More

    ಬಡವರಿಗೆ ನೀಡಬೇಕಾದ ಅನ್ನಭಾಗ್ಯ ಅಕ್ಕಿ ಎಲ್ಲಿ ಹೋಗ್ತಿದೆ ಗೊತ್ತಾ..!?

    ಹಾವೇರಿ: ಕರೊನಾ ಆತಂಕದ ನಡುವೆಯೂ ಬಡವರಿಗೆ ಸಲ್ಲಬೇಕಾಗಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯು ದಂಧೆಕೋರರ ಹೊಟ್ಟೆ ತುಂಬಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

    ಲಾಕ್‌ಡೌನ್‌ನಿಂದಾಗಿ ಹಸಿದ ಬಡವರು ತುತ್ತು ಅನ್ನಕ್ಕಾಗಿಯೂ ಪರದಾಡುತ್ತಿದ್ದರೆ ಹೆಚ್ಚಿನ ಹಣಕ್ಕಾಗಿ ಅನ್ನಭಾಗ್ಯ ಅಕ್ಕಿಯನ್ನು ಕೆಲವರು ಮಾರಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಅಕ್ರಮ ಅನ್ನಭಾಗ್ಯ ಅಕ್ಕಿಯನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿಟ್ಟ ಗೋಡೌನ್ ಮೇಲೆ ಬುಧವಾರ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಇದನ್ನೂ ಓದಿರಿ ಸೆಲ್ಫಿ ವಿಡಿಯೋ ಮಾಡಿ ಮಗಳನ್ನೂ ಕೊಂದ ತಂದೆ ಆತ್ಮಹತ್ಯೆ

    ಹಾವೇರಿ ನಗರದ ಶಿವಬಸವೇಶ್ವರ ಎಪಿಎಂಸಿ ಆವಣದಲ್ಲಿರುವ ಗೋಡೌನ್ ಮೇಲೆ ಆಹಾರ ಇಲಾಖೆ, ಐಜಿ ಸ್ಕ್ವಾಡ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದರು. ಇದು ಶಿವಯೋಗಿ ಪಟ್ಟಣಶೆಟ್ಟಿ ಎಂಬುವರಿಗೆ ಸೇರಿದ ಸಿದ್ಧಲಿಂಗೇಶ್ವರ ಟ್ರೇಡರ್ಸ್‌ಗೆ ಸಂಬಂಧಿಸಿದ ಗೋಡೌನ್ ಎಂದು ಹೇಳಲಾಗಿದೆ.

    ಟ್ರೇಡರ್ಸ್ ಮಾಲೀಕ ಶಿವಯೋಗಿ, ಕಾರ್ಮಿಕ ರವಿ ನಾಗನೂರು, ಲಾರಿ ಚಾಲಕ ಶಿವಾ ಕರಗಲ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜತೆಗೆ 634 ಪ್ಯಾಕೆಟ್, 250 ಕ್ವಿಂಟಲ್ ಗೂ ಅಧಿಕ ಅನ್ನಭಾಗ್ಯ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ 3.8 ಲಕ್ಷ ರೂ. ಆಗುತ್ತದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಹಾವೇರಿ ಶಹರ ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿರಿ ಜೂಮ್ ವಿಡಿಯೋ ಕಾಲ್​ನಲ್ಲೇ ಅಪರಾಧಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts