More

    2 ಎಫ್​ಐಆರ್​ಗಳಿಂದ ಯಾವುದೇ ಕ್ರಮ ಜರುಗಿಸಲು ಸಾಧ್ಯ ಇಲ್ಲ ಎಂದ ಜೆಎನ್​ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಷೆ ಘೋಷ್​

    ನವದೆಹಲಿ: ಜವಾಹರ‌ಲಾಲ್ ನೆಹರು ವಿಶ್ವವಿದ್ಯಾಲಯದ ಆಡಳಿತ ಮಂಡಳಿ (ಜೆಎನ್​ಯು) ನನ್ನ ವಿರುದ್ಧ ಆತುರವಾಗಿ ನೀಡಿರುವ ದೂರಿನಿಂದ ಯಾವುದೇ ಕ್ರಮ ಜರುಗಿಸಲು ಆಗುವುದಿಲ್ಲ ಎಂದು ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಷೆ ಘೋಷ್ ಹೇಳಿದ್ದಾರೆ.

    ನಾನು ಯಾವುದೇ ಹಿಂಸಾಚಾರ ಎಸಗಿಲ್ಲ. ಕ್ರಮ ತೆಗೆದುಕೊಳ್ಳಲು ಪೊಲೀಸರು ಮೊದಲು ನನ್ನ ವಿರುದ್ಧ ಪುರಾವೆ ಹೊಂದಿರಬೇಕು ಎಂದು ಅವರು ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

    ಜೆಎನ್​ಯು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ನನ್ನ ವಿರುದ್ಧ ಎರಡು ಎಫ್​ಐಆರ್​ ದಾಖಲಿಸಿದ್ದಾರೆ. ಈ ದೂರುಗಳು ಹಲವು ದಿನಗಳ ಹಿಂದೆಯೇ ಕಳುಹಿಸಲಾಗಿತ್ತು ಎಂದು ವಿವಿ ಹೇಳಿದೆ. ಪೊಲೀಸರ ಬಳಿ ಪುರಾವೆ ಇಲ್ಲದ ಹಿನ್ನೆಲೆಯಲ್ಲಿ ಅವರು ನನ್ನ ವಿರುದ್ಧ ಕ್ರಮ ಜರುಗಿಸಲು ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ನಾನು ಹಾಗೂ ಇತರ 26 ವಿದ್ಯಾರ್ಥಿಗಳ ಮೇಲೆ ವಿಶ್ವವಿದ್ಯಾನಿಲಯದ ಸರ್ವರ್ ಕೊಠಡಿ ಧ್ವಂಸಗೊಳಿಸಿದ ಹಾಗೂ ವಿದ್ಯಾರ್ಥಿಗಳ ನೋಂದಣಿ ಮಾಡುತ್ತಿದ್ದ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪ ಇದೆ. ಆದರೆ ಈ ಆರೋಪಗಳು ಸುಳ್ಳು. ಸರ್ವರ್​ ಕೊಠಡಿ ಧ್ವಂಸಗೊಂಡ ಪ್ರಕರಣಕ್ಕೆ ಸಂಬಂಧಿದಂತೆ ನನ್ನ ಬಳಿ ಆಡಿಯೋ ದಾಖಲೆ ಹಾಗೂ ಕೆಲವು ಸ್ಕ್ರೀನ್‌ಶಾಟ್‌ ಪುರಾವೆಗಳು ಇವೆ. ಈ ಗಲಾಟೆ ಮಾಡಿದವರು ಎಬಿವಿಪಿ ಕಾರ್ಯಕರ್ತರು ಎಂದು ಅವರು ಆರೋಪಿಸಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts