More

    ಕರೊನಾ ವೈರಸ್​ ನಿಯಂತ್ರಣದಲ್ಲಿ ವಿಫಲವಾದ ಪಾಕಿಸ್ತಾನ ಇನ್ನೊಂದು ವಿಚಾರದಲ್ಲಿ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ; ಇದೂ ಒಂದು ಮುಂಜಾಗ್ರತೆ…!

    ಕರಾಚಿ: ವಿಶ್ವದಾದ್ಯಂತ ಕರೊನಾ ವೈರಸ್​ ನಿಯಂತ್ರಣಕ್ಕೆ ಲಾಕ್​ಡೌನ್​ನಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಹುತೇಕ ರಾಷ್ಟ್ರಗಳು ಲಾಕ್​ಡೌನ್​ನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.

    ಆದರೆ ಇದಕ್ಕೆ ಅಪವಾದವೆಂಬಂತೆ ಪಾಕಿಸ್ತಾನ ಮಾತ್ರ ದೇಶವನ್ನು ಲಾಕ್​ಡೌನ್​ ಮಾಡಿಲ್ಲ. ಜನರು ಗುಂಪುಗೂಡುವುದನ್ನು ನಿರ್ಬಂಧಿಸಿಲ್ಲ. ಇದರಿಂದಾಗಿ ಅಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ.

    ಆದರೆ ಪಾಕಿಸ್ತಾನ ಮತ್ತೊಂದು ವಿಚಾರದಲ್ಲಿ ಎಲ್ಲ ದೇಶವನ್ನೂ ಹಿಂದಿಕ್ಕಿದೆ. ಕರೊನಾ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸದ ದೇಶ, ಕರೊನಾದಿಂದ ಮೃತಪಟ್ಟವರ ಹೂಳಲೆಂದು ಐದು ಸ್ಮಶಾನಗಳನ್ನು ಸಿದ್ಧಪಡಿಸಿಟ್ಟುಕೊಂಡಿದೆ.

    ಕರೊನಾ ವೈರಸ್ ರೋಗಿಗಳು ದಾಖಲಾಗಿದ್ದ ಅಬ್ಬಾಸಿ ಶಾಹೀದ್​ ಆಸ್ಪತ್ರೆಗೆ ಭೇಟಿ ನೀಡಿದ್ದ ಕರಾಚಿ ಮೇಯರ್​ ವಾಸಿಂ ಅಕ್ತರ್, ​ ಸ್ಮಶಾನ ಸಿದ್ಧವಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

    ಕರಾಚಿಯಲ್ಲಿ ಒಟ್ಟು ಐದು ಸ್ಮಶಾನಗಳನ್ನು ಕರೊನಾದಿಂದ ಮೃತಪಟ್ಟವರ ಸಮಾಧಿ ಮಾಡಲೆಂದೇ ಮೀಸಲಿಡಲಾಗಿದೆ. ಇಂತಹವರನ್ನು ಹೂಳುವಾಗ ಅವರ ಕೆಲವೇ ಸಂಬಂಧಿಕರಿಗೆ ಮಾತ್ರ ಅವಕಾಶ. ಮೃತದೇಹಗಳನ್ನು ಪೂರ್ತಿಯಾಗಿ ಮುಚ್ಚಿ, ರಕ್ಷಣಾ ಕ್ರಮದೊಂದಿಗೆ ಸ್ಮಶಾನಕ್ಕೆ ಕರೆತರಲಾಗುವುದು ಮತ್ತು ಕೊನೇದಾಗಿ ನೋಡಲು ಯಾರಿಗೂ ಅವಕಾಶ ಇಲ್ಲ ಎಂದು ಹೇಳಿದ್ದಾರೆ.

    ಅಲ್ಲದೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಸಿಂಧ್​ ಪ್ರಾಂತ್ಯದ ಗವರ್ನರ್​ ಇಮ್ರಾನ್​ ಇಸ್ಮಾಯಿಲ್​ ಮತ್ತು ಸಿಂಧ್​ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಸಾಂಕ್ರಾಮಿಕ ರೋಗವಾದ ಕರೊನಾ ವೈರಸ್​ ವಿರುದ್ಧ ಹೋರಾಟಕ್ಕೆ ಬೇಕಾದ ಆರ್ಥಿಕ ಸಹಾಯ ಮಾಡಿ ಮತ್ತು ಅಗತ್ಯ ಉಪಕರಣಗಳನ್ನು ಒದಗಿಸಿ ಎಂದು ಮನವಿ ಮಾಡಿಕೊಂಡಿದ್ದೇನೆ ಎಂದು ಅಕ್ತರ್​ ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts