More

    ಹೊಸಕೋಟೆಯಲ್ಲಿ ಪ್ರತಿಭಟನೆ, ಲಾಠಿ ಚಾರ್ಜ್: ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಎಫ್​ಐಆರ್

    ಹೊಸಕೋಟೆ: ಶಾಸಕ ಶರತ್ ಬಚ್ಚೇಗೌಡ ಸೇರಿದಂತೆ 15 ಜನರ ವಿರುದ್ಧ ಹೊಸಕೋಟೆ ‌ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

    ನಗರದ ವಿವಿಧ ವಾರ್ಡ್​ಗಳಲ್ಲಿ ಶನಿವಾರ ಸಚಿವ ಎಂಟಿಬಿ ನಾಗರಾಜ್​ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿಪೂಜೆ ವೇಳೆ ಶಿಷ್ಟಾಚಾರ ಉಲ್ಲಂಘನೆ ಆರೋಪ ಮಾಡಿದ್ದ ಶಾಸಕ ಶರತ್​ ಬಚ್ಚೇಗೌಡ ಬೆಂಬಲಿಗರು ಗದ್ದಲ ನಡೆಸಿದ್ದರು. ಈ ವೇಳೆ ಪೊಲೀಸರು ಮತ್ತು ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರು. ಪೊಲೀಸರು ಹಾಗೂ ಶಾಸಕ ಶರತ್​ ಬೆಂಬಲಿಗರ ನಡುವೇ ಹೈಡ್ರಾಮಾ ನಡೆದಿತ್ತು. ಶಾಸಕರ ಬೆಂಬಲಿಗರು ಪೊಲೀಸ್​ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿ, ಬಳಿಕ ರಾಷ್ಟ್ರೀಯ ಹೆದ್ದಾರಿ-75ನ್ನು ಕೆಲ ಕಾಲ ಬಂದ್​ ಮಾಡಿ ಆಕ್ರೋಶ ಹೊರಹಾಕಿದ್ದರು. ಇದನ್ನೂ ಓದಿರಿ ನಿವೃತ್ತ ಉಪನ್ಯಾಸನ ಪತ್ನಿ, ಇಬ್ಬರು ಮಕ್ಕಳು ನಾಲೆಗೆ ಹಾರಿ ಆತ್ಮಹತ್ಯೆ! ಸಾವಿಗೂ ಮುನ್ನ ನಡೆದಿತ್ತು ವಾಕ್ಸಮರ

    ಈ‌ ಹಿನ್ನೆಲೆಯಲ್ಲಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಮತ್ತು ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದ ಹಿನ್ನೆಲೆಯಲ್ಲಿ ಶಾಸಕರು ಸೇರಿದಂತೆ 15 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

    ಪೊಲೀಸರ ಅಮಾನತಿಗೆ ಪಟ್ಟು: ತಾಲೂಕಿನಲ್ಲಿ ನಡೆಯುವ ಸರ್ಕಾರಿ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಶಾಸಕರ ಉಪಸ್ಥಿತಿ ಇಲ್ಲದೆ ಶಿಷ್ಟಾಚಾರ ಬದಿಗೊತ್ತಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಈ ಬಗ್ಗೆ ಪಕ್ಷದ ನಾಯಕರು ಅಧಿಕಾರಿಗಳನ್ನು ಪ್ರಶ್ನಿಸಲು ಹೋದಾಗ ಪೊಲೀಸರು ದರ್ಪ ತೋರಿದ್ದಾರೆ. ಇದು ಸಚಿವರನ್ನು ಮೆಚ್ಚಿಸಲೋ ಅಥವಾ ಅವರ ಆದೇಶದ ಮೇರೆಗೆ ಮಾಡಿದ್ದಾರೋ ಪೊಲೀಸರೇ ತಿಳಿಸಬೇಕು ಎಂದು ಕಿಡಿಕಾರಿರುವ ಶಾಸಕ ಶರತ್​, ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ವಿಧಾನಸಭೆ ಅಧ್ಯಕ್ಷರಿಗೆ ಪತ್ರ ಬರೆದು ಕಲಾಪದಲ್ಲಿ ಈ ಬಗ್ಗೆ ಪ್ರಶ್ನಿಸಲಾಗುವುದು. ಪ್ರಕರಣಕ್ಕೆ ಕಾರಣರಾದ ಪೊಲೀಸರನ್ನು ಅಮಾನತುಗೊಳಿಸುವಂತೆ ಒತ್ತಾಯಿಸುವೆ. ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಶರತ್​ ಬಚ್ಚೇಗೌಡ ಎಚ್ಚರಿಸಿದ್ದಾರೆ.

