More

    ಫೆರ್ರಿ ಉದ್ಯಾನದಲ್ಲಿ ಅಕ್ರಮ ಚಟುವಟಿಕೆ

    ಕುಂದಾಪುರ: ಅಕ್ರಮ ಚಟುವಟಿಕೆಯ ಅಡ್ಡ ಆಗುತ್ತಿದೆ, ಇದಕ್ಕೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಕುಂದಾಪುರ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.
    ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಗುರುವಾರ ಪುರಸಭೆ ಸಾಮಾನ್ಯ ಸಭೆ ನಡೆಯಿತು. ಫೆರ್ರಿ ರಸ್ತೆ ವಾರ್ಡ್ ಸದಸ್ಯ ಅಬು ಮೊಹಮ್ಮದ್ ಮಾತನಾಡಿ, ನದಿ ಸಮುದ್ರ ತೀರಲ್ಲಿ ಫೆರ್ರಿ ಉದ್ಯಾನವಿದ್ದು, ಅಕ್ರಮ ಅಡ್ಡೆಯಾಗಿ ಬದಲಾಗುತ್ತಿದೆ. ಪುರಸಭೆ ಉದ್ಯಾನವನ ಎಲ್ಲರಿಗೂ ಮುಕ್ತ ಅವಕಾಶ ಸಿಗುವಂತೆ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

    ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಉತ್ತರಿಸಿ, ಪೊಲೀಸರ ಸಹಕಾರ ಪಡೆದು ಕ್ರಮ ಕೈಗೊಳ್ಳಲಾಗುವುದು. ಠಾಣೆಗೆ ದೂರು ನೀಡಲಾಗುತ್ತದೆ ಎಂದರು.
    ಕುಂದಾಪುರ ಪುರಸಭೆ ಫುಟ್‌ಪಾತ್‌ಗಳು ಅಂಗಡಿ ಮುಂಗಟ್ಟುಗಳ ನಾಮಫಲಕದ ಆಶ್ರಯ ತಾಣವಾಗುತ್ತಿದ್ದು, ವಾಹನ ಪಾರ್ಕಿಂಗ್ ಹಾಗೂ ಪಾದಚಾರಿಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಇದರಿಂದ ಅನಾವಶ್ಯಕವಾಗಿ ನಾವು ದಂಡ ಕಟ್ಟಬೇಕಾಗುತ್ತದೆ ಎಂದು ಗಿರೀಶ್ ದೇವಾಡಿಗ ಹೇಳಿದರು.

    ಸದಸ್ಯರಾದ ಸಂತೋಷ್ ಕುಮಾರ್ ಶೆಟ್ಟಿ, ಪ್ರಭಾಕರ, ಮೋಹನದಾಸ್ ಶೆಣೈ, ಶ್ರೀಧರ ಶೇರಿಗಾರ್, ದೇವಕಿ ಸಣ್ಣಯ್ಯ ಪಾರ್ಕಿಂಗ್ ಸಮಸ್ಯೆ ಬಗ್ಗೆ ಮಾತನಾಡಿದರು. ತಕ್ಷಣ ಪುರಸಭೆ ಪಾರ್ಕಿಂಗ್ ಸ್ಥಳದಲ್ಲಿನ ನಾಮಫಲಕ, ನೋ ಪಾರ್ಕಿಂಗ್ ಬೋರ್ಡ್ ತೆರವು ಮಾಡುವ ಕೆಲಸ ಮಾಡಲಿದೆ ಎಂದು ಮುಖ್ಯಾಧಿಕಾರಿ ಹೇಳಿದರು.
    ಅಕ್ರಮ ವಿದ್ಯುತ್ ಸಂಪರ್ಕದ ನೆಪದಲ್ಲಿ ಮೆಸ್ಕಾಂ ಸಂಪರ್ಕ ಕಡಿತಗೊಳಿಸುತ್ತಿದ್ದು, ಇದರಿಂದ ಸಮಸ್ಯೆಯಾಗುತ್ತಿದೆ. ಮೆಸ್ಕಾಂ ಅಧಿಕಾರಿಗಳು ಅಕ್ರಮ ವಿದ್ಯುತ್ ಸಂಪರ್ಕ ಸಕ್ರಮ ಮಾಡಲು ಕ್ರಮ ಕೈಗೊಳ್ಳುವಂತೆ ಸದಸ್ಯರಾದ ಶ್ರೀಧರ ಶೇರೆಗಾರ್, ಮೋಹನ್‌ದಾಸ್ ಶೆಣೈ ಸಲಹೆ ನೀಡಿದರು. ಅಕ್ರಮ ವಿದ್ಯುತ್ ಸಂಪರ್ಕ ಸಕ್ರಮ ಮಾಡಲು ಕಾನೂನಲ್ಲಿ ಅವಕಾಶವಿದ್ದು, ಕ್ರಮಬದ್ಧವಾಗಿ ಅರ್ಜಿ ಸಲ್ಲಿಸಿದರೆ ಸಕ್ರಮ ಮಾಡಲು ಸಾಧ್ಯ ಎಂದು ಮೆಸ್ಕಾಂ ಸಹಾಯಕ ಇಂಜಿನಿಯರ್ ತಿಳಿಸಿದರು.

    ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ್ ಖಾರ್ವಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು. ಪುರಸಭೆ ಸದಸ್ಯರು ಸಭೆಗಿಂತ ಮುನ್ನಾ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಅಗಲಿದೆ ವಿಧಾನ ಪರಿಷತ್ ಮಾಜಿ ಸದಸ್ಯೆ ವಿನ್ನಿ ಫೆರ್ನಾಂಡಿಸ್‌ಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ಉಪ್ಪುನೀರು ಸಮಸ್ಯೆಯಿಂದ ಕೃಷಿಗೆ ಹಾನಿ
    ಕೋಡಿಯಲ್ಲಿ ಉಪ್ಪನೀರು ಸಮಸ್ಯೆಯಿಂದ ಹತ್ತಾರು ಎಕ್ರೆ ಕೃಷಿ ಭೂಮಿ ಹಾಳಾಗುತ್ತಿದ್ದು, ಕೃಷಿ ಮಾಡದ ಸ್ಥಿತಿ ನಿರ್ಮಾಣವಾಗಿದೆ ಎಂದು ಕೋಡಿ ವಾರ್ಡ್ ಸದಸ್ಯ ಕಮಲಾ ಪ್ರಸ್ತಾಪಿಸಿದರು. ಉಪ್ಪು ನೀರು ನುಗ್ಗುವುದರಿಂದ ಕುಡಿಯುವ ನೀರಿಗೂ ತತ್ವಾರ ಆಗುತ್ತದೆ. ಈ ಬಗ್ಗೆ ಶಾಸಕರು ಸಚಿವ ಮಾಧುಸ್ವಾಮಿ ಜತೆ ಮಾತನಾಡಿದ್ದು, ಉಪ್ಪು ನೀರು ತಡೆಗೋಡೆ ಮೂಲಕ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದ್ದಾರೆ ಎಂದು ಸದಸ್ಯ ಸಂತೋಷ್ ಶೆಟ್ಟಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts