ಇದು ನಾಯಿಜಗಳವಲ್ಲ.. ನಾಯಿಗಾಗಿ ನಡೆದ ಜಗಳ: ಶ್ವಾನಕ್ಕಾಗಿ ಶುರುವಾದ ವಾಗ್ವಾದ ಸಾವಿನಲ್ಲಿ ಅಂತ್ಯ

Shootout
Published on

ಬಿಜ್ನೋರ್: ಉತ್ತರ ಪ್ರದೇಶದ ಜಿಲ್ಲೆಯೊಂದರಲ್ಲಿ ಶ್ವಾನ ಖರೀದಿಗೆ ಸಂಬಂಧಿಸಿ ಎರಡು ಗುಂಪುಗಳ ಮಧ್ಯೆ ನಡೆದ ಸಂಘರ್ಷಣೆಯಲ್ಲಿ ಒಬ್ಬ ದಾರಿಹೋಕ ಸೇರಿ ಇಬ್ಬರು ಸಾವಿಗೀಡಾಗಿದ್ದಾರೆ.

ಎರಡೂ ಗುಂಪುಗಳು ಒಂದೇ ನಾಯಿಯನ್ನು ಖರೀದಿಸಲು ಮುಂದಾಗಿದ್ದು, ಇದೇ ಕಾರಣ ಮಂಗಳವಾರ ರಾತ್ರಿ ಅವರ ಮಧ್ಯೆ ವಾಗ್ವಾದ ನಡೆದು ವಾದವು ಹಿಂಸಾತ್ಮಕ ತಿರುವು ಪಡೆದುಕೊಂಡು ಎರಡೂ ಗುಂಪುಗಳ ಮಧ್ಯೆ ಗುಂಡಿನ ಚಕಮಕಿ ನಡೆದಿತ್ತು.

ಗುಂಡಿನ ಚಕಮಕಿಯಲ್ಲಿ ದಾರಿಹೋಕ ಪ್ರಶಾಂತ್ ಮತ್ತು ಸುರೇಂದ್ರ ವ್ಯಕ್ತಿ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡ ಇನ್ನೊಬ್ಬಾತನನ್ನು ಮೀರತ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಧಮ್​​ಪೂರ್ ಪೊಲೀಸ್ ವಲಯದಲ್ಲಿ ಈ ಘಟನೆ ನಡೆದ ನಂತರ ಪರಾರಿಯಾದ ಆರೋಪಿಗಳಿಗಾಗಿ ಪೊಲೀಸ್ ತಂಡಗಳು ಶೋಧ ಕಾರ್ಯ ನಡೆಸುತ್ತಿವೆ ಎಂದು ಬಿಜ್ನೋರ್ ಪೊಲೀಸ್ ಅಧೀಕ್ಷಕ ಸಂಜೀವ್ ತ್ಯಾಗಿ ತಿಳಿಸಿದ್ದಾರೆ. ಘಟನೆಯಲ್ಲಿ ಎರಡೂ ಗುಂಪುಗಳು ಅಕ್ರಮ ಬಂದೂಕುಗಳನ್ನು ಬಳಸಿದ್ದು, ಆ ಎರಡೂ ಗುಂಪುಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net