    ಹೊಸಕೋಟೆಯಲ್ಲಿ ಪ್ರತಿಭಟನೆ, ಲಾಠಿ ಚಾರ್ಜ್: ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಎಫ್​ಐಆರ್ಶಾಸಕರ ಬೆಂಬಲಿಗರಿಂದ ಗೂಂಡಾ ವರ್ತನೆ: ಹೊಸಕೋಟೆ ನಗರಸಭೆ ಅಧ್ಯ ಮತ್ತು ಪೌರಾಯುಕ್ತರು, ಶುಕ್ರವಾರ 8 ಕೋಟಿ ರೂ.ಮೊತ್ತದ ಕಾಮಗಾರಿಗಳ ಶಂಕುಸ್ಥಾಪನೆ ಬಗ್ಗೆ ಚರ್ಚಿಸುವಾಗ ಶನಿವಾರ ಮತ್ತು ಭಾನುವಾರ ಅಧಿವೇಶನ ಇರುವುದಿಲ್ಲ. ಇವೆರಡರಲ್ಲಿ ಯಾವುದಾದರೊಂದು ದಿನ ಶಂಕುಸ್ಥಾಪನೆಗೆ ದಿನಾಂಕ ನಿಗದಿಪಡಿಸುವಂತೆ ಹಾಗೂ ಸ್ಥಳಿಯ ಶಾಸಕರನ್ನು ಆಹ್ವಾನಿಸುವಂತೆ ತಿಳಿಸಿದ್ದೆ. ಅದರಂತೆ ಶನಿವಾರ ನಾಲ್ಕು ವಾರ್ಡ್​ಗಳಲ್ಲಿ ಶಂಕುಸ್ಥಾಪನೆ ನೆರವೇರಿಸಲು ದಿನಾಂಕ ನಿಗದಿಪಡಿಸಿ ಶುಕ್ರವಾರವೇ ಪೌರಾಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯ ಶಾಸಕರನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದರು. ಅದಕ್ಕೆ ಶಾಸಕರಿಂದಲೂ ಗ್ರೀನ್​ ಸಿಗ್ನಲ್​ ಸಿಕ್ಕಿತ್ತು. ಶನಿವಾರ ಶಂಕುಸ್ಥಾಪನೆಗೆ ಸ್ಥಳೀಯ ಶಾಸಕರು ಬಂದಿರಲಿಲ್ಲ. ಆದರೆ ಅವರ ನೂರಾರು ಬೆಂಬಲಿಗರು ಸ್ಥಳಕ್ಕೆ ಬಂದು ಗೂಂಡಾಗಳಂತೆ ವರ್ತಿಸಿದ್ದಾರೆ. ಇಲ್ಲಿ ಯಾವುದೇ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ. ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ನಾನು ಎಂದೂ ರಾಜಕೀಯ ಮಾಡಿಲ್ಲ ಎಂದು ಸಚಿವ ಎಂಟಿಬಿ ನಾಗರಾಜ್​ ಸ್ಪಷ್ಟಪಡಿಸಿದ್ದಾರೆ.

    ಛೇ..ಛೇ.. ಇಂದೆಂಥ ಅಸಹ್ಯ? ಕಲಾಪದಲ್ಲೇ ಕೂತು ಅಶ್ಲೀಲ ವಿಡಿಯೋ ನೋಡಿದ ಕಾಂಗ್ರೆಸ್​ ಎಂಎಲ್​ಸಿ

    ನಿವೃತ್ತ ಉಪನ್ಯಾಸನ ಪತ್ನಿ, ಇಬ್ಬರು ಮಕ್ಕಳು ನಾಲೆಗೆ ಹಾರಿ ಆತ್ಮಹತ್ಯೆ! ಸಾವಿಗೂ ಮುನ್ನ ನಡೆದಿತ್ತು ವಾಕ್ಸಮರ

    ಪತ್ನಿಯನ್ನ ಜಾತ್ರೆಗೆ ಕಳಿಸಿ ಮನೆಗೆ ಬಂದವ ಪರಸ್ತ್ರೀ ಜತೆ ಹೆಣವಾದ! ಆ ಕೋಣೆಯಲ್ಲಿ ನಡೆದಿದ್ದೇನು?

    ಅಂಚೆ ಕಚೇರಿಯಲ್ಲೂ ನಿಮ್ಮ ಹಣ ಸೇಫಲ್ಲ! ಬಡವರ ಹಣ ದೋಚುತ್ತಾರೆ ಖತರ್ನಾಕ್ ಅಧಿಕಾರಿಗಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts