More

    ಲೈಂಗಿಕ ಕ್ರಿಯೆ ಬಳಿಕ ಗಂಡನ್ನೇ ತಿಂದು ಹಾಕುವ ಹೆಣ್ಣು ನರಗುಂದದಲ್ಲಿ ಪತ್ತೆ!

    ನರಗುಂದ: ಥೆರಿಡೀಡೆ ಜಾತಿಗೆ ಸೇರಿರುವ ಲ್ಯಾಟ್ರೊಡಕ್ಟಸ್ ಪ್ರಭೇದದ ವಿಧವೆ ಜೇಡ ನರಗುಂದದ ಹಳೇ ಎಪಿಎಂಸಿ ಕಚೇರಿ ಆವರಣದಲ್ಲಿ ಪತ್ತೆಯಾಗಿದೆ.

    ಇದರ ವೈಜ್ಞಾನಿಕ ಹೆಸರು ಲ್ಯಾಟ್ರೊಡಕ್ಟಸ್ ಹಸ್ಸೆಲ್ಟೀ. ಇಡೀ ವಿಶ್ವದಲ್ಲಿಯೇ ಇಲ್ಲಿವರೆಗೆ ಲ್ಯಾಟ್ರೊಡಕ್ಟಸ್ ಪ್ರಭೇದಕ್ಕೆ ಸೇರಿರುವ 31 ಜಾತಿಯ ಜೇಡಗಳನ್ನು ಗುರುತಿಸಲಾಗಿದ್ದು, ಭಾರತದಲ್ಲಿ ಈ ಪ್ರಭೇದಕ್ಕೆ ಸೇರಿರುವ 4 ಜಾತಿಯ ಜೇಡಗಳನ್ನು ದಾಖಲಿಸಲಾಗಿದೆ. ಲ್ಯಾಟ್ರೊಡಕ್ಟಸ್ ಎಲಿಗನ್ಸ್, ಲ್ಯಾಟ್ರೊಡಕ್ಟಸ್ ಜಿಯೊ ಮೆಟ್ರಿಕಸ್, ಲ್ಯಾಟ್ರೊಡಕ್ಟಸ್ ಇರಿಥ್ರೊಮಿಲಸ್ ಮತ್ತು ಲ್ಯಾಟ್ರೊಡಕ್ಟಸ್ ಹಸ್ಸೆಲ್ಟೀ ಎಂಬ ಈ ನಾಲ್ಕು ಜಾತಿಯ ವಿಧವೆ ಜೇಡಗಳು ಗುಜಾರಾತ್‌ದಲ್ಲಿ ಹೆಚ್ಚಾಗಿ ಕಾಣಸಿಗುತ್ತಿದ್ದು, ಬೇರೆ ರಾಜ್ಯಗಳಲ್ಲಿ ಇವು ತುಂಬಾ ವಿರಳ.

    ಇದನ್ನೂ ಓದಿ ಲೈಂಗಿಕವಾಗಿ ಬಳಸಿಕೊಂಡು ಸಾಲ ಕೊಟ್ಟ, ಆಕೆ ಹಣ ಹಿಂತಿರುಗಿಸಿದರೂ ಮತ್ತೆ ಬರುವಂತೆ ಪೀಡಿಸಿದ

    ಇದು ಆಸ್ಟ್ರೇಲಿಯಾ ಮೂಲದ ವಿಧವೆ ಜೇಡವಾಗಿದ್ದು, ನಮ್ಮ ದೇಶದಲ್ಲಿ ಕಾಣಸಿಗುವುದು ತುಂಬಾ ಅಪರೂಪ. ಕರ್ನಾಟಕದಲ್ಲಿಯೂ ಈ ಜೇಡವಿದೆ. ಆದರೆ, ಉತ್ತರ ಕರ್ನಾಟಕ ಭಾಗದಲ್ಲಿ ಪ್ರಥಮ ಬಾರಿಗೆ ಗೋಚರಿಸಿದೆ. ಈ ಪ್ರಭೇದದ ಹೆಣ್ಣು ಜೇಡಗಳು ಗಂಡು ಜೇಡದೊಡನೆ ಮಿಲನವಾದ ನಂತರ ಗಂಡು ಜೇಡವನ್ನು ಸಂಪೂರ್ಣ ತಿಂದು ಹಾಕುತ್ತವೆ. ಈ ವಿದ್ಯಮಾನಕ್ಕೆ ಲೈಂಗಿಕ ಭಕ್ಷಕತೆ ಎನ್ನುತ್ತಾರೆ. ಈ ಕಾರಣದಿಂದಾಗಿ ಈ ಪ್ರಭೇದದ ಜೇಡಗಳಿಗೆ ವಿಧವೆ ಜೇಡವೆಂದು ಕರೆಯುತ್ತಾರೆ.

    ಹೆಣ್ಣು ಜೇಡವು ಪ್ರತಿ ಬ್ಯಾಚ್‌ನಲ್ಲಿ 10 ಮೊಟ್ಟೆ ಚೀಲದಂತೆ ಎರಡು ಬ್ಯಾಚ್ ಇಡುತ್ತದೆ. ಪ್ರತಿಯೊಂದು ಮೊಟ್ಟೆ ಚೀಲದಲ್ಲಿ 200 ರಿಂದ 250 ಮೊಟ್ಟೆಗಳಿರುತ್ತವೆ. 25ರಿಂದ 28 ದಿನಗಳ ನಂತರ ಮೊಟ್ಟೆ ಚೀಲದಿಂದ ಮರಿಗಳು ಹೊರ ಬರುತ್ತವೆ. ಗಂಡು ಜೇಡಗಳು 6 ರಿಂದ 7 ತಿಂಗಳು ಬದುಕಿದರೆ, ಹೆಣ್ಣು ಜೇಡಗಳ ಆಯಸ್ಸು 2 ರಿಂದ 3 ವರ್ಷ. ಹೆಣ್ಣು ಜೇಡಗಳ ಲೈಂಗಿಕ ಭಕ್ಷಕತೆ ವಿದ್ಯಮಾನದಿಂದಾಗಿ ಗಂಡು ಜೇಡಿನ ಆಯಸ್ಸು ಕಡಿಮೆಯಾಗಿದೆ ಎನ್ನುತ್ತಾರೆ ಜೀವ ವೈವಿಧ್ಯ ವಿಜ್ಞಾನಿ ಮಂಜುನಾಥ ನಾಯಕ್.

    ಸಪ್ತಪದಿ ತುಳಿದ ಕೆಲ ಗಂಟೆಯಲ್ಲೇ ಆಸ್ಪತ್ರೆ ಸೇರಿದ ಮದುಮಗ… ನವದಂಪತಿಯ ಖುಷಿಗೆ ಕೊಳ್ಳಿ ಇಟ್ಟಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts