳನ್ನು ಆಕರ್ಷಿಸಲಾರಂಭಿಸಿದವು. ಅವುಗಳಿಗೆ ಅಗತ್ಯವಿರುವ ಪರಾಗವನ್ನು ಕೊಟ್ಟವು.


    ಆದರೆ ಹೂವಿಗೆ ಕೀಟ ಮತ್ತು ಪಕ್ಷಿಗಳು ಬಂದು ಕುಳಿತಾಗ ಹೂವಿನ ದಳಗಳು ಅವುಗಳ ತೂಕವನ್ನು ತಾಳಲಾರದೆ ಉದುರಿಹೋಗುತ್ತಿದ್ದವು, ಗಾಳಿಯ ರಭಸಕ್ಕೆ ಬಿದ್ದುಹೋಗುತ್ತಿದ್ದವು, ಮಳೆ ಹನಿಯ ಹೊಡೆತವನ್ನು ಸಹಿಸಲಾದವು. ನೀರಿನಿಂದ ಬ್ರೂಣವು ಕರಗಿಹೋಗುತ್ತಿತ್ತು, ಬೀಜವು ಗಟ್ಟಿಯಾಗಿ ನಿಲ್ಲದೆ ಸತ್ತುಹೋಗುತ್ತಿತ್ತು ಆದ್ದರಿಂದ ಸಂತಾನಾಭಿವೃದ್ಧಿಗೆ ತೊಂದರೆಯಾಗುತ್ತಿತ್ತು.


    ಈ ಕಷ್ಟವನ್ನು ಅರಿತ ಸಸ್ಯಗಳು, ಹೂವಿನ ದಳ ಮತ್ತು ಬ್ರೂಣದ ರಕ್ಷಣೆಗಾಗಿ, ಹಲವು ತಲೆಮಾರುಗಳ ಪ್ರಯೋಗದಲ್ಲಿ ಹಂತ ಹಂತವಾಗಿ ಪುಷ್ಪಪಾತ್ರೆಯನ್ನು (ಸೆಪೆಲ್) ಸೃಷ್ಟಿಮಾಡಿಕೊಂಡವು. ಇದು ಸಸ್ಯಗಳಲ್ಲಿ ಇನ್ನೊಂದು ಅತಿ ದೊಡ್ಡ ಆವಿಷ್ಕಾರವಾಯಿತು. ಪುಷ್ಪಪಾತ್ರೆಯ ಸೃಷ್ಟಿಯ ನಂತರ ಇವುಗಳ ವಿಕಾಸ ಬಹಳ ವೇಗವಾಗಿ ಬೆಳೆಯಿತು. ಹಲವಾರು ಬಗೆಯ ಪರಾಗಸ್ಪರ್ಶಕಗಳು ವಿಕಾಸಗೊಂಡವು. ಪರಾಗಸ್ಪರ್ಶಕಗಳ ಅಭಿರುಚಿಗೆ ತಕ್ಕಂತೆ ಹೂವುಗಳಲ್ಲಿ ವಿವಿಧ ರೀತಿಯ ಬಣ್ಣ ಮತ್ತು ವಾಸನೆಯನ್ನು ವೃದ್ಧಿಗೊಳಿಸಿದವು.


    ಹೀಗೆ ಪ್ರತಿಹಂತದಲ್ಲಿಯೂ ಕೂಡ ನಾನಾ ತರದ ಅಭಿವೃದ್ಧಿಯನ್ನು ಮಾಡಿಕೊಂಡು, ಮುಂದಿನ ಸಂತತಿಯಲ್ಲಿ ತನ್ನ ಹಾರ್ಮೋನ್‌ಗಳಲ್ಲಿ ಮತ್ತು ಅಂಗಾಂಗಗಳಲ್ಲಿ ಬದಲಾವಣೆ ಮಾಡಿಕೊಂಡು ಸಸ್ಯಗಳು ವಿಕಾಸಗೊಂಡು ಬೆಳೆದಿವೆ. ಈಗ ನಾವು ತಿನ್ನುವ ಸೇಬು ಹಣ್ಣು, ಈಗಿನ ಸ್ಥಿತಿಗೆ ಬರುವುದರೊಳಗೆ, ಹಲವಾರು ಬಗೆಯ ರುಚಿ, ಬಣ್ಣ, ಗಾತ್ರಗಳನ್ನು ಬದಲಾವಣೆ ಮಾಡಿಕೊಂಡು ಇಂದಿನ ಸ್ಥಿತಿಗೆ ಬಂದಿದೆ. ಇದೇ ರೀತಿ ಈಗಲೂ ಕೂಡ ಪ್ರತಿ ಸಂತತಿಯಲ್ಲಿ ಬದಲಾವಣೆ ನಡೆಯುತ್ತಲೇ ಇದೆ, ಇನ್ನು ಮುಂದಿನ ಪೀಳಿಗೆಯಲ್ಲಿಯೂ ಬದಲಾವಣೆ ನಡೆಯುತ್ತಲೇ ಇರುತ್ತದೆ.

    ಹೂವಿನಲ್ಲೂ ಇತ್ತು ಗಂಡು ಹೆಣ್ಣೆಂಬ ಲಿಂಗ! ಹೂವು ಹುಟ್ಟೋದರ ಹಿಂದಿನ ಕಥೆಯಿದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts