More

    ರಾಣಿಝುರಿಯಲ್ಲಿ ಪ್ರವಾಸಿಗರಿಂದ ಫೈರ್​ಕ್ಯಾಂಪ್

    ಬಣಕಲ್: ಬಲ್ಲಾಳರಾಯನ ದುರ್ಗ ಸಮೀಪದ ರಾಣಿಝುರಿ ಅರಣ್ಯ ಪ್ರದೇಶದಲ್ಲಿ ಕೆಲ ಪ್ರವಾಸಿಗರು ಫೈರ್ ಕ್ಯಾಂಪ್ ನಡೆಸಿದ್ದಾರೆ ಎಂದು ಪರಿಸರ ಪ್ರಿಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಾಣಿಝುರಿ ಪ್ರಪಾತದ ಸಮೀಪ ಪ್ರವಾಸಿಗರು ರಾತ್ರಿ ಬಿಡಾರ ಹೂಡಿ ಬೆಂಕಿ ಹಾಕಿ ಫೈರ್ ಕ್ಯಾಂಪ್ ನಡೆಸಿದ್ದಾರೆ. ರಾಣಿಝುರಿ ಪ್ರದೇಶ ಮೀಸಲು ಅರಣ್ಯ ಪ್ರದೇಶವಾಗಿರುವುದರಿಂದ ಅರಣ್ಯವನ್ನು ಪ್ರವೇಶಿಸಲು ಅರಣ್ಯ ಇಲಾಖೆ ಅನುಮತಿ ಕಡ್ಡಾಯ. ಜತೆಗೆ ಅರಣ್ಯದಲ್ಲಿ ಬೆಂಕಿ ಹಾಕುವುದರಿಂದ ಅರಣ್ಯದಲ್ಲಿ ಬೆಂಕಿ ಹರಡಿ ಅರಣ್ಯ ನಾಶವಾಗುವ ಸಾಧ್ಯತೆಯೂ ಹೆಚ್ಚಿದೆ ಎಂದು ದೂರಿದ್ದಾರೆ.

    ರಾಣಿಝುರಿ ಪ್ರಪಾತದ ಸಮೀಪ ಅರಣ್ಯ ಸಿಬ್ಬಂದಿಗಳು ಗಸ್ತು ತಿರುಗುತ್ತಿರುತ್ತಾರೆ. ಆದರೂ ಕಿಡಿಗೇಡಿಗಳು, ಅರಣ್ಯ ಇಲಾಖೆ ಕಣ್ತಪ್ಪಿಸಿ ಅರಣ್ಯದಲ್ಲಿ ಫೈರ್ ಕ್ಯಾಂಪ್ ನಡೆಸಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಚೇತನ್ ಗಸ್ತಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts