More

    ಸೈಕಲ್​ ಏರಿ ಹೊರಟ ಕಾಂಗ್ರೆಸ್​ ನಾಯಕ ದಿಗ್ವಿಜಯ್​ ಸಿಂಗ್​ ವಿರುದ್ಧ ಎಫ್​ಐಆರ್​ ದಾಖಲಾಗಿದ್ದೇಕೆ?

    ಭೋಪಾಲ್​: ಮಧ್ಯಪ್ರದೇಶದ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

    ಪೆಟ್ರೋಲ್​, ಡೀಸೆಲ್​ಗಳ ಬೆಲೆ ಸತತವಾಗಿ ಏರುತ್ತಿರುವದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಆರೋಪಿಸಿ, ಕೇಂದ್ರ ಸರ್ಕಾರ ಮತ್ತು ಮಧ್ಯಪ್ರದೇಶ ರಾಜ್ಯಸರ್ಕಾರದ ವಿರುದ್ಧ ‘ಸೈಕಲ್​’ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್​ ಮುಖಂಡನ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.

    ಯಾವುದೇ ಪ್ರತಿಭಟನೆ ನಡೆಸುವುದಿದ್ದರೂ ಅನುಮತಿ ತೆಗೆದುಕೊಳ್ಳಬೇಕು. ಅದರಲ್ಲೂ ಕರೊನಾ ವೈರಸ್​ ಸಾಂಕ್ರಾಮಿಕ ರೋಗದ ಈ ಸಂದರ್ಭದಲ್ಲಿ ಗುಂಪು ಸೇರುವುದನ್ನೆಲ್ಲ ನಿಷೇಧಿಸಲಾಗಿದೆ. ಆದರೆ ದಿಗ್ವಿಜಯ ಸಿಂಗ್​ ಯಾವುದೇ ಅನುಮತಿ ಪಡೆದಿರಲಿಲ್ಲ. ಇದನ್ನೂ ಓದಿ: ರಾಹುಲ್‌ ಗಾಂಧಿಯೇ ಪಕ್ಷ ಮುನ್ನಡೆಸಲಿ: ಸಚಿನ್‌ ಪೈಲಟ್‌

    ರಾಜ್ಯಸಭಾ ಸದಸ್ಯರೂ ಆಗಿರುವ ದಿಗ್ವಿಜಯ ಸಿಂಗ್​ ಅವರು ಹಲವು ಕಾಂಗ್ರೆಸ್​ ಸದಸ್ಯರೊಂದಿಗೆ ಸೇರಿ ಸೈಕಲ್​ ತುಳಿಯುತ್ತ, ಪ್ರತಿಭಟನೆ ನಡೆಸುತ್ತಿದ್ದರು. ಇವರೆಲ್ಲ ರೋಶನ್​ಪುರ ಚೌಕದಿಂದ ಮುಖ್ಯಮಂತ್ರಿ ಶಿವರಾಜ್ ಚೌಹಾಣ್​ ಅವರ ನಿವಾಸಕ್ಕೆ ಸೈಕಲ್​​ನಲ್ಲಿ ತೆರಳುತ್ತಿದ್ದರು. ಇದನ್ನೂ ಓದಿ: ಭಾರತ-ಚೀನಾ ಗಡಿ ಬಿಕ್ಕಟ್ಟು: ಪರಿಸ್ಥಿತಿ ಗಂಭೀರವಾಗಿದೆ ಎಂದ ಬ್ರಿಟಿಷ್​ ಪ್ರಧಾನಿ

    ಮಾರ್ಗ ಮಧ್ಯೆಯಲ್ಲಿಯೇ ತಡೆದ ಪೊಲೀಸರು ಅವರನ್ನೆಲ್ಲ ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿದ್ದಾರೆ. (ಏಜೆನ್ಸೀಸ್​)

    50ಸಾವಿರದ ಗಡಿ ದಾಟಿದ ಚಿನ್ನದ ದರ..ಮುಂದಿನ ವಾರ ಇನ್ನೂ ಹೆಚ್ಚಾಗುವ ನಿರೀಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts