ಹೂವಿನಹಡಗಲಿ- ಹರಪನಹಳ್ಳಿ ಹೆದ್ದಾರಿಗೆ ಗ್ರಹಣ

blank

ಮುಂಡರಗಿ: ಪಟ್ಟಣದ ಹೆದ್ದಾರಿ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಸಾರ್ವಜನಿಕರು ಮತು ್ತಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ. ಕಾಮಗಾರಿ ಸ್ಥಗಿತಗೊಂಡು ಮೂರು ವರ್ಷ ಕಳೆದರೂ ಈವರೆಗೂ ಪೂರ್ಣಗೊಂಡಿಲ್ಲ.

ರಾಜ್ಯ ರಸ್ತೆ ಅಭಿವೃದ್ಧಿ ನಿಗಮವು (ಕೆಆರ್​ಡಿಸಿಎಲ್) 2016ರ ಸೆಪ್ಟೆಂಬರ್​ನಲ್ಲಿ 205 ಕೋಟಿ ರೂಪಾಯಿ ವೆಚ್ಚದಲ್ಲಿ ಹೂವಿನಹಡಗಲಿ ಮಾರ್ಗವಾಗಿ ಮುಂಡರಗಿ-ಹರಪನಹಳ್ಳಿ ಹೆದ್ದಾರಿ ಕಾಮಗಾರಿ ಪ್ರಾರಂಭಿಸಿತ್ತು. ಕಾಮಗಾರಿ ಗುತ್ತಿಗೆ ಪಡೆದಿದ್ದ ಡಿಬಿಎಲ್ ಟೋಲ್ ವೇಜ್ ಲಿಮಿಟೆಡ್ ಕಂಪನಿಯವರು 2 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಆದರೆ, ಅವಧಿ ಮುಗಿದು ಮೂರು ವರ್ಷ ಕಳೆದರೂ ಪಟ್ಟಣದ ಹೆಸರೂರ ಸರ್ಕಲ್​ನಿಂದ ಕೆಇಬಿವರೆಗಿನ 500 ಮೀಟರ್ ರಸ್ತೆ ವಿಭಜಕ, ಚರಂಡಿ, ಫುಟ್​ಪಾತ್ ನಿರ್ವಣದಂತಹ ಕಾಮಗಾರಿಗಳನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ.

ಹೆದ್ದಾರಿ ಕಿರಿದಾಗಿರುವುದರಿಂದ 1.5 ಮೀಟರ್ ವಿಭಜಕ ಬದಲಿಗೆ 0. 75 ಮೀಟರ್ ರಸ್ತೆ ವಿಭಜಕ ನಿರ್ವಿುಸಿ ಎಂದು ಆಗಿನ ಪುರಸಭೆ ಆಡಳಿತ ಕಮಿಟಿಯು ನಿಗಮದ ಅಧಿಕಾರಿಗಳಿಗೆ ಸೂಚಿಸಿತ್ತು. ಆದರೆ, ಅದನ್ನು ಪರಿಗಣಿಸದೆ 1.5 ಮೀಟರ್ ವಿಭಜಕ ನಿರ್ವಿುಸಿದ್ದರು. ಬಳಿಕ ರಸ್ತೆ ವಿಭಜಕ ಅವೈಜ್ಞಾನಿಕ ಮತ್ತು ಕಳಪೆಯಾಗಿವೆ ಎಂದು ಆರೋಪಿಸಿ ಪುರಸಭೆ ಕಮಿಟಿ ವಿರೋಧಿಸಿತ್ತು. ನಂತರ ವಿಭಜಕ ನಾಶ ಮಾಡಲಾಗಿತ್ತು.

ಹೆದ್ದಾರಿ ಮಧ್ಯದಲ್ಲಿ ವಿಭಜಕ ನಿರ್ವಿುಸದ ಹಿನ್ನೆಲೆಯಲ್ಲಿ ವಾಹನ ಸವಾರರು ಎಲ್ಲೆಂದರಲ್ಲಿ ತಮ್ಮ ವಾಹನಗಳನ್ನು ಕ್ರಾಸ್ ಮಾಡುತ್ತಾರೆ. ಇದರಿಂದಾಗಿ ಅನಾಹುತಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಪಾದಚಾರಿಗಳು ರಸ್ತೆ ದಾಟಲು ತೊಂದರೆ ಅನುಭವಿಸುತ್ತಿದ್ದಾರೆ. ಆದಷ್ಟು ಬೇಗ ವಿಭಜಕ ನಿರ್ವಿುಸುವ ಅಗತ್ಯವಿದೆ. ಹೆದ್ದಾರಿ ಬದಿಯ ಚರಂಡಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಹೆದ್ದಾರಿ ಅಕ್ಕಪಕ್ಕದಲ್ಲಿರುವ ಆಯಾ ಭಾಗದ ಓಣಿಗಳಿಂದ ಬರುವ ಕಿರು ಚರಂಡಿಯ ಗಲೀಜು ನೀರು ಒಂದೆಡೆ ನಿಂತು ದುರ್ನಾತ ಬೀರುತ್ತಿದೆ. ಮಳೆಗಾಲದಲ್ಲಂತೂ ಮಳೆ ನೀರು ಚರಂಡಿಯಲ್ಲಿ ಹರಿದು ಹೋಗದೆ ರಸ್ತೆ ಮೇಲೆ ನಿಂತು ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಇನ್ನಾದರೂ ಕಾಮಗಾರಿ ಪೂರ್ಣಗೊಳಿಸಿ ಪಟ್ಟಣದ ಅಂದ ಹೆಚ್ಚಿಸಬೇಕು. ಅಲ್ಲದೆ, ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.

ಹೆಸರೂರು ಸರ್ಕಲ್​ನಿಂದ ಕೆಇಬಿವರೆಗೆ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಜನರಿಗೆ ಬಹಳ ಕಿರಿಕಿರಿಯಾಗಿದೆ. ವಿಭಜಕ ನಿರ್ವಿುಸದ್ದರಿಂದ ರಸ್ತೆಯ ಅಂದ ಹದಗೆಟ್ಟಿದೆ. ಸುಗಮ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ. ಚರಂಡಿಯ ಗಲೀಜು ನೀರು ಒಂದೆಡೆಗೆ ನಿಂತು ದುರ್ನಾತ ಬೀರುತ್ತಿದೆ. ಆದಷ್ಟು ಬೇಗ ಅಪೂರ್ಣಗೊಂಡಿರುವ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು.

| ಗಿರೀಶ ಶೀರಿ, ಸ್ಥಳೀಯ

ಮುಂದಿನ ವಾರದಲ್ಲಿ ಹೆಸರೂರು ಸರ್ಕಲ್​ನಿಂದ ಕೆಇಬಿವರೆಗೆ ಬಾಕಿ ಉಳಿದಿರುವ ಕಾಮಗಾರಿ ಕುರಿತಂತೆ ಪುರಸಭೆ ಮುಖ್ಯಾಧಿಕಾರಿ ಜತೆ ಸಭೆ ನಡೆಸಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು.

| ಜಯರಾಮರೆಡ್ಡಿ ಎಇಇ, ಕೆಆರ್​ಡಿಸಿಎಲ್ ವಿಜಯನಗರ

Share This Article

ಹುಡುಗಿಯ ಹೃದಯವನ್ನು ಗೆಲ್ಲುವುದು ಹೇಗೆ..? Chanakya Niti

Chanakya Niti: ಈಗಿನ ಯಾವ ಹುಡುಗಿಯೂ ಹುಡುಗನ ಪ್ರೀತಿಯನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಚಾಣಕ್ಯನು ಪುರುಷನು…

ಕಂಕುಳಿನ ದುರ್ವಾಸನೆಯಿಂದ ಬೇಕಾ ಮುಕ್ತಿ? ಹಾಗಾದ್ರೆ ಈ ಸಿಂಪಲ್ ಟಿಪ್​ ಅನುಸರಿಸಿ, ಆಮೇಲೆ ನೋಡಿ ಚಮತ್ಕಾರ!

Bad Odour: ವಿಪರೀತ ಬೆವರುವುದು ಇಂದು ಅನೇಕರ ಸಮಸ್ಯೆ. ಪ್ರತಿಯೊಬ್ಬರು ಬೆವರುತ್ತಾರೆ. ಆದರೆ, ಎಲ್ಲರೂ ಬೆವರುವ…

ನೋ ಜಿಮ್​, ನೋ ಡಯಟ್​… ಬರೋಬ್ಬರಿ 20 KG ತೂಕ ಇಳಿಕೆ, ಯುವತಿಯ ಆರೋಗ್ಯದ ಗುಟ್ಟು ರಟ್ಟು! Weight Loss

Weight Loss : ಇತ್ತೀಚೆಗೆ ತೂಕ ಇಳಿಕೆ ತುಂಬಾ ಸುಲಭವಾಗಿದೆ. ಏಕೆಂದರೆ, ತೂಕ ಇಳಿಕೆಗೆ ಹಲವು…