More

    ದೈವಾರಾಧನೆಯಲ್ಲಿ ಕೇಪುಳ ಹೂವಿಗೆ ಮೇಲ್ಪಂಕ್ತಿ

    ಉಳ್ಳಾಲ: ತುಳುನಾಡಿನ ದೈವಗಳಿಗೆ ಕಾಡ ಕೇಪುಲ, ತೋಡ ನೀರು, ತೋಟದ ಪಾಲೆ ಪ್ರಾಮುಖ್ಯವಾಗಿದ್ದು, ಅನಾದಿಕಾಲದಿಂದಲೂ ತುಳುನಾಡಿನ ದೈವಾರಾಧನೆಯಲ್ಲಿ ಮೇಲ್ಪಂಕ್ತಿಯಲ್ಲಿರುವ ಕೇಪುಲ ಹೂವುಗಳು ಇಲ್ಲದೆ ದೈವ ಕಾರ್ಯ ಅಸಾಧ್ಯ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಅಭಿಪ್ರಾಯಪಟ್ಟರು.
    ಬಂಡಿಕೊಟ್ಯದ ಮಲರಾಯ ದೈವಸ್ಥಾನದಲ್ಲಿ ತೊಕ್ಕೊಟ್ಟಿನ ಸಾಯಿ ಪರಿವಾರ ಟ್ರಸ್ಟ್ ವತಿಯಿಂದ ಕೇಪುಲ ಹೂವಿನ ತೋಟಕ್ಕೆ ಚಾಲನೆ ನೀಡಿ ಮಾತನಾಡಿದರು.
    ಇಂದು ಆಧುನೀಕರಣದ ಭರದಲ್ಲಿ ಕಾಂಕ್ರೀಟ್ ಕಟ್ಟಡಗಳು ನಿರ್ಮಾಣಗೊಂಡು ಕೇಪುಲ ಹೂವಿನ ಗಿಡಗಳು ಅಳಿವಿನಂಚಿಗೆ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪವಿತ್ರ ಗಿಡವನ್ನು ದೈವಸ್ಥಾನಗಳಲ್ಲಿ ನೆಡುವ ಮೂಲಕ ಸಂಘಟನೆ ದೈವಪ್ರಿಯವಾದ ಕೆಲಸ ಮಾಡಿದೆ ಎಂದರು.
    ಬಿಜೆಪಿ ಮಂಗಳೂರು ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್‌ಹೌಸ್, ಪರಿಸರವಾದಿ ಮಾಧವ ಉಳ್ಳಾಲ್, ಓವರ್‌ಬ್ರಿಡ್ಜ್ ಕೊರಗಜ್ಜ ಸೇವಾ ಸಮಿತಿ ಸ್ಥಾಪಕ ರಾಜ್ ಕಾಪಿಕಾಡ್, ಬಿಜೆಪಿ ಮಂಡಲ ಉಪಾಧ್ಯಕ್ಷ ಯಶವಂತ ಅಮೀನ್, ಮಾಜಿ ಕೌನ್ಸೆಲರ್ ದಯಾನಂದ ತೊಕ್ಕೊಟ್ಟು, ಬಂಡಿಕೊಟ್ಯ ಮಲರಾದ ದೈವಸ್ಥಾನದ ಮುಂಡ ಯಾನೆ ಲತೀಶ್ ಪೂಜಾರಿ, ಗೋಪಾಲ ಯು.ಕೆ ಉಳ್ಳಾಲ, ದೇವಕಿ ಆರ್.ಉಳ್ಳಾಲ, ಉದಯ ಆರ್.ಕೆ., ಗಣೇಶ್ ಪೂಜಾರಿ, ಹರ್ಷರಾಜ್ ಕುಂಪಲ, ಹರ್ಷವರ್ದನ, ಮೋಹಿತ್ ಉಳ್ಳಾಲ, ಸುನಿತ್ ಬಂಡಿಕೊಟ್ಯ, ಸಾಗರ್ ಬಂಡಿಕೊಟ್ಯ, ಪ್ರಶಾಂತ್ ಸುವರ್ಣ, ಉಳ್ಳಾಲ ಕೊರಗಜ್ಜ ಸೇವಾ ಸಮಿತಿಯ ಲತೀಶ್ ಕೊಟ್ಟಾರ, ಶಾನ್ ಉಳ್ಳಾಲ, ಸಾಯಿ ಪರಿವಾರ ಟ್ರಸ್ಟ್ನ ಪ್ರವೀಣ್ ಎಸ್.ಕುಂಪಲ, ಪುರುಷೋತ್ತಮ ಕಲ್ಲಾಪು, ಗಣೇಶ್ ಅಂಚನ್, ಗಣೇಶ್ ಪಂಡಿತ್ ಮುಳಿಹಿತ್ಲು, ದೀಕ್ಷಿತ್ ಪೂಜಾರಿ, ಸಂಪತ್ ಧರ್ಮನಗರ, ಸೂರ್ಯ ಕುಂಪಲ, ಸಂಪತ್ ಪಿಲಾರ್, ಕೌಶಿಕ್ ಸೇವಂತಿಗುಡ್ಡೆ, ಶೈಲೇಶ್ ಸೇವಂತಿಗುಡ್ಡೆ, ಶವಿತ್ ಉಚ್ಚಿಲ, ಸಂತೋಷ್ ಅಂಬ್ಲಮೊಗರು, ಕುಶಾಲ್‌ರಾಜ್ ಮೊದಲಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts