More

    ಚಾಮರಾಜಪೇಟೆ ಮೈದಾನ: ಆ.15ರಂದಷ್ಟೇ ಅಲ್ಲ, ಜ.26ರಂದೂ ನಡೆಯಲಿದೆ ಧ್ವಜಾರೋಹಣ..

    ಮಂಡ್ಯ: ಚಾಮರಾಜಪೇಟೆಯ ಮೈದಾನದಲ್ಲಿ ನಾಳೆ ಕಂದಾಯ ಇಲಾಖೆಯಿಂದ ಧ್ವಜಾರೋಹಣ ನಡೆಯಲಿರುವುದನ್ನು ಸಚಿವ ಆರ್. ಅಶೋಕ ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಸ್ವಾತಂತ್ರ್ಯೋತ್ಸವಕ್ಕಷ್ಟೇ ಅಲ್ಲ, ಗಣರಾಜ್ಯೋತ್ಸವದಂದೂ ಅಲ್ಲಿ ಧ್ವಜಾರೋಹಣ ನಡೆಯಲಿದೆ ಎಂಬುದನ್ನೂ ಅವರು ಹೇಳಿದರು.

    ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು ಈ ವಿಷಯವನ್ನು ತಿಳಿಸಿದರು. ಕಂದಾಯ ಇಲಾಖೆಯಿಂದ ನಾಳೆ ಚಾಮರಾಜಪೇಟೆಯಲ್ಲಿ ಧ್ವಜಾರೋಹಣ ನೆರವೇರಲಿದೆ. ಮುಖ್ಯಮಂತ್ರಿಯವರ ಬಳಿ ಈ ವಿಚಾರವನ್ನು ಪ್ರಸ್ತಾಪಿಸಿದ್ದೇವೆ. ಮುಖ್ಯಮಂತ್ರಿಯವರು ಕೊನೆಯದಾಗಿ ತೀರ್ಮಾನ ಕೈಗೊಳ್ಳುತ್ತಾರೆ. 75 ವರ್ಷಗಳಿಂದ ಅಲ್ಲಿ ಧ್ವಜಾರೋಹಣ ಮಾಡಿರಲಿಲ್ಲ, ಮಾಡಲು ಯಾರೂ ಬಿಟ್ಟಿರಲಿಲ್ಲ. ಧ್ವಜಾರೋಹಣ ಮಾಡುವಂಥ ಮನಸ್ಸು ಸಹ ಯಾವ ಸರ್ಕಾರಕ್ಕೂ ಇರಲಿಲ್ಲ. ಧ್ವಜಾರೋಹಣ ಮಾಡುವಂತೆ ಅರ್ಜಿ ಬಂದರೆ ಅದನ್ನು ತೆಗೆದು ಮೂಲೆಗೆ ಎಸೆದಿದ್ದರು ಎಂದು ಅಶೋಕ ಹೇಳಿದರು.

    ಅಲ್ಲಿ ಧ್ವಜಾರೋಹಣ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗಷ್ಟೇ ಸೀಮಿತವಾಗಿರುವುದಿಲ್ಲ. ಮುಂಬರುವ ಎಲ್ಲ ಸ್ವಾತಂತ್ರ್ಯ ದಿನ ಹಾಗೂ ಗಣರಾಜ್ಯೋತ್ಸವದಂದು ಧ್ವಜಾರೋಹಣ ನಡೆಯಲಿದೆ. ಧ್ವಜಾರೋಹಣಕ್ಕೆ ಎಸಿ ದರ್ಜೆಯ ಅಧಿಕಾರಿಯೊಬ್ಬರನ್ನು ನೇಮಕ ಮಾಡಲಾಗಿದೆ. ಮುಂದಿನ ಬದಲಾವಣೆ ಏನೇ ಇದ್ದರೂ ಮುಖ್ಯಮಂತ್ರಿಯವರು ತಿಳಿಸುತ್ತಾರೆ. ನಾನು ಮಂಡ್ಯದಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇನೆ. ಏನಾದರೂ ಸಮಸ್ಯೆಯಾದರೆ ಮುಂದೆ ನೋಡೋಣ ಎಂದು ಹೇಳಿದರು.

    ಚಾಮರಾಜಪೇಟೆಯಲ್ಲಿ ಗಣೇಶ ಉತ್ಸವಕ್ಕೆ ಅನುಮತಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದಕ್ಕಿನ್ನೂ ಸಮಯವಿದೆ. ಮೊದಲು ಈ ಧ್ವಜಾರೋಹಣ ಕಾರ್ಯಕ್ರಮ ಮುಗಿಯಲಿ, ಆಮೇಲೆ ತೀರ್ಮಾನ ಕೈಗೊಳ್ಳುತ್ತೇವೆ. ಜನರು ಹಾಗೂ ಕಾನೂನುತಜ್ಞರ ಜೊತೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.

    ‘ನನ್ನನ್ಯಾರೋ ಕೊಲೆ ಮಾಡ್ತಾರೆ’ ಎಂದು ಪೊಲೀಸರಿಗೆ ಆಗಾಗ ಕರೆ ಮಾಡ್ತಿದ್ದ ಮಹಿಳೆಯ ಕೊಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts