More

    ಹೆಚ್ಚುವರಿ ಪಡೆದ ಹಣ ರೋಗಿಗಳಿಗೆ ವಾಪಸ್: ಏಳು ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ ಆದೇಶ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೋಗಿಗಳ ಕಡೆಯವರಿಂದ ಅಕ್ರಮವಾಗಿ ವಸೂಲಿ ಮಾಡಿದ ಒಟ್ಟು 3.69 ಲಕ್ಷ ರೂ.ವನ್ನು ಅವರಿಗೆ ವಾಪಸ್ ನೀಡುವಂತೆ ಸಂಬಂಧಪಟ್ಟ ಏಳು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿದ ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆಯ ಜಿಲ್ಲಾ ಮಟ್ಟದ ಕುಂದುಕೊರತೆ ಪರಿಹಾರ ಸಮಿತಿ ಸಭೆಯಲ್ಲಿ ಅವರು ಈ ಆದೇಶ ಹೊರಡಿಸಿದರು.

    ನಗರದ ಒಂದು ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಮಟ್ಟ ಕಡಿಮೆಯಾಗುತ್ತಿದ್ದ ರೋಗಿಯನ್ನು ಐಸಿಯುಗೆ ದಾಖಲಿಸುವ ಬದಲು ಡಿಲಕ್ಸ್ ರೂಂನಲ್ಲಿ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ. ಇದರಿಂದ ರೋಗಿಯು ಯೋಜನೆಯಡಿ ಚಿಕಿತ್ಸೆ ಪಡೆಯಲು ತಪ್ಪಿ ಹೋಗಿರುವ ಹಿನ್ನೆಲೆಯಲ್ಲಿ ರೋಗಿಗೆ 50 ಸಾವಿರ ರೂ. ವಾಪಸ್ ನೀಡುವಂತೆ ಆಸ್ಪತ್ರೆ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ರೋಗಿಯ ನೈಜ ಬಿಲ್ 2 ಲಕ್ಷ ರೂ. ಕಳೆದು 78 ಸಾವಿರ ರೂ. ರೋಗಿಗೆ ವಾಪಸ್ ನೀಡುವಂತೆ ಆದೇಶಿಸಲಾಗಿದೆ.

    ಮತ್ತೊಂದು ಆಸ್ಪತ್ರೆಯಲ್ಲಿ ‘ನಿಮ್ಮ ಡಾಕ್ಟ್ರು ಯೋಜನೆಯಡಿ ನೋಂದಣಿ ಆಗಿರುವುದಿಲ್ಲ. ಡಾಕ್ಟ್ರು ಬದಲಾಯಿಸಿ ತೊಂದರೆಯಾದರೆ ನೀವೇ ಜವಾಬ್ದಾರರು’ ಎಂಬ ಭಯ ಹುಟ್ಟಿಸಿ ರೋಗಿಯನ್ನು ದಾಖಲಿಸಿ ಚಿಕಿತ್ಸೆ ಒದಗಿಸಿದ ಬಗ್ಗೆ ದೂರಲಾಗಿತ್ತು. ಈ ಬಗ್ಗೆ ವಿಚಾರಣೆ ಸಂದರ್ಭ ಆಸ್ಪತ್ರೆ ಮುಖ್ಯಸ್ಥರು ಒದಗಿಸಿದ ಉತ್ತರ ತೃಪ್ತಿದಾಯಕವಾಗಿ ಕಂಡು ಬರದ ಹಿನ್ನೆಲೆಯಲ್ಲಿ 1.50 ಲಕ್ಷ ರೂ. ರೋಗಿಗೆ ವಾಪಸ್ ಮಾಡುವಂತೆ ಆಸ್ಪತ್ರೆ ಮುಖ್ಯಸ್ಥರಿಗೆ ಸೂಚಿಸಲಾಗಿದೆ.

    ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇದ್ದರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಪ್ರಕರಣವೊಂದರಲ್ಲಿ ರೋಗಿಯು ಸಮರ್ಪಕ ದಾಖಲೆ ಒದಗಿಸಿದರೆ ಮಾತ್ರ ಯೋಜನೆ ಹಣ ಒದಗಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts