More

    ಇದು ಆರಂಭವಷ್ಟೇ, ಭಾರತ ತಂಡದ ಪರ ಆಡುವುದು ನನ್ನ ಗುರಿ ಎಂದ ಯುವ ವೇಗಿ

    ಬೆಂಗಳೂರು: ಚೊಚ್ಚಲ ಆವೃತ್ತಿಯಲ್ಲಿ ವೇಗದ ಎಸೆತಗಳ ಮೂಲಕ ಸೆನ್ಸೇಶನ್​ ಸೃಷ್ಟಿಸಿರುವ ದೆಹಲಿ ಮೂಲದ ವೇಗಿ ಮಯಾಂಕಕ್​ ಯಾದವ್​, ಸತತ ಎರಡು ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು ಗಮನ ಸೆಳೆದಿದ್ದಾರೆ. ಇದರೊಂದಿಗೆ ಐಪಿಎಲ್​ ಪ್ರದರ್ಶನ ಟೀಮ್​ ಇಂಡಿಯಾ ಸ್ಥಾನ ಪಡೆಯಲು ನೆರವಾಗಲಿದೆ ಎಂದು ಆಶಿಸಿದ್ದಾರೆ.

    ಎರಡು ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವುದು ಅದ್ಭುತ ಅನುಭವ, ಜತೆಗೆ ಎರಡೂ ಪಂದ್ಯಗಳನ್ನು ಗೆದ್ದಿರುವುದು ಹೆಚ್ಚು ಖುಷಿ ತಂದಿದೆ. ಸಾಧ್ಯವಾದಷ್ಟು ವರ್ಷಗಳ ಕಾಲಭಾರತ ತಂಡದ ಪರ ಆಡುವುದು ನನ್ನ ಪ್ರಮುಖ ಗುರಿಯಾಗಿದೆ, ಇದು ಕೇವಲ ಆರಂಭ ಅಷ್ಟೇ ಎಂದು 21 ವರ್ಷದ ಮಯಾಂಕ್​ ಯಾದವ್​ ಹರ್ಷವ್ಯಕ್ತಪಡಿಸಿದ್ದಾರೆ. ಇದು ಕೇವಲ ಆರಂಭ ಎಂದು ಭಾವಿಸುತ್ತೇನೆ. ಆರ್​ಸಿಬಿಯ ಕ್ಯಾಮರಾನ್​ ಗ್ರೀನ್​ ಅವರ ವಿಕೆಟ್​ ನನಗೆ ಹೆಚ್ಚಿನ ಆನಂದ ತಂದಿತು ಎಂದು ಗೆಲುವಿನ ನಂತರ ಮಯಾಂಕ್​ ನುಡಿದರು. “ಹೊಸ ಕೌಶಲ್ಯವನ್ನು ಕಲಿಯುವಾಗ ವೇಗದ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಬಾರದು’ ಎಂಬ ಟೀಮ್​ ಇಂಡಿಯಾ ಆಟಗಾರ ಇಶಾಂತ್​ ಶರ್ಮ ಅವರ ಸಲಹೆಯನ್ನು ನೆನೆದರು.ವೇಗವಾಗಿ ಬೌಲಿಂಗ್​ ಮಾಡಲು ಸಾಕಷ್ಟು ಅಂಶಗಳಿವೆ. ಆಹಾರ, ನಿದ್ರೆ, ತರಬೇತಿ ಮತ್ತು ಚೇತರಿಕೆಯ ಮೇಲೆ ಹೆಚ್ಚು ಗಮನಹರಿಸುತ್ತಿದ್ದೇನೆ. ಜತೆಗೆ ಐಸ್​ ಬಾತ್​ ಎಂದು ಮಯಾಂಕ್​ ಹೇಳಿದರು.

    ರಾಹುಲ್​ ಮೆಚ್ಚುಗೆ: ಕಳೆದೆರಡು ಪಂದ್ಯಗಳಲ್ಲಿ ಮಯಾಂಕ್​ ಬೌಲಿಂಗ್​ ಮಾಡಿದ ರೀತಿಯ ನೋಡಿ ತುಂಬಾ ಸಂತೋಷವಾಯಿತು. ದುರದೃಷ್ಟವಶಾತ್​ ಗಾಯದ ಕಾರಣ ಕಳೆದ ವರ್ಷ ಟೂರ್ನಿ ತಪ್ಪಿಸಿಕೊಂಡ ಅವರು ಡಗ್​&ಔಟ್​ನಲ್ಲಿ ಅವಕಾಶಕ್ಕಾಗಿ ಎರಡು ಸೀಸನ್​ಗಳಿಂದ ತಾಳ್ಮೆಯಿಂದ ಕಾಯುತ್ತಿದ್ದರು. ಆದರೆ ಅವರು ಫಿಟ್ನೆಸ್​ಗಾಗಿ ಮುಂಬೈನಲ್ಲಿ ಫಿಸಿಯೋಗಳೊಂದಿಗೆ ನಿಜವಾಗಿಯೂ ಕಠಿಣ ಶ್ರಮ ವಹಿಸಿದ್ದಾರೆ. ಪ್ರತಿ ಗಂಟೆಗೆ 155 ಕಿ.ಮೀ ವೇಗದಲ್ಲಿ ಬೌಲಿಂಗ್​ ಮಾಡುವುದು ಸುಲಭವಲ್ಲ. ಸ್ಟಂಪ್​ಗಳ ಹಿಂದೆ 20 ಯಾರ್ಡ್​ ದೂರದಿಂದ ಮಯಾಂಕ್​ ಬೌಲ್​ ಮಾಡುವುದನ್ನು ನೋಡಿ ಆನಂದಿಸುತ್ತಿದ್ದೇನೆ ಎಂದು ಲಖನೌ ತಂಡದ ನಾಯಕ ಕೆಎಲ್​ ರಾಹುಲ್​ ಮೆಚ್ಚುಗೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts