More

    ಕೇಂದ್ರ ಬಜೆಟ್​ 2020: ಸ್ಟಾರ್ಟ್​ಅಪ್​ಗಳ ಅಭಿವೃದ್ಧಿಗಾಗಿ ತೆರಿಗೆ ಪಾವತಿ ಸರಳ ಪ್ರಕ್ರಿಯೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​

    ನವದೆಹಲಿ: ಸ್ಟಾರ್ಟ್​ಅಪ್​ಗಳ ಅಭಿವೃದ್ಧಿಯನ್ನು ಉತ್ತೇಜಿಸಲು ತೆರಿಗೆ ಪಾವತಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್​ ತಿಳಿಸಿದರು.

    ತೆರಿಗೆ ಪಾವತಿ ಮುಂದೂಡುವುದು, ಅವರು ಕಂಪನಿಯನ್ನು ಬಿಡುವವರೆಗೆ ಅಥವಾ ಉದ್ಯಮವನ್ನು ಮಾರಾಟ ಮಾಡಲು ಬಯಸಿದಲ್ಲಿ ಐದು ವರ್ಷಗಳವರೆಗೆ ಯಾವುದೋ ಮೊದಲೋ ಆ ಅವಧಿಯಲ್ಲಿ ತೆರಿಗೆ ಸರಳ ಪ್ರಕ್ರಿಯೆ ಮೂಲಕ ಪಾವತಿಸಬಹುದು ಎಂದರು.

    ಕಳೆದ ವರ್ಷಗಳಲ್ಲಿ ಸ್ಟಾರ್ಟ್​ಅಪ್​ಗಳು ದೇಶದ ಆರ್ಥಿಕಾಭಿವೃದ್ಧಿಗೆ ಸಹಾಯ ಮಾಡಿವೆ. ಅವುಗಳ ಬೆಳವಣಿಗೆಗೆ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ ಎಂದರು.

    25 ಕೋಟಿ ರೂ.ಗಳ ವಹಿವಾಟು ಹೊಂದಿರುವ ಹೊಸ ಉದ್ಯಮಗಳಿಗೆ 7 ವರ್ಷಗಳಲ್ಲಿ ಸತತ ಮೂರು ವರ್ಷಗಳ ಲಾಭದ ಶೇ.100 ತೆರಿಗೆ ಕಡಿತಕ್ಕೆ ಅನುಮತಿ ನೀಡಲಾಗಿದೆ. ಆದರೆ ಈ ಉದ್ಯಮಗಳ ವಹಿವಾಟು 25 ಕೋಟಿ ರೂಪಾಯಿ ಮೀರಿರಬಾರದು ಎಂದು ಮಾಹಿತಿ ನೀಡಿದರು.

    ಸ್ಟಾರ್ಟ್​ಅಪ್​ಗಳಲ್ಲಿ ಹೆಚ್ಚು ವಹಿವಾಟು ಹೊಂದಿರುವ ಉದ್ಯಮಗಳಿಗೂ ಈ ಸೌಲಭ್ಯವನ್ನು ನೀಡಲಾಗಿದೆ. ಅವುಗಳ ವಹಿವಾಟಿನ ಮೊತ್ತ 25 ಕೋಟಿ ರೂ.ಗಳಿಂದ 100 ಕೊಟಿ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದರು.

    ಆರಂಭಿಕ ಹಂತದಲ್ಲಿ ಹೊಸ ಉದ್ದಿಮೆಗಳು ಲಾಭ ಪಡೆಯುವುದು ಕಡಿಮೆ ಪ್ರಮಾಣದಲ್ಲಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ತೆರಿಗೆ ರಿಯಾಯಿತಿಯನ್ನು 7 ವರ್ಷಗಳಿಂದ 10 ವರ್ಷಗಳವರೆಗೆ ವಿಸ್ತರಿಸಲಾಗಿದೆ ಎಂದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts