More

    VIDEO | ಹೃದಯ ಶಸ್ತ್ರಚಿಕಿತ್ಸೆಯ ಬಳಿಕ ಗಾಲ್ಫ್ ಆಟಕ್ಕೆ ಮರಳಿದ ಕಪಿಲ್ ದೇವ್

    ನವದೆಹಲಿ: 2 ವಾರಗಳ ಹಿಂದೆಯಷ್ಟೇ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಭಾರತದ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್, ಗುರುವಾರ ಗಾಲ್ಫ್ ಆಟಕ್ಕೆ ಮರಳಿದ್ದಾರೆ. ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಗಾಲ್ಫ್ ಅವರ ನೆಚ್ಚಿನ ಆಟವಾಗಿದೆ.

    ವೈದ್ಯರ ಅನುಮತಿಯ ಮೇರೆಗೆ 61 ವರ್ಷದ ಕಪಿಲ್ ದೇವ್ ಗಾಲ್ಫ್ ಆಟಕ್ಕೆ ಮರಳಿದ್ದು, ದೆಹಲಿ ಗಾಲ್ಫ್ ಕೋರ್ಸ್‌ನಲ್ಲಿ ಸ್ನೇಹಿತರ ಜತೆಗೂಡಿ ಆಡಿದರು.

    ‘ಗಾಲ್ಫ್ ಕೋರ್ಸ್ ಅಥವಾ ಕ್ರಿಕೆಟ್ ಮೈದಾನಕ್ಕೆ ಮರಳಿ ಆಡುವುದರಲ್ಲಿ ಇರುವ ಆನಂದವನ್ನು ಬಣ್ಣಿಸಲು ಸಾಧ್ಯವಿಲ್ಲ. ಗಾಲ್ಫ್ ಕೋರ್ಸ್‌ಗೆ ಮರಳಿರುವುದು ಸುಂದರ ಅನುಭವ. ಗೆಳೆಯರೊಂದಿಗೆ ಆಡಿ ಆನಂದಿಸಿದೆ. ಇದೇ ಅಲ್ಲವೆ ಜೀವನವೆಂದರೆ’ ಎಂದು ಕಪಿಲ್ ದೇವ್ ಗಾಲ್ಫ್ ಆಡುತ್ತಿರುವ ವಿಡಿಯೋದೊಂದಿಗೆ ಟ್ವಿಟರ್‌ನಲ್ಲಿ ಸಂದೇಶ ಹಂಚಿಕೊಂಡಿದ್ದಾರೆ. 1994ರಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಕಪಿಲ್ ಹವ್ಯಾಸಿ ಗಾಲ್ಫ್ ಆಟಗಾರರಾಗಿದ್ದು, ಹಲವು ಟೂರ್ನಿಗಳಲ್ಲಿ ಸ್ಪರ್ಧಿಸಿದ್ದಾರೆ.

    ಕಳೆದ ತಿಂಗಳು ಹೃದಯಾಘಾತದಿಂದ ಬಳಲಿದ್ದ ಕಪಿಲ್ ಬಳಿಕ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಎರಡೇ ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಟಿವಿ ಚಾನಲ್ ಒಂದರ ಜತೆಗೆ ಕ್ರಿಕೆಟ್ ವಿಶ್ಲೇಷಕರಾಗಿಯೂ ಅವರು ತಮ್ಮ ಕೆಲಸಕ್ಕೆ ಮರಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts