More

    ಪೀರಿಯಡ್ಸ್ ಇಲ್ಲದಿರುವುದನ್ನು ಸಾಬೀತು ಪಡಿಸಲು ವಿದ್ಯಾರ್ಥಿನಿಯರ ಒಳ ಉಡುಪು ತೆಗೆಸಿದ ಪ್ರಾಂಶಪಾಲರ ವಿರುದ್ಧ ಎಫ್​ಐಆರ್

    ಅಹಮದಾಬಾದ್​: ಪೀರಿಯಡ್ಸ್ ಇಲ್ಲದಿರುವುದನ್ನು ಸಾಬೀತು ಪಡಿಸಲು 64 ವಿದ್ಯಾರ್ಥಿನಿಯರ ಒಳ ಉಡುಪನ್ನು ಬಲವಂತವಾಗಿ ತೆಗೆಯಿಸಿದ ಗುಜರಾತಿನ ಭುಜ್​ ಜಿಲ್ಲೆಯ ಕಾಲೇಜು ಒಂದರ ಪ್ರಾಂಶುಪಾಲರ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.

    ಪ್ರಾಂಶುಪಾಲರು ಮಾತ್ರವಲ್ಲದೆ ಹಾಸ್ಟೆಲ್​ನ ಇಬ್ಬರು ಮಹಿಳಾ ಸಹಾಯಕರು ಮತ್ತು ವಾರ್ಡನ್​ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

    ಪ್ರಕರಣವು ಗುಜರಾತಿನ ಭುಜ್​ ಜಿಲ್ಲೆಯಲ್ಲಿರುವ ಶ್ರೀ ಶಹಜಾನಂದ ಗರ್ಲ್ಸ್​ ಇನ್​ಸ್ಟಿ ಟ್ಯೂಟ್​ಗೆ ಸಂಬಂಧಿಸಿದ್ದಾಗಿದೆ. ಇತರೆ ಮೂವರು ಸಿಬ್ಬಂದಿಯ ಸಹಾಯದಿಂದ ಪ್ರಾಂಶುಪಾಲರು ಬಲವಂತವಾಗಿ ನಮ್ಮ ಒಳ ಉಡುಪುಗಳನ್ನು ತೆಗೆಯಿಸಿದರು. ಅಲ್ಲದೆ, ಮೆರವಣಿಗೆ ಮಾಡಿ ನಮ್ಮ ಅವಮಾನಿಸಿದರು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

    ಪೀರಿಯಡ್ಸ್​ ವಿದ್ಯಾರ್ಥಿನಿಯರನ್ನು ಬೇರ್ಪಡಿಸುವ ಅಭ್ಯಾಸವನ್ನು ಕಾಲೇಜು ಅನುಸರಿಸುತ್ತಿದ್ದು, ಪಿರಿಯಡ್ಸ್​ ವಿದ್ಯಾರ್ಥಿನಿಯರೊಂದಿಗೆ ಪಿರಿಯಡ್ಸ್​ ಹೊಂದಿಲ್ಲದ ವಿದ್ಯಾರ್ಥಿನಿಯರು ಸಂಪರ್ಕ ಹೊಂದುವಂತಿಲ್ಲ. ಪೀರಿಯಡ್ಸ್​ ಹೊಂದಿರುವ ವಿದ್ಯಾರ್ಥಿನಿಯರು ಹಾಸ್ಟೆಲ್​ ಅಡುಗೆ ಕೋಣೆ ಮತ್ತು ದೇವಸ್ಥಾನದಿಂದ ದೂರ ಉಳಿಯಬೇಕೆಂಬ ನಿಯಮಗಳನ್ನು ಕಾಲೇಜು ಹೊಂದಿದೆ ಎಂಬುದು ಪೊಲೀಸ್​ ವರದಿಯಿಂದ ತಿಳಿದುಬಂದಿದೆ.

    ಸ್ವಾಮಿ ನಾರಾಯಣ ಮಂದಿರ ಅನುಯಾಯಿಗಳ ಆಡಳಿತ ಮಂಡಳಿ ಅಧೀನ ಕಾಲೇಜು ಕಾರ್ಯನಿರ್ವಹಿಸುತ್ತಿದ್ದು, 1,500 ವಿದ್ಯಾರ್ಥಿನಿಯರು ಇಲ್ಲಿ ಓದುತ್ತಿದ್ದಾರೆ. ದೂರಿನ ಬಗ್ಗೆ ತಿಳಿಯುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಪ್ರಾಂಶುಪಾಲರು ವಿದ್ಯಾರ್ಥಿನಿಯರು ಕಾಲೇಜಿನ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಪ್ರಕರಣ ಬಗ್ಗೆ ಮಾತನಾಡಿರುವ ಓರ್ವ ವಿದ್ಯಾರ್ಥಿನಿ, ಈ ವಾರ ತರಗತಿ ನಡುವೆ ಮಹಿಳೆಯರು ಅಡ್ಡಿಪಡಿಸಿದರು. ಯಾರು ಪಿರಿಯಡ್ಸ್​ ಹೊಂದಿದ್ದೀರಾ ಎಂದು ಸಾರ್ವಜನಿಕವಾಗಿ ಕೇಳಿದರು. ಬಳಿಕ ಬಲವಂತವಾಗಿ ಶೌಚಗೃಹದೊಳಗೆ ಕರೆದೊಯ್ದು ಒಳ ಉಡುಪಗಳನ್ನು ತೆಗೆಸಿದರು ಎಂದು ದೂರಿದಳು. ಈ ಹಿಂಸೆ ನಿರಂತರವಾಗಿ ನಡೆಯುತ್ತಿದೆ ಎಂದು ಮತ್ತೋರ್ವ ವಿದ್ಯಾರ್ಥಿನಿ ನೋವು ತೋಡಿಕೊಂಡಳು.

    ವಿದ್ಯಾರ್ಥಿನಿಯರು ಕೋರ್ಟ್​ ಮೇಟ್ಟಿಲೇರಲು ಸ್ವಾಗತ ಇದೆ. ಆದರೆ, ಈ ಎರಡು ನಿರ್ಬಂಧಗಳನ್ನು ನಾವು ಹಿಂಪಡೆಯುವುದಿಲ್ಲ. ಬೇಕಾದರೆ, ಅವರು ಕಾಲೇಜು ಮತ್ತು ಹಾಸ್ಟೆಲ್ ತ್ಯಜಿಸಲಿ​, ಅದಕ್ಕೂ ಮುನ್ನ ನಮಗೆ ಏನು ಆಗಿಲ್ಲ ಎಂದು ಬರೆದುಕೊಡಬೇಕೆಂದು ಕಾಲೇಜು ಟ್ರಸ್ಟಿ ಆಗಾಗ ಹೇಳಿದ್ದಾಗಿ ವಿದ್ಯಾರ್ಥಿನಿಯರು ತಿಳಿಸಿದ್ದಾರೆ. ಅಲ್ಲದೆ, ಈ ಪ್ರಕರಣವನ್ನು ರಾಷ್ಟ್ರೀಯ ಮಹಿಳಾ ಆಯೋಗವು ಖಂಡಿಸಿ, ವಿವರಣೆ ಕೋರಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts