More

    ಬಜಾಜ್ ಗ್ರೂಪ್‌ನಿಂದ 5 ಸಾವಿರ ಕೋಟಿ ರೂ. ನೆರವು; ಐದು ವರ್ಷದಲ್ಲಿ ಸಿಎಸ್‌ಆರ್ ನಿಧಿಯಿಂದ ಬಳಸಲು ಗುರಿ

    ಬೆಂಗಳೂರು: ದೇಶದ ಮುಂಚೂಣಿ ಉದ್ಯಮಗಳಲ್ಲಿ ಒಂದೆನಿಸಿರುವ ಬಜಾಜ್ ಗ್ರೂಪ್, ಮುಂದಿನ ಐದು ವರ್ಷದಲ್ಲಿ 5 ಸಾವಿರ ಕೋಟಿ ರೂ. ಹಣವನ್ನು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯಡಿ ವಿವಿಧ ಕಾರ್ಯಕ್ರಮಗಳಿಗೆ ಖರ್ಚು ಮಾಡಲು ನಿರ್ಧರಿಸಿದೆ.

    ಸಿಎಸ್‌ಆರ್ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲು ಹೊಸದಾಗಿ ಗುರುತಿಸಿಕೊಂಡಿರುವ ‘ಬಜಾಜ್ ಬಿಯಾಂಡ್’ ಪ್ರತಿಷ್ಠಾನದ ಮೂಲಕ ತನ್ನೆಲ್ಲ ಸಾಮಾಜಿಕ ಕಾರ್ಯವನ್ನು ಅನುಷ್ಠಾನಕ್ಕೆ ತರಲಿದೆ. ಈ ತೀರ್ಮಾನದಿಂದಾಗಿ ಭವಿಷ್ಯದಲ್ಲಿ 2 ಕೋಟಿ ಯುವಜನರಿಗೆ ಉದ್ಯೋಗ ಹಾಗೂ ಉದ್ದಿಮೆಗಳಲ್ಲಿ ಅವಕಾಶ ಸಿಗುವಂತಹ ಕೌಶಲ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವ ಇಂಗಿತ ಕಂಪನಿಯಿಂದ ವ್ಯಕ್ತವಾಗಿದೆ.

    ಕಳೆದ ಒಂದು ದಶಕದಲ್ಲಿ ಬಜಾಜ್ ಗ್ರೂಪ್ ಶಿಕ್ಷಣ ಕ್ಷೇತ್ರದಲ್ಲಿ ಕೌಶಲ ಅಭಿವೃದ್ಧಿ, ಆರೋಗ್ಯ, ಜಲ ಸಂರಕ್ಷಣೆ ಸೇರಿ ಇನ್ನಿತರ ವಿಭಾಗಗಳಿಗೆ 4 ಸಾವಿರ ಕೋಟಿ ರೂ. ನಿಧಿಯನ್ನು ಬಳಕೆ ಮಾಡಿದೆ. ಬಜಾಜ್ ಗ್ರೂಪ್ ಹಲವು ಮಾನವೀಯ ಉಪಕ್ರಮಗಳನ್ನು ಕೈಗೊಂಡಿದೆ. ಜಮ್ನಾಲಾಲ್ ಬಜಾಜ್ ಪ್ರತಿಷ್ಠಾನ, ಜಾನಕಿದೇವಿ ಬಜಾಜ್ ಗ್ರಾಮ ವಿಕಾಸ ಸಂಸ್ಥಾ, ಕಮಲ್‌ನಯನ್ ಬಜಾಜ್ ಹಾಸ್ಟಿಟೆಲ್ ಹಾಗೂ ಇತರ ಹೆಸರಿನಡಿ ಸಮುದಾಯವನ್ನು ಸಶಕ್ತೀಕರಣಗೊಳಿಸುವಲ್ಲಿ ಸಕ್ರಿಯವಾಗಿದೆ.

    ಸಿಎಸ್‌ಆರ್ ಕಾರ್ಯಕ್ರಮಗಳ ಕುರಿತು ಪ್ರತಿಕ್ರಿಯಿಸಿರುವ ಬಜಾಜ್ ಇಲೆಕ್ಟ್ರಿಕಲ್ಸ್ ಲಿ. ಸಿಎಂಡಿ ಶೇಖರ್ ಬಜಾಜ್, ನಮ್ಮ ಕಂಪನಿಯ ಪ್ರತಿಷ್ಠಾನದ ಮೂಲಕ ಕೈಗೆತ್ತಿಕೊಂಡಿರುವ ಸಿಎಸ್‌ಆರ್ ಕೆಲಸಗಳಿಂದ ಭಾರತದ ಯುವಜನರನ್ನು ಸಬಲೀಕರಣಗೊಳಿಸಲು ವಿಶೇಷ ಪ್ರಯತ್ನ ನಡೆಸಲಾಗಿದೆ. ಪ್ರಸ್ತುತ ಬಜಾಜ್ ಬಿಯಾಂಡ್ ವೇದಿಕೆಯಡಿ ಭವಿಷ್ಯದ ಪೀಳಿಗೆಯನ್ನು ಸಬಲೀಕರಣ ಮಾಡುವ ನಮ್ಮ ಯೋಜನೆಯನ್ನು ಇನ್ನಷ್ಟು ವಿಸ್ತೃತ ರೂಪದಲ್ಲಿ ಮುಂದುವರಿಸಲಿದ್ದೇವೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts