More

    ವರ್ಷದಲ್ಲಿ 2.15 ಕೋಟಿ ಪ್ರಯಾಣಿಕರ ಸಾಗಾಟ

    ಹುಬ್ಬಳ್ಳಿ : ನಗರದ ರೈಲ್ವೆ ಇನ್​ಸ್ಟಿಟ್ಯೂಟ್ ದಕ್ಷಿಣ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ವಿಭಾಗೀಯ ವ್ಯವಸ್ಥಾಪಕ ಹರ್ಷ ಖರೆ ಅವರು ಧ್ವಜಾರೋಹಣ ನೆರವೇರಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಹರ್ಷ ಖರೆ, ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ 2023ರ ವರೆಗೆ ಹುಬ್ಬಳ್ಳಿ ವಿಭಾಗವು 2.15 ಕೋಟಿ ಪ್ರಯಾಣಿಕರನ್ನು ಸಾಗಿಸಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಪ್ರಯಾಣಿಸಿದ 1.95 ಕೋಟಿ ಪ್ರಯಾಣಿಕರ ಸಂಖ್ಯೆಗೆ ಹೋಲಿಸಿದಾಗ ಶೇ. 10 ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಡಿಸೆಂಬರ್ 2023ರ ವರೆಗಿನ ಪ್ರಯಾಣಿಕ ಆದಾಯವು 400 ಕೋಟಿ ರೂ.ಗಳಾಗಿದ್ದು, ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಗಳಿಸಲಾದ ಪ್ರಯಾಣಿಕ ಆದಾಯಕ್ಕೆ ಹೋಲಿಸಿದಾಗ ಶೇ. 18ರಷ್ಟು ಏರಿಕೆ ದಾಖಲಿಸಿದೆ ಎಂದು ತಿಳಿಸಿದರು.

    ಈ ಅವಧಿಯಲ್ಲಿ ಹುಬ್ಬಳ್ಳಿ ವಿಭಾಗದ ಸರಕು ಆದಾಯವು 2,714 ಕೋಟಿ ರೂ.ಗಳಾಗಿದ್ದು, ಶೇ. 6.5ರಷ್ಟು ಏರಿಕೆ ದಾಖಲಿಸಿದೆ. ಈ ಅವಧಿಯಲ್ಲಿ ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ಒಂಟಿಯಾಗಿ ಸಿಕ್ಕ 76 ಮಕ್ಕಳನ್ನು ರಕ್ಷಿಸಿದ್ದಾರೆ. ಆರ್​ಪಿಎಫ್ ಸಿಬ್ಬಂದಿ, ಪ್ರಯಾಣಿಕರು ಮರೆತು ಬಿಟ್ಟು ಹೋದ ಬ್ಯಾಗ್​ಗಳು, ಮೊಬೈಲ್ ಫೋನ್​ಗಳು, ಲ್ಯಾಪ್​ಟಾಪ್​ಗಳು, ನಗದು ಮತ್ತು ಚಿನ್ನಾಭರಣಗಳು ಸೇರಿದಂತೆ ಒಟ್ಟು 48 ಲಕ್ಷ ರೂ. ಮೌಲ್ಯದ ಲಗೇಜ್​ಗಳನ್ನು ಪತ್ತೆ ಮಾಡಿ, ಅವುಗಳ ಮಾಲೀಕರಿಗೆ ಮರಳಿಸಿದ್ದಾರೆ ಎಂದು ಹೇಳಿದರು.

    ಅತ್ಯುತ್ತಮ ಕರ್ತವ್ಯ ನಿರ್ವಹಣೆಗಾಗಿ 25 ರೈಲ್ವೆ ಸಿಬ್ಬಂದಿಗೆ ಸುರಕ್ಷತಾ ಪ್ರಶಸ್ತಿಗಳನ್ನು ವಿತರಿಸಲಾಯಿತು.

    ಹುಬ್ಬಳ್ಳಿ ವಿಭಾಗದ ಅಪರ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಸಂತೋಷ ಕುಮಾರ ವರ್ವ ಮತ್ತು ಸಂಜಯ ಕುಮಾರ ಸಿಂಗ್, ವರಿಷ್ಠ ವಿಭಾಗೀಯ ಸಿಬ್ಬಂದಿ ಅಧಿಕಾರಿ ಕೆ. ಆಸಿಫ್ ಹಫೀಜ್, ವರಿಷ್ಠ ವಿಭಾಗೀಯ ಭದ್ರತಾ ಆಯುಕ್ತ (ಆರ್​ಪಿಎಫ್) ಅಲೋಕ್ ಕುಮಾರ, ಹುಬ್ಬಳ್ಳಿ ವಿಭಾಗದ ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆಯ ಅಧ್ಯಕ್ಷೆ ರುಚಿ ಖರೆ ಹಾಗೂ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts