More

    ಬೆಳೆ ನಷ್ಟ  ಪರಿಹಾರಕ್ಕೆ ಐಡಿ ಕಡ್ಡಾಯ

    ಧಾರವಾಡ: ಜಿಲ್ಲೆಯ ಬರ ಘೋಷಿತ ತಾಲೂಕುಗಳಲ್ಲಿ ಬೆಳೆ ನಷ್ಟವಾಗಿರುವ ರೈತರು ಪರಿಹಾರಧನ ಪಡೆಯಲು ಭೂವಿವರ ಇರುವ ಎ್ಐಡಿ ಗುರುತಿನ ಸಂಖ್ಯೆ ಹೊಂದುವುದು ಕಡ್ಡಾಯ. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಕಿರಣಕುಮಾರ ನೇತೃತ್ವದಲ್ಲಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳು ಮತ್ತು ಅಧೀನ ಕಚೇರಿಗಳಲ್ಲಿ ರೈತರ ್ರೂಟ್ಸ್ ಐಡಿ ಸೃಷ್ಟಿಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
    ಎ್ಐಡಿಯಲ್ಲಿ ದಾಖಲಿಸಿದ ಜಮೀನಿನ ವಿಸ್ತೀರ್ಣಗಳಿಗೆ ಸರ್ಕಾರದ ಪರಿಹಾರ ಸೌಲಭ್ಯ ದೊರೆಯಲಿದೆ. ಆದ್ದರಿಂದ ಜಿಲ್ಲೆಯ ರೈತರು ತಮ್ಮ ಎಲ್ಲ ಜಮೀನಿನ ಸರ್ವೇ ನಂಬರ್, ವಿಸ್ತೀರ್ಣಗಳನ್ನು ಕೂಡಲೇ ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿಕೊಳ್ಳಬೇಕು. ಸರ್ಕಾರದಿಂದ ಬರ ಪರಿಹಾರದ ಹಣ ಬಿಡುಗಡೆಯಾದಾಗ ಡಿಬಿಟಿ ಮೂಲಕ ರೈತರ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು.
    ್ರೂಟ್ಸ್ ಐಡಿ ಬರ ಪರಿಹಾರದ ಹಣ ಮಾತ್ರವಲ್ಲದೆ, ಬೆಳೆವಿಮೆ, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನ ಮಾರಾಟ ಮಾಡಲು ಮತ್ತು ಸರ್ಕಾರದ ಎಲ್ಲ ಯೋಜನೆಗಳ ಸೌಲಭ್ಯ ಹಾಗೂ ಬ್ಯಾಂಕ್ ಸಾಲ ಪಡೆಯಲು ಕಡ್ಡಾಯ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಅಗತ್ಯ ದಾಖಲೆಗಳು: ್ರೂಟ್ಸ್ ಐಡಿ ಮಾಡಿಸಲು ರೈತರ ಆಧಾರ್‌ಕಾರ್ಡ್, ಬ್ಯಾಂಕ್ ಖಾತೆ ಪುಸ್ತಕದ ಪ್ರತಿ, ಎಲ್ಲ ಜಮೀನುಗಳ ಪಹಣಿ, ಮೊಬೈಲ್ ಸಂಖ್ಯೆ ಹಾಗೂ ಅಗತ್ಯವಿದ್ದಲ್ಲಿ ಜಾತಿ ಪ್ರಮಾಣಪತ್ರದ ಪ್ರತಿಯನ್ನು ಸಲ್ಲಿಸಬೇಕು. ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಚೇರಿಗಳಲ್ಲಿ ಐಡಿ ಮಾಡಿಸಬಹುದು.
    ಸರ್ಕಾರಕ್ಕೆ ಪ್ರಸ್ತಾವ: ಜಿಲ್ಲೆಯ 8 ತಾಲೂಕುಗಳನ್ನು ಸರ್ಕಾರ ಈಗಾಗಲೇ ಬರಪೀಡಿತ ಎಂದು ೋಷಿಸಿದೆ. ಬರದಿಂದ 2.11 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದ್ದು, ಜಿಲ್ಲಾಡಳಿತದಿಂದ 212 ಕೋಟಿ ರೂ. ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts