More

    ಸಮಗ್ರ ನೀರಾವರಿಗೆ ಪ್ರಥಮ ಆದ್ಯತೆ

    ಹೂವಿನಹಿಪ್ಪರಗಿ: ಮತಕ್ಷೇತ್ರವನ್ನು ಸಮಗ್ರ ನೀರಾವರಿ ಮಾಡುವ ಉದ್ದೇಶದಿಂದ 1.69 ಲಕ್ಷ ಎಕರೆ ಜಮೀನಿಗೆ ನೀರಾವರಿ ಕಲ್ಪಿಸಲು ಸಾಕಷ್ಟು ಪ್ರಯತ್ನ ಮಾಡಿದ್ದೇನೆ ಎಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.

    ಗುರುವಾರ ಸ್ಥಳೀಯ ವಿಶ್ವಚೇತನ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಕೃಷ್ಣಾ ಜಲ ಭಾಗ್ಯ ನಿಗಮ ನಿಯಮಿತ ಅಡಿಯಲ್ಲಿ 724 ಕೋಟಿ ರೂ. ಅನುದಾನದ ಮುಳವಾಡ ಏತ ನೀರಾವರಿ 3ನೇ ಹಂತದ ಯೋಜನೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

    ನಮ್ಮದು ಡಬಲ್ ಇಂಜಿನ್ ಸರ್ಕಾರ. ದೇಶದ ಇತಿಹಾಸದಲ್ಲಿ ಅತಿ ಹೆಚ್ಚು ನೀರಾವರಿ ಕ್ಷೇತ್ರಕ್ಕೆ ಜನರ ಉದ್ಧಾರಕ್ಕಾಗಿ ಹಣ ನೀಡಿದೆ. ರಸ್ತೆ, ಕುಡಿಯುವ ನೀರು, ಜೆಜೆಎಂ, ಸಿಸಿ ರಸ್ತೆ, ವಿದ್ಯುತ್, ಸರ್ಕಾರದ ಅಭಿವೃದ್ಧಿ ಪರ ಚಿಂತನೆಯಿಂದ ಇಂದು ಮಹಿಳಾ ಸ್ವ-ಸಹಾಯ ಸಂಘದ ಆಯ್ದ ಕಲವು ಸಂಘಗಳಿಗೆ 1 ಲಕ್ಷ ರೂ. ಸಹಾಯ ಧನ ಸಿಗುತ್ತಿದೆ. ಕ್ಷೇತ್ರದ ಪೀರಾಪುರ ಮತ್ತು ಬೂದಿಹಾಳ ಏತ ನೀರಾವರಿ ಯೋಜನೆಗೆ 798 ಕೋಟಿ ರೂ. ಅನುದಾನ ಲಭಿಸಿದ್ದು, ಇನ್ನೆರಡು ತಿಂಗಳಲ್ಲಿ ನೀರಾವರಿ ಸೌಲಭ್ಯ ಸಿಗಲಿದೆ. ಎರಡೂವರೆ ವರ್ಷದ ಅವಧಿಯಲ್ಲಿ 2,700 ಕೋಟಿ ರೂ. ಅನುದಾನ ವ್ಯಯಿಸಲಾಗಿದೆ ಎಂದರು.

    ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಮಾತನಾಡಿ, ಚುನಾವಣೆ ಹೊಸ್ತಿಲಲ್ಲಿ ನಾಟಕ ಕಂಪನಿಗಳು ಬರುತ್ತಿವೆ. 6 ತಿಂಗಳು ಕ್ಷೇತ್ರದಲ್ಲಿ ತಿರುಗಾಡಿ ಜಾತ್ರೆಗಳಿಗೆ ಬಂದು ನಂತರ ಮಾಯವಾಗುತ್ತಾರೆ. ಇಂತವರಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿಲ್ಲ. ಎಸ್‌ಸಿ, ಎಸ್‌ಟಿ ಸಮುದಾಯದ ಮೀಸಲಾತಿ ಹೆಚ್ಚಿಸಲಾಗಿದೆ. ತಳವಾರ ಸಮುದಾಯಕ್ಕೆ ಎಸ್‌ಟಿ ಪ್ರಮಾಣ ಪತ್ರ ನೀಡಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಭಿವೃದ್ಧಿಗೆ ಒತ್ತು ನೀಡಿವೆ. ಇದನ್ನು ಸಹಿಸದ ವಿರೋಧಿಗಳು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಪರ ಕಾಮಗಾರಿಗಳಿಗೆ ಬಿಜೆಪಿಯವರು 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆ ಎಂದು ಜನರನ್ನು ನಂಬಿಸಲು ಹೊರಟಿದ್ದಾರೆ ಎಂದರು.

    ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ (ಕುಚಬಾಳ), ಸೋಮನಗೌಡ (ಅಪ್ಪುಗೌಡ) ಪಾಟೀಲ, ನ್ಯಾಯವಾದಿ ಜಿ.ಬಿ. ಬಾಗೇವಾಡಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಮಸಬಿನಾಳ, ಬಿಜೆಪಿ ಮಂಡಲ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ಪ್ರಭುಗೌಡ ಬಿರಾದಾರ, ಬಸವರಾಜ ಶಿವಯೋಗಿ, ಸಿದ್ದು ಭುಳ್ಳಾ, ಚಂದ್ರಶೇಖರ ನಾಡಗೌಡ, ಸುರೇಶಗೌಡ ಪಾಟೀಲ, ಹಣಂತರಾಯ ಗುಣಕಿ, ಮಲ್ಲಣ್ಣ ಲಚ್ಯಾಣ, ಸಾಹೇಬಗೌಡ ಪಾಟೀಲ, ಮೂಹನಗೌಡ ಹಿರೆಗೌಡರ ಇತರರಿದ್ದರು. ಕೆಬಿಜೆಎನ್‌ಎಲ್‌ನ ಜೆ.ಟಿ. ರಾಠೋಡ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

    ನಾನು ಜಾತಿ ರಾಜಕಾರಣ ಮಾಡಲ್ಲ. ಅಭಿವೃದ್ಧಿಯೇ ನನ್ನ ಜಾತಿ. ಕಳೆದ ಐದು ವರ್ಷ ಕ್ಷೇತ್ರದ ಜನತೆ ನನ್ನನ್ನು ಜೀತದಾಳಾಗಿ ಇಟ್ಟುಕೊಂಡಿದ್ದಾರೆ. ಸರಿಯಾಗಿ ಕೆಲಸ ಮಾಡಿದ್ದರೆ ಮತ್ತೊಮ್ಮೆ ಅವಕಾಶ ನೀಡಿ.
    ಸೋಮನಗೌಡ ಪಾಟೀಲ ಸಾಸನೂರ ಶಾಸಕರು, ದೇವರಹಿಪ್ಪರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts