More

    ಸಮಸ್ಯೆ