More

    ಇಂದಿನಿಂದ ತಿರುಪತಿ, ಗೋವಾ, ಹೈದ್ರಾಬಾದ್‌ಗೆ ಫ್ಲೈಟ್

    ಶಿವಮೊಗ್ಗ: ಸ್ಟಾರ್ ಏರ್‌ಲೈನ್ಸ್ ಸಂಸ್ಥೆಯು ನ.21ರಿಂದ ದೇಶದ ಮೂರು ಪ್ರಮುಖ ನಗರಗಳಿಗೆ ಶಿವಮೊಗ್ಗದಿಂದ ವಿಮಾನಯಾನ ಸೇವೆ ಒದಗಿಸುತ್ತಿದೆ. ಪ್ರಮುಖ ಧಾರ್ಮಿಕ ಕ್ಷೇತ್ರ ತಿರುಪತಿ, ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವ ಹೈದರಾಬಾದ್ ಹಾಗೂ ಗೋವಾಕ್ಕೆ ವಿಮಾನ ಸಂಚಾರ ಲಭ್ಯವಾಗಲಿದೆ.

    ಉಡಾನ್ ಯೋಜನೆಯಡಿ ಈ ಮೂರು ಸ್ಥಳಗಳಿಗೆ ತೆರಳಲು ಕೇಂದ್ರ ಸರ್ಕಾರ ವಿಮಾನಯಾನ ಸಂಸ್ಥೆಗೆ ಸಬ್ಸಿಡಿ ನೀಡಲಿದೆ. ಎಕಾನಮಿ ಕ್ಲಾಸ್‌ನಲ್ಲಿ 1,999ರೂ. ಪಾವತಿಸಿ ಟಿಕೆಟ್ ಪಡೆಯಬಹುದಾಗಿದೆ. ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ಏರ್‌ಪೋರ್ಟ್ ಉದ್ಘಾಟಿಸಿದ ಬಳಿಕ ಆ.31ರಿಂದ ಶಿವಮೊಗ್ಗ-ಬೆಂಗಳೂರು ವಿಮಾನ ಸಂಚಾರ ಆರಂಭವಾಗಿತ್ತು. ಇದೀಗ ಮತ್ತೆ ಮೂರು ನಗರಗಳಿಗೆ ಶಿವಮೊಗ್ಗ ಏರ್‌ಪೋರ್ಟ್ ಮೂಲಕ ಸಂಪರ್ಕ ಲಭ್ಯವಾಗಲಿದೆ.
    2022ರ ಫೆ.9ರಂದು ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿಯಾಗಿ ಮುಂದಿನ ದಿನಗಳಲ್ಲಿ ಶಿವಮೊಗ್ಗ ಏರ್‌ಪೋರ್ಟ್‌ನಿಂದ ಮುಂಬೈ, ಬೆಂಗಳೂರು, ಮಂಗಳೂರು, ಚೆನ್ನೈ, ಹೈದರಾಬಾದ್, ದೆಹಲಿ, ಬೆಳಗಾವಿ, ಕೊಚ್ಚಿನ್, ಗೋವಾಕ್ಕೆ ಉಡಾನ್ ಯೋಜನೆ ಮೂಲಕ ಸಂಪರ್ಕ ಕಲ್ಪಿಸುವಂತೆ ಕೋರಿದ್ದರು. ಇದೀಗ ಮೂರು ಮಾರ್ಗಗಳಿಗೆ ಸಂಪರ್ಕ ಆರಂಭವಾಗಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
    ವಾರದಲ್ಲಿ ನಾಲ್ಕು ದಿನ: ಗೋವಾ, ಹೈದರಾಬಾದ್ ಹಾಗೂ ತಿರುಪತಿಗೆ ವಾರದಲ್ಲಿ ನಾಲ್ಕು ದಿನ ಮಾತ್ರ ಶಿವಮೊಗ್ಗದಿಂದ ವಿಮಾನ ಸಂಚಾರವಿರುತ್ತದೆ. ಪ್ರತಿ ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ ವಿಮಾನ ಹಾರಾಟ ನಡೆಸಲಿದೆ. ಉಡಾನ್ ಯೋಜನೆಯ ಲಾಭ ಪಡೆಯಬಯಸುವವರು ಕಡೇ ಸಂದರ್ಭದಲ್ಲಿ ಟಿಕೆಟ್ ಕಾಯ್ದಿರಿಸುವ ಬದಲು ಕೆಲ ದಿನಗಳ ಮುಂಚೆಯೇ ಟಿಕೆಟ್ ಪಡೆಯುವುದು ಒಳಿತು.

    ನೂತನ ವಿಮಾನಗಳ ವೇಳಾಪಟ್ಟಿ ಹೀಗಿದೆ
    ನಗರ(ಹೊರಡುವ ಸಮಯ) ನಗರ (ತಲುಪುವ ಸಮಯ) ಯಾವ ದಿನ?
    ಶಿವಮೊಗ್ಗ ಮಧ್ಯಾಹ್ನ 1.55 ಗೋವಾ(ಮೋಪಾ) ಮಧ್ಯಾಹ್ನ 2.40 ಮಂಗಳವಾರ, ಗುರುವಾರ, ಶನಿವಾರ
    ಗೋವಾ ಸಂಜೆ 3.10 ಶಿವಮೊಗ್ಗ-4.05 ಮಂಗಳವಾರ, ಗುರುವಾರ, ಶನಿವಾರ
    ಶಿವಮೊಗ್ಗ ಬೆಳಗ್ಗೆ 11 ಗೋವಾ-11.50ಕ್ಕೆ ಬುಧವಾರ
    ಗೋವಾ ಮಧ್ಯಾಹ್ನ 12.20 ಶಿವಮೊಗ್ಗ 1.10 ಬುಧವಾರ
    ಹೈದರಾಬಾದ್ 9.35 ಶಿವಮೊಗ್ಗ ಬೆ.10.35 ಮಂಗಳವಾರ, ಬುಧವಾರ, ಗುರುವಾರ, ಶನಿವಾರ
    ಶಿವಮೊಗ್ಗ 4.30 ಹೈದರಾಬಾದ್ 5.30ಕ್ಕೆ ಮಂಗಳವಾರ, ಬುಧವಾರ, ಗುರುವಾರ, ಶನಿವಾರ
    ಶಿವಮೊಗ್ಗ ಬೆ.11ಕ್ಕೆ ತಿರುಪತಿ 11.50ಕ್ಕೆ ಮಂಗಳವಾರ, ಗುರುವಾರ, ಶನಿವಾರ
    ತಿರುಪತಿ 12.15ಕ್ಕೆ ಶಿವಮೊಗ್ಗ ಮಧ್ಯಾಹ್ನ 1.40ಕ್ಕೆ ಮಂಗಳವಾರ, ಗುರುವಾರ, ಶನಿವಾರ
    ಶಿವಮೊಗ್ಗ ಮಧ್ಯಾಹ್ನ 1.40ಕ್ಕೆ ತಿರುಪತಿ 2.30ಕ್ಕೆ ಬುಧವಾರ
    ತಿರುಪತಿ 3ಕ್ಕೆ ಶಿವಮೊಗ್ಗ ಮಧ್ಯಾಹ್ನ 3.50ಕ್ಕೆ ಬುಧವಾರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts