More

    ಪ್ರೇಮ ಕಥೆ: ಐದು ವರ್ಷದ ಪ್ರೀತಿಗೆ ಅಂಕಿತ

    ‘ಒಲವೇ ಜೀವನ ಸಾಕ್ಷಾತ್ಕಾರ’ ಎಂಬುದು ಸಿನಿಮಾಗಷ್ಟೇ ಸೀಮಿತವಲ್ಲ. ಸಿನಿಮೀಯ ರೀತಿಯಲ್ಲಿ ಉಂಟಾಗುವಂಥ ಒಲವನ್ನೂ ಸಾಕ್ಷಾತ್ಕಾರ ಮಾಡಿಕೊಂಡ ಜೋಡಿಗಳೂ ಸಿನಿಮಾರಂಗದಲ್ಲಿ ಹಲವರಿದ್ದಾರೆ. ಆ ಪೈಕಿ ತಾಜಾ ಉದಾಹರಣೆ ಎಂದರೆ ಮಿಲನಾ ನಾಗರಾಜ್-ಡಾರ್ಲಿಂಗ್ ಕೃಷ್ಣ. ಇತ್ತೀಚೆಗಷ್ಟೇ ತೆರೆ ಕಂಡ ‘ಲವ್ ಮಾಕ್​ಟೇಲ್’ ಚಿತ್ರದ ಮೂಲಕ ಪ್ರೇಮಿಗಳ ಗಮನ ಸೆಳೆದಿದ್ದ ಈ ಜೋಡಿ, ನಿಜಜೀವನದಲ್ಲೂ ಲವ್ ಮಾಕ್​ಟೇಲ್ ಆಗಲು ಮುಂದಾಗಿದ್ದು, ಸದ್ಯದಲ್ಲೇ ಮದುವೆ ಆಗುವುದಾಗಿಯೂ ಘೋಷಿಸಿಕೊಂಡಿದ್ದಾರೆ. ಇನ್ನೊಂದೆಡೆ ನಟಿ ಹಿತಾ ಚಂದ್ರಶೇಖರ್ ಹಾಗೂ ನಟ ಕಿರಣ್ ಶ್ರೀನಿವಾಸ್ ಪ್ರೀತಿಸಿ ಮದುವೆಯಾಗಿದ್ದು, ಇಬ್ಬರೂ ಜೊತೆಯಾಗಿ ಹಿತವಾಗಿ ಇದ್ದಾರೆ. ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಈ ಎರಡು ಜೊತೆ ಪ್ರಣಯಪ್ರಕ್ಷಿಗಳು ಹಂಚಿಕೊಂಡಿರುವ ಪ್ರೀತಿಯ ಮಾತುಗಳು ಇಲ್ಲಿವೆ.

    2015ರಲ್ಲೇ ಕೃಷ್ಣ ನನ್ನ ಬಳಿ ಬಂದು ‘ನನ್ನನ್ನು ಮದುವೆ ಆಗುತ್ತೀಯ?’ ಎಂದು ಕೇಳಿದ್ದರು. ಆಗ ಕೊಂಚ ಸಮಯ ಬೇಕು ಎಂದು ಹೇಳಿದ್ದೆ. ಒಂದು ವೇಳೆ ಮದುವೆ ಅಂತಾದರೆ ಮನೆಯವರನ್ನು ಒಪ್ಪಿಸಿ ಅರೇಂಜ್ಡ್ ಮದುವೆಯಾಗುವುದಾಗಿ ಹೇಳಿದ್ದೆ. ಅದಕ್ಕೆ ಕಾರಣ, ನಾವಿಬ್ಬರು ಹೆಚ್ಚು ಕ್ಲೋಸ್ ಆಗಿರಲಿಲ್ಲ. ಇಬ್ಬರೂ ಒಟ್ಟಿಗೆ ಸಿನಿಮಾದಲ್ಲಿ ತೊಡಗಿಸಿಕೊಂಡೆವು. ನಾನು ಜಾಹೀರಾತುಗಳಲ್ಲಿ ಬಿಜಿಯಾದರೆ, ಕೃಷ್ಣ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆಗಾಗ ಇಬ್ಬರ ಭೇಟಿಯಾಗುತ್ತಿತ್ತು. ಇಬ್ಬರ ನಡುವೆ ಒಳ್ಳೆಯ ಸ್ನೇಹವಿತ್ತು. ಹೀಗೆ ಒಂದಷ್ಟು ವರ್ಷಗಳು ಗತಿಸಿದವು. ಇಬ್ಬರದ್ದೂ ಒಂದೇ ರೀತಿಯ ವಿಚಾರಗಳು. ಎಲ್ಲ ರೀತಿಯಲ್ಲೂ ನನಗೆ ಹೊಂದಾಣಿಕೆ ಆಗುತ್ತಾರೆ ಎಂಬ ವಿಶ್ವಾಸ ಅದಾಗಲೇ ಬಂದಿತ್ತು. ನನ್ನ ಲೈಫ್ ಪಾರ್ಟ್​ನರ್ ಆಗಲು ಇವರೇ ಸೂಕ್ತ ಎಂದು ಮದುವೆ ವಿಚಾರವನ್ನು ಅಪ್ಪ ಅಮ್ಮನ ಬಳಿ ಮಾತನಾಡಿದೆ. ಅವರಿಂದ ಒಪ್ಪಿಗೆ ಸಿಕ್ಕ ಮೇಲೆಯೂ ನಾವು ಪ್ರೀತಿಯಲ್ಲಿ ಮುಳುಗಿರಲಿಲ್ಲ. ಡೇಟಿಂಗ್ ಅಂತ ಸುತ್ತಾಡಿರಲಿಲ್ಲ. ನಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡೆವು. ‘ಲವ್ ಮಾಕ್​ಟೇಲ್’ ಚಿತ್ರಕ್ಕೆ ಇಬ್ಬರೂ ಸೇರಿ ಕಥೆ ಬರೆದವು. ಸಂಭಾಷಣೆಯಲ್ಲೂ ಇಬ್ಬರ ಪಾಲೂ ಇತ್ತು. ಈಗ ಅದೇ ಸಿನಿಮಾ ಹಿಟ್ ಆಗಿದೆ. ಮದುವೆ ಯಾವಾಗ ಎಂಬುದನ್ನು ನಿರ್ಧರಿಸಿಲ್ಲ. ಹಾಗಂತ ಮದುವೆಯೊಂದೇ ಅಲ್ಟಿಮೇಟ್ ಉತ್ತರವೂ ಅಲ್ಲ. ಅದನ್ನು ಬಿಟ್ಟು ಸಾಧನೆ ಮಾಡಬೇಕಾಗಿರುವುದು ಇನ್ನೂ ಇದೆ.

    | ಮಿಲನಾ ನಾಗರಾಜ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts