More

    ಪ್ರವಾಹ ಎದುರಿಸಲು ಸಮನ್ವಯ ಸಮಿತಿ – ರಮೇಶ ಜಾರಕಿಹೊಳಿ

    ಬೋರಗಾಂವ: ಕಳೆದ ವರ್ಷ ಆಗಿದ್ದ ತಪ್ಪು ಸರಿಪಡಿಸಲು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವೆ ಸಮನ್ವಯ ಸಮಿತಿ ರಚನೆ ಮಾಡಲಾಗಿದೆ ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು. ಮಹಾರಾಷ್ಟ್ರ ಸಚಿವ ರಾಜೇಂದ್ರ ಪಾಟೀಲ ಹಾಗೂ ಜಿಲ್ಲೆಯ ಪ್ರಮುಖ ಅಧಿಕಾರಿಗಳೊಂದಿಗೆ ಇಚಲಕರಂಜಿ ಬಳಿ ಪಂಚಗಂಗಾ ನದಿ ಹರಿವು ವೀಕ್ಷಿಸಿದ ಬಳಿಕ ಮಾತನಾಡಿದರು.

    ಕಳೆದ ತಿಂಗಳು ಮುಂಬೈಯಲ್ಲಿ ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ಜಯಂತ ಪಾಟೀಲ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿತ್ತು. ಪ್ರವಾಹ ಎದುರಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಮನ್ವಯ ಸಮಿತಿ ರಚನೆ ಮಾಡಲಾಗಿದೆ. ಉಭಯ ರಾಜ್ಯಗಳಿಗೆ ಈ ವರ್ಷ ಪ್ರವಾಹ ಭೀತಿ ಕಡಿಮೆ ಇದೆ. ಕೊಲ್ಲಾಪುರ ಹಾಗೂ ಸಾಂಗ್ಲಿ ಜಿಲ್ಲಾಧಿಕಾರಿಗಳ ಜತೆ ಸತತ ಸಂಪರ್ಕದಲ್ಲಿದ್ದು, ಮಾಹಿತಿ ಪಡೆಯಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

    ಮಹಾರಾಷ್ಟ್ರ ಸಚಿವ ರಾಜೇಂದ್ರ ಪಾಟೀಲ ಮಾತನಾಡಿದರು. ಉತ್ತಮ ಪಾಟೀಲ, ಅಭಿನಂದನ ಪಾಟೀಲ, ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಹಾಗೂ ಪ್ರಮುಖ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts