ನವದೆಹಲಿ: ಈ ವರ್ಷ ಮಾನ್ಸೂನ್ ಅವಧಿಗೂ ಮುನ್ನವೇ ಪ್ರವೇಶಿಸಲಿದ್ದು, ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಏಪ್ರಿಲ್ ತಿಂಗಳಲ್ಲಿ ದಾಖಲೆಯ ತಾಪಮಾನದ ನಡುವೆ ಇದೀಗ ಮಾನ್ಸೂನ್ ಮಳೆಯಿಂದಾಗಿ ತಾಪಮಾನ ಇಳಿಕೆಯಾಗಲಿದ್ದು, ದೇಶದ ಎಲ್ಲಾ ಭಾಗಗಳಲ್ಲೂ ಈ ಬಾರಿ ಮಾನ್ಸೂನ್ ಮಳೆ ಬೇಗವೇ ಬರಲಿದೆ.
ಕೆಲವೆಡೆ ಅಕಾಲಿಕ ಮಳೆ ಸುರಿಯತ್ತಿದ್ದು, ಇದರಿಂದ ವಾತಾವರಣವನ್ನು ತಂಪು ಮಾಡಿದೆಯಾದರೂ, ಮೇ ತಿಂಗಳಾರ್ಧದಲ್ಲಿ ಸುರಿಯುವ ಮಳೆ ಭಾರೀ ಅನುಕೂಲಕರವಾಗಲಿದೆ. ಅಸನಿ ಚಂಡಮಾರುತದಿಂದಾಗಿ ಪೂರ್ವ ಕರಾವಳಿಯಲ್ಲಿ ಈಗಾಗಲೇ ಮಳೆಯಾಗುತ್ತಿದ್ದು, ಈ ನಡುವೆ ಮಾನ್ಸೂನ್ ಪ್ರವೇಶದಿಂದ ವಾರಗಳವರೆಗೆ ನಿರಂತರ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೂಲಕ ಈ ಬಾರಿ ಮಾನ್ಸೂನ್ ಮಳೆ ಬೇಗ ಬರಲಿದ್ದು, ಮೇ 15 ರಂದು ಮೊದಲ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.
ಮಾನ್ಸೂನ್ ಮಳೆಯಿಂದಾಗಿ ದೇಶಾದ್ಯಂತ ತಾಪಮಾನ ಕಡಿಮೆಯಾಗಲಿದ್ದು, ದೇಶದ ವಿವಿಧ ಭಾಗಗಳಲ್ಲಿ ಮೇ 14 ರಿಂದ 16 ರಂದು ಭಾರೀ ಮಳೆಯಾಗಲಿದೆ. ಇನ್ನು ಈ ವರ್ಷ ಮಾನ್ಸೂನ್ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. (ಏಜೆನ್ಸೀಸ್)
ಡೆತ್ ಟ್ರೈನ್ ವಿಡಿಯೋ ಬಿಡುಗಡೆ ಮಾಡಿ ರಷ್ಯಾದ ಬಣ್ಣ ಬಯಲು ಮಾಡಿದ ಯೂಕ್ರೇನ್ ಸೇನೆ: ಈ ರೈಲಿನಲ್ಲಿ ಅಂತಹದ್ದೇನಿದೆ?