More

    ಮತ್ತೆ ಮೀನುಗಾರಿಕೆ ಸ್ಥಗಿತ

    ಗಂಗೊಳ್ಳಿ: ಮೀನುಗಾರಿಕೆ ಋತು ಸೆ.1ರಿಂದ ಆರಂಭಗೊಂಡಿದ್ದರೂ ಗಂಗೊಳ್ಳಿ ಬಂದರಿನಲ್ಲಿ ಹವಾಮಾನ ವೈಪರೀತ್ಯದಿಂದ ಮತ್ತೆ ಸ್ಥಗಿತಗೊಂಡಿದೆ.

    ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಗಾಳಿ ಮಳೆಗೆ ಕಡಲು ಪ್ರಕ್ಷುಬ್ಧಗೊಂಡಿದೆ. ಹೀಗಾಗಿ ಯಾವುದೇ ಬೋಟುಗಳು ಕಡಲಿಗಿಳಿದಿಲ್ಲ. ಹವಾಮಾನ ಇಲಾಖೆ ಮುನ್ಸೂಚನೆ ಹಿನ್ನೆಲೆಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಎಲ್ಲ್ಲ ಬೋಟುಗಳು ಗುರುವಾರ ಸಂಜೆಯೇ ಗಂಗೊಳ್ಳಿ ಬಂದರು ಸೇರಿದ್ದು, ಗಂಗೊಳ್ಳಿಯ ಪೋರ್ಟ್ ಆಫೀಸು ಮತ್ತು ಮ್ಯಾಂಗನೀಸ್ ವಾರ್ಫ್ ಬಳಿ ಲಂಗರು ಹಾಕಿವೆ. ವಾರದಿಂದ ಚಟುವಟಿಕೆಯಿಂದ ಕೂಡಿರುತ್ತಿದ್ದ ಗಂಗೊಳ್ಳಿ ಮೀನುಗಾರಿಕಾ ಬಂದರು ಮತ್ತೆ ಬಿಕೋ ಎನ್ನುತ್ತಿದೆ.

    ಮಾರ್ಚ್ ತಿಂಗಳಲ್ಲಿ ಕರೊನಾ ಹಿನ್ನೆಲೆ ಅರ್ಧಕ್ಕೆ ಮೊಟಕುಗೊಂಡಿದ್ದ ಮೀನುಗಾರಿಕೆ ಋತು ಆಗಸ್ಟ್ ಬದಲಿಗೆ ಈ ಬಾರಿ ಸೆಪ್ಟೆಂಬರ್‌ನಲ್ಲಿ ಆರಂಭಗೊಂಡಿತ್ತು. ಆದರೆ ಆರಂಭವಾದ ಕೆಲವೇ ದಿನಗಳಲ್ಲಿ ಕಡಲು ಮುನಿಸಿಕೊಂಡಿದ್ದು ಇನ್ನು ನಾಲ್ಕೈದು ದಿನ ಮೀನುಗಾರರು ಕಡಲಿಗಿಳಿಯುವುದು ಅನುಮಾನ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts