More

    ಮಲೆನಾಡಿನಲ್ಲಿ ಪ್ರವಾಹ ಪರಿಸ್ಥಿತಿ: ಅಡಿಕೆ,ಭತ್ತದ ಗದ್ದೆಗಳಿಗೆ ನುಗ್ಗಿದ ನೀರು

    ಉತ್ತರ ಕನ್ನಡ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದ್ದು, ಶಿರಸಿ, ಸಿದ್ದಾಪುರ ಭಾಗದಲ್ಲಿ ಹೆಚ್ಚಿದ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.

    ಭಾರೀ ಮಳೆಯಿಂದಾಗಿ ವರದಾ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ಉಕ್ಕಿ ಹರಿಯುತ್ತಿರುವ ನದಿ ನೀರು ಅಡಿಕೆ, ಅನಾನಸ್​ ತೋಟ, ಭತ್ತದ ಗದ್ದೆಗಳಿಗೆ ನುಗ್ಗಿದ್ದು, ಭಾರೀ ಪ್ರಮಾಣದ ಬೆಳೆ ಹಾನಿಗೀಡಾಗುವ ಸ್ಥಿತಿಯಲ್ಲಿದ್ದು ರೈತರ ಸ್ಥಿತಿ ಹೇಳತೀರದಂತಾಗಿದೆ.

    ಶಿರಸಿ ತಾಲೂಕಿನ ಬನವಾಸಿಯ ಬಾಸಿಮ ಮೊಗಳ್ಳಿ ಗ್ರಾಮಗಳಿಗೆ ನದಿ ನೀರು ನುಗ್ಗಿದ್ದು, ಸುಮಾರು 400 ಎಕರೆಗೂ ಅಧಿಕ ಪ್ರದೇಶಗಳು ಜಲಾವೃತಗೊಂಡಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ ವರದಾ ನದಿ ತುಂಬಿ ಹರಿಯುತ್ತಿದ್ದು, ಬನವಾಸಿ ಭಾಗದಲ್ಲಿ ಪ್ರವಾಹ ಭೀತಿ ಎದುರಾಗಿದೆ. (ದಿಗ್ವಿಜಯ ನ್ಯೂಸ್)

    ಮಕ್ಕಳು ಬೆಳಗ್ಗೆ 7 ಗಂಟೆಗೇ ಶಾಲೆಗೆ ಹೋಗುವುದಾದರೆ, ವಕೀಲರು, ನ್ಯಾಯಾಧೀಶರು ಏಕೆ ಬೇಗ ಬರಲು ಸಾಧ್ಯವಿಲ್ಲ: ನ್ಯಾ.ಲಲಿತ್​

    ಖ್ಯಾತ ನಟ ಹಾಗೂ ನಿರ್ದೇಶಕ ಪ್ರತಾಪ್​ ಪೋಥೆನ್​ ನಿಗೂಢ ಸಾವು: ಅಪಾರ್ಟ್​​ಮೆಂಟ್​ನಲ್ಲಿ ಶವವಾಗಿ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts