More

    ಜ.1ರಿಂದ ‘ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್’ ಮತ್ತೆ ಆರಂಭ: ರಸ್ತೆಗುಂಡಿ ಬಗ್ಗೆ ದೂರು ಸಲ್ಲಿಸಲು ನಾಗರಿಕರಿಗೆ ಅವಕಾಶ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಸ್ತೆ ಡಾಂಬರೀಕರಣ ಹಾಗೂ ರಸ್ತೆ ಗುಂಡಿಗಳ ಸಮಸ್ಯೆ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸುವ ಉದ್ದೇಶದಿಂದ ಬಿಬಿಎಂಪಿ,ಅಭಿವೃದ್ಧಿಪಡಿಸಿದ್ದ ‘ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್’ 2023ರ ಜ.1ರಿಂದ ಸಾರ್ವಜನಿಕರು ಮತ್ತೆ ಬಳಸಬಹುದು.

    ಐದು ವರ್ಷಗಳ ಹಿಂದೆ ಪಾಲಿಕೆ ಆ್ಯಪ್ ಅಭಿವೃದ್ಧಿ ಪಡಿಸಿತ್ತು. 2019-20ರಲ್ಲಿ ತಾಂತ್ರಿಕ ಕಾರಣದಿಂದ ಸಾರ್ವಜನಿಕರು ಬಳಕೆ ಮಾಡುವುದನ್ನು ಬಿಬಿಎಂಪಿ ನಿಲ್ಲಿಸಿತ್ತು. ಅಂದಿನಿಂದ ಈವರೆಗೆ ಬರೀ ಪಾಲಿಕೆ ಅಧಿಕಾರಿಗಳು ಮಾತ್ರ ಆ್ಯಪ್‌ನಲ್ಲಿ ರಸ್ತೆಗುಂಡಿ ಮತ್ತು ಗುಣಮಟ್ಟವಲ್ಲದ ರಸ್ತೆಗಳ ಭಾವಚಿತ್ರದೊಂದಿಗೆ ವಿಳಾಸ ಮಾಹಿತಿ ನಮೂದಿಸಿ ಹಾಕುತ್ತಿದ್ದರು. ಈಗ ಸಾರ್ವಜನಿಕರ ಬಳಕೆ ಅವಕಾಶ ಸಿಗುವುದರಿಂದ ಸಾರ್ವಜನಿಕರು ತಮ್ಮ ಬಡಾವಣೆಗಳಲ್ಲಿ ಬಿದ್ದಿರುವ ರಸ್ತೆಗುಂಡಿಗಳು ಮತ್ತು ಗುಣಮಟ್ಟವಲ್ಲದ ರಸ್ತೆಗಳನ್ನು ಭಾವಚಿತ್ರ ತೆಗೆದು ಆ್ಯಪ್‌ನಲ್ಲಿ ಹಾಕಿದ್ದರೆ ವಾರ್ಡ್ ಮಟ್ಟದ ಇಂಜಿನಿಯರ್ ಸೇರಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪುತ್ತದೆ. ಬಳಿಕ ಅಧಿಕಾರಿಗಳು ರಸ್ತೆ ಗುಂಡಿ ಮುಚ್ಚಲು ನೆರವಾಗಲಿದೆ. ಸಮಸ್ಯೆ ನಿವಾರಣೆಯಾದ ಬಳಿಕ ದೂರದಾರರ ಮೊಬೈಲ್‌ಗೆ ಚಿತ್ರ ಸಮೇತ ಸಂದೇಶ ರವಾನೆಯಾಗಲಿದೆ.

    ಈ ಆ್ಯಪ್ ಗೂಗಲ್ ಪ್ಲೇಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ರಸ್ತೆಯಲ್ಲಿ ಗುಂಡಿ ಬಿದ್ದರೆ ಸೇರಿ ಏನಾದರೂ ಸಮಸ್ಯೆಗಳಿದ್ದರೆ ಆ್ಯಪ್‌ನಲ್ಲಿ ದೂರು ಸಲ್ಲಿಸಿ ಬಿಬಿಎಂಪಿ ಸೆಳೆಯಬಹುದು. ಜಿಯೋ ಮ್ಯಾಪಿಂಗ್ ಮೂಲಕ ಯಾವ ನಿರ್ದಿಷ್ಟ ಸ್ಥಳದಲ್ಲಿ ಸಮಸ್ಯೆ ಎಂಬುದು ಬಗ್ಗೆ ದೂರು ನೀಡಬಹುದು. ನಂತರ ವಾರ್ಡ್‌ನ ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ದೂರುದಾರರ ಸಂಪರ್ಕ ಕಲ್ಪಿಸಲಾಗುತ್ತದೆ. ರಿಜಿಸ್ಟರ್ ಅಥವಾ ರಿಜಿಸ್ಟರ್ ಮಾಡದೆ ದೂರು ದಾಖಲಿಸಬಹುದು. ಅದು ಯಶಸ್ವಿಯಾಗಿ ಸಲ್ಲಿಕೆಯಾದಾಗ ದೂರುದಾರನ ಮೊಬೈಲ್ ಸಂದೇಶ ಬರುತ್ತದೆ. ಸಮಸ್ಯೆಗೆ ಸಂಬಂಧಿಸಿದ ಕೆಲಸ ಮಾಡಿದ ಬಳಿಕ ಮಾಹಿತಿ ಭಾವಚಿತ್ರವನ್ನು ಆ್ಯಪ್‌ನಲ್ಲಿ ಅಪ್‌ಡೇಟ್ ಮಾಡಲಾಗುತ್ತದೆ.

    ವಿದ್ಯಾರ್ಥಿ ಹಂತಕನ ಬಂಧನ: ಶಿಕ್ಷಕಿ ಮೇಲಿನ ಅತಿರೇಕದ ಪ್ರೇಮವೇ ಕೊಲೆಗೆ ಕಾರಣ? ವಾಟ್ಸ್​ಆ್ಯಪ್​ನಲ್ಲಿದೆ ರಹಸ್ಯ…

    ಇಮ್ರಾನ್ ಖಾನ್ ಆಡಿಯೋ ಲೀಕ್​: ನಿಮ್ಮಿಂದಾಗಿ ನನ್ನ ಖಾಸಗಿ ಅಂಗಗಳು ನೋಯುತ್ತಿವೆ.. ಇಂದು ಬರೋಕೆ ಆಗಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts