More

    VIDEO| ಕೈ ತುಂಬ ಆಭರಣಗಳನ್ನಿಟ್ಟುಕೊಂಡು ಹ್ಯಾಂಡ್​ ವಾಶ್​ ಚಾಲೆಂಜ್​ ಸ್ವೀಕರಿಸಿದ ನಿರ್ದೇಶಕಿ; ಇದೆಂಥಾ ಅಸಡ್ಡೆ ಎಂದು ಪ್ರಶ್ನಿಸಿದ ನೆಟ್ಟಿಗರು

    ಮುಂಬೈ: ಕರೊನಾ ವೈರಸ್​ ಭೀತಿ ಜಗತ್ತಿನಲ್ಲಿ ಹೆಚ್ಚಾಗಿದೆ. ಕೈಗಳನ್ನು ಆಗಾಗ ತೊಳೆಯುತ್ತಿರುವುದು ಮತ್ತು ರೋಗ ಲಕ್ಷಣಗಳಿರುವವರಿಂದ ಅಂತರ ಕಾಯ್ದುಕೊಳ್ಳುವುದು ಮಾತ್ರವೇ ವೈರಸ್​ ತಡೆಗಿರುವ ದಾರಿ. ಕೈಗಳನ್ನು ತೊಳೆದುಕೊಳ್ಳುವುದಕ್ಕೂ ಒಂದು ವಿಧವಿದ್ದು ಅದನ್ನು ಜನರಿಗೆ ತಲುಪಿಸುವ ಸಲುವಾಗಿ ರಾಜಕಾರಣಿಗಳು, ಬಾಲಿವುಡ್​ ಸ್ಯಾಂಡಲ್​ವುಡ್​ ಸೇರಿದಂತೆ ಅನೇಕ ಫಿಲಂ ಸ್ಟಾರ್​ಗಳು ಸೇಫ್​ ಹ್ಯಾಂಡ್​​ ಸವಾಲನ್ನು ನಡೆಸುತ್ತಿದ್ದಾರೆ. ಈ ಚಾಲೆಂಜ್​ನಲ್ಲಿ ಬಾಲಿವುಡ್​ನ ನಿರ್ದೇಶಕಿ ಮತ್ತು ನಿರ್ಮಾಪಕಿಯೊಬ್ಬರು ಕೈ ತುಂಬ ಆಭರಣಗಳನ್ನು ಹಾಕಿಕೊಂಡು ಕೈ ತೊಳೆದಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಬಾಲಿವುಡ್​ನ ಪ್ರಸಿದ್ಧ ನಿರ್ದೇಶಕಿ ಮತ್ತು ನಿರ್ಮಾಪಕಿ ಏಕ್ತಾ ಕಪೂರ್​ ಕೇಂದ್ರ ಸಚಿವೆ ಸ್ಮೃತಿ ಇರಾನಿ ನೀಡಿದಂತಹ ಸೇಫ್​ ಹ್ಯಾಂಡ್​ ಸವಾಲನ್ನು ಸ್ವೀಕರಿಸಿದ್ದರು. ಸವಾಲಿನ ಪ್ರಕಾರ ಆಕೆ 20 ಸೆಂಕೆಡ್​ಗಳ ಕಾಲ ಯಾವ ರೀತಿಯಲ್ಲಿ ಹ್ಯಾಂಡ್​ ವಾಶ್​ ಮಾಡಬೇಕು ಎನ್ನುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಬೇಕಿತ್ತು. ಆದರೆ ಕೈ ತುಂಬ ಬ್ರಾಸ್​ಲೇಟ್​ ಮತ್ತು ಉಂಗುರಗಳನ್ನು ಹಾಕಿಕೊಂಡಿರುವ ಏಕ್ತಾ ಕಪೂರ್​ ಕೈ ತೊಳೆಯುವುದಕ್ಕೆ ಒಂದು ನಿಮಿಷಕ್ಕೂ ಹೆಚ್ಚು ಕಾಲ ತೆಗೆದುಕೊಂಡಿದ್ದಾರೆ. ಯಾವುದೇ ಆಭರಣವನ್ನು ತೆಗೆಯದೇ ಕೈ ತೊಳೆದಿರುವ ಆಕೆ ನನ್ನ ಕೈನಲ್ಲಿ ಆಭರಣಗಳಿರುವ ಕಾರಣ ನನಗೆ ಒಂದು ನಿಮಿಷಕ್ಕೂ ಹೆಚ್ಚು ಸಮಯ ಬೇಕು. ಸ್ಯಾನಿಟೈಸರ್​ ಕೂಡ ಎರಡೆರೆಡು ಬಾರಿ ಹಾಕಬೇಕು ಎಂದು ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಏಕ್ತಾ ಕಪೂರ್​ ಅವರ ಈ ನಡವಳಿಕೆಗೆ ನೆಟ್ಟಿಗರು ಗರಂ ಆಗಿದ್ದಾರೆ. ಕೈ ತೊಳೆಯುವಾಗ ಆಭರಣಗಳನ್ನು ತೆಗೆದಿಡಬೇಕು ಎನ್ನುವ ಕನಿಷ್ಠ ಜ್ಞಾನವೂ ಇಲ್ಲವೇ? ನಿಮ್ಮ ಆಭರಣದಲ್ಲೇ ಸಾಕಷ್ಟು ಮೈಕ್ರೋ ಆರ್ಗಾನಿಸಮ್ಸ್​ ಇರುತ್ತವೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದತ್ತ ನೆಟ್ಟಿಗರು ಏಕ್ತಾ ಕಪೂರ್​​ಗೆ ಬೈಯುತ್ತಿದ್ದರೆ ಇನ್ನೊಂದತ್ತ ಬಾಲಿವುಡ್​ನ ಸ್ಟಾರ್​ಗಳು ಮತ್ತು ಕೆಲ ರಾಜಕಾರಣಿಗಳು ಆಕೆ ಹ್ಯಾಂಡ್​ ವಾಶ್​ ಚಾಲೆಂಜ್​ ಸ್ವೀಕರಿಸಿದ್ದಕ್ಕೆ ಹೊಗಳುತ್ತಿದ್ದಾರೆ. (ಏಜೆನ್ಸೀಸ್​)

    ನಮಗೆಲ್ಲ ಕರೊನಾ ಬರಲ್ಲ ಎಂದು ಮದುವೆಗೆ ಹೋಗಿ ಬಂದಿದ್ದವಳಿಗೆ ಬಂತು ಕರೊನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts