More

    ಲಾಕ್​ಡೌನ್​ನಿಂದ ಮನೆ ಸೇರಿರುವವರನ್ನು ರಂಜಿಸಲು ಫ್ಲೋರಿಡಾದ ಮಹಿಳೆ ಮಾಡಿದ್ದು ಏನು?

    ಫ್ಲೋರಿಡಾ: ಕರೊನಾ ವೈರಸ್​ ದಾಳಿ ಹಿನ್ನೆಲೆಯಲ್ಲಿ ಮನೆಯಲ್ಲಿ ಇರುವವರನ್ನು ಸಂತೋಷಪಡಿಸಲು ಮಹಿಳೆ ಪೌರಾಣಿಕದಲ್ಲಿ ಚಿತ್ರಿತವಾಗಿರುವ ಯುನಿಕಾರ್ನ್​ (ಕುದುರೆ ರೀತಿಯ ಪ್ರಾಣಿ) ವೇಷ ತೊಟ್ಟು ಬೀದಿಗಳಲ್ಲಿ ಸಂಚರಿಸಿದ್ದಾರೆ.

    40 ವರ್ಷದ ಮಹಿಳೆ ಕೋರೆ ಜುರ್ಗೆನ್ಸನ್, ಯುನಿಕಾರ್ನ್​ ವೇಷ ತೊಟ್ಟು ಮನೆ ಸಮೀಪದ ಬೀದಿಗಳಲ್ಲಿ ಸಂಚರಿಸಿ ಕುಣಿಯುತ್ತಾ, ಹಾಡುತ್ತಾ ಎಲ್ಲರನ್ನೂ ರಂಜಿಸಿದರು. ಮನೆಯಲ್ಲಿದ್ದವರು ಬಾಲ್ಕನಿಗೆ ಬಂದು ಮಹಿಳೆಯ ವೇಷ ನೋಡಿ ಸಂತೋಷಪಟ್ಟರು.

    ವಾಷಿಂಗ್​ಟನ್​ನಲ್ಲಿರುವ ಮಹಿಳೆಯ ಸ್ನೇಹಿತನೊಬ್ಬ ಪ್ರಾಣಿಯೊಂದರ ವೇಷ ತೊಟ್ಟು ರಸ್ತೆಯಲ್ಲಿ ಸಂಚರಿಸಿ ಜನರನ್ನು ಸಂತೋಪಪಡಿಸಿದ್ದ. ಈ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿ ಕೋರೆ ಜುರ್ಗೆನ್ಸನ್ ಅವರಿಗೆ ನೀವು ಈ ರೀತಿ ಮಾಡಿ ಜನರನ್ನು ರಂಜಿಸುತ್ತೀರಾ ಎಂದು ಸವಾಲು ಹಾಕಿದ್ದ. ಈ ಸವಾಲನ್ನು ಸ್ವೀಕರಿಸಿದ ಮಹಿಳೆ ಯುನಿಕಾರ್ನ್​ ವೇಷ ತೊಟ್ಟು ಜನರನ್ನು ರಂಜಿಸಿದ್ದಾರೆ.

    ಮಹಿಳೆ ಬೀದಿಯಲ್ಲಿ ಸಂಚರಿಸುವಾಗ ವಾಹನಗಳಲ್ಲಿ ತೆರಳುತ್ತಿದ್ದವರು ಆಕೆಗೆ ಚಪ್ಪಾಳೆ ತಟ್ಟಿ ಗೌರವ ಕೂಡ ಸಲ್ಲಿಸಿದ್ದಾರೆ. (ಏಜೆನ್ಸೀಸ್​)

    ನಯನತಾರಾಗೂ ಹಲವರ ಜತೆ ಸಂಬಂಧ ಇದೆ … ಕಾಲೆಳೆದವರ ಬಾಯ್ಮುಚ್ಚಿಸಿದ ಶ್ರೀರೆಡ್ಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts