More

    ನದಿಯ ಮೇಲೆ ಬೋಟ್​ಗಳಲ್ಲಿ ಕುಳಿತು ಸಿನಿಮಾ ನೋಡಿ; ಉಚಿತ ಪ್ರವೇಶ…!

    ಮಾಲ್​ಗಳು ಓಪನ್​ ಆಗಿದ್ದರೂ, ದೇಶಾದ್ಯಂತ ಮಾತ್ರವಲ್ಲ, ಜಗತ್ತಿನ ಎಲ್ಲಿಯೂ ಕೂಡ ಚಿತ್ರಮಂದಿರಗಳ ಆರಂಭಕ್ಕೆ ಅವಕಾಶ ನೀಡಲಾಗಿಲ್ಲ. ಹೀಗಾಗಿ ಓಟಿಟಿಯಲ್ಲಿಯೇ ಚಿತ್ರಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಇದು ಚಿತ್ರಮಂದಿರಗಳ ಆಕರ್ಷಣೆಯನ್ನೇ ಕುಗ್ಗಿಸಲಿದೆ ಎಂಬ ಆತಂಕ ಥಿಯೇಟರ್​ಗಳ ಮಾಲೀಕರದ್ದು.

    ಇನ್ನೊಂದೆಡೆ, ಅಮೆರಿಕದಲ್ಲಿ ಡ್ರೈವ್​-ಇನ್​ ಚಿತ್ರಮಂದಿರಗಳ ಕಲ್ಪನೆಗೆ ಮತ್ತೆ ಚಾಲನೆ ಸಿಕ್ಕಿದೆ. ಪಾರ್ಕಿಂಗ್​ ತಾಣದಲ್ಲಿ ಬೃಹತ್​ ಪರದೆಗಳ ಮೇಲೆ ಸಿನಿಮಾ ಪ್ರದರ್ಶಿಸಿದರೆ, ಜನರು ತಮ್ಮ ವಾಹನಗಳಲ್ಲಿಯೇ ಕುಳಿತು ಪಿಕ್ಚರ್​ ನೋಡಬಹುದು.

    ಇದನ್ನೂ ಓದಿ; ಬಯಲು ಚಿತ್ರಮಂದಿರಗಳಾಗುತ್ತಿವೆ ಸೂಪರ್​ ಮಾರ್ಕೆಟ್​ನ ಪಾರ್ಕಿಂಗ್​ ತಾಣಗಳು

    ಇನ್ನೊಂದೆಡೆ, ಫ್ರಾನ್ಸ್​ ಲಾಕ್​ಡೌನ್​ ಬಳಿಕ ಅನ್​ಲಾಕ್​ ಸ್ಥಿತಿಯತ್ತ ಮುಖ ಮಾಡಿದೆ. ಬೇಸಿಗೆ ಚಟುವಟಿಕೆಗಳ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದನ್ನು ವಿಶಿಷ್ಟವಾಗಿ ಶುರು ಮಾಡಲು ಅಲ್ಲಿ ನಿರ್ಧರಿಸಲಾಗಿದೆ. ಇದಕ್ಕಾಗಿ ತೇಲುವ ಥಿಯೇಟರ್​ ಕಾರ್ಯ ನಿರ್ವಹಿಸಲಿದೆ.

    ಹೌದು… ಪ್ಯಾರಿಸ್​ನ ನದಿಯ ಮೇಲೆ ಬೋಟ್​ಗಳಲ್ಲಿ ಕುಳಿತು ಸಿನಿಮಾ ನೋಡಬಹುದು. ಅದೂ ಕೂಡ ವ್ಯಕ್ತಿಗತ ಅಂತರ ಕಾಯ್ದುಕೊಂಡು. ಪ್ರತಿ ಬೇಸಿಗೆಯಲ್ಲಿ ಇಲ್ಲಿನ ಸಿಯನ್ನಾ ನದಿ ತೀರದಲ್ಲಿ ನಿರ್ಮಿಸಲಾಗುವ ಕೃತಕ ಬೀಚ್​ಗಳಲ್ಲಿ ನಡೆಸಲಾಗುವ ಪ್ಯಾರಿಸ್​ ಪ್ಲೇಗಸ್​ ಉತ್ಸವದಲ್ಲಿ ಈ ತೇಲುವ ಥಿಯೇಟರ್​ ಪರಿಕಲ್ಪನೆ ಸಿದ್ಧಪಡಿಸಲಾಗಿದೆ.

    ಇದನ್ನೂ ಓದಿ; ಕಬಿನಿ ಕಾಡಿನಲ್ಲಿ ಕಾಣಿಸಿಕೊಂಡಿದೆ ಕರಿ ಚಿರತೆ…! ಅತ್ಯಪರೂಪದ ವಿದ್ಯಮಾನ 

    ಇನ್ನೊಂದು ವಿಶೇಷವೆಂದರೆ, ಇದಕ್ಕೆ ಯಾವುದೇ ಪ್ರವೇಶ ಶುಲ್ಕವಿಲ್ಲ. ಬೋಟ್​ಗಳಲ್ಲಿ ಪ್ರಯಾಣಿಸಲು ಟಿಕೆಟ್​ ಪಡೆದು ಸಿನಿಮಾ ವೀಕ್ಷಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ. ಜುಲೈ 18ರಂದು ಪ್ರದರ್ಶನ ಇರಲಿದ್ದು, 15ರವರೆಗೆ ಸ್ಥಳೀಯರು ಟಿಕೆಟ್​ ಕಾದಿರಿಸಬಹುದು. ನಮ್ಮಲ್ಲೂ ಇಂಥದ್ದೊಂದು ತೇಲುವ ಥಿಯೇಟರ್​ ಕಲ್ಪನೆ ರೂಪಿಸಬಹುದೇನೋ…!

    ಕರೊನಾ ಲಸಿಕೆ ಸಜ್ಜಾಗದಿದ್ದರೆ ಭಾರತದ ಸ್ಥಿತಿ ಹರೋಹರ…! ನಿತ್ಯ 3 ಲಕ್ಷ ಹೊಸ ಕೇಸ್​ ನಿಶ್ಚಿತ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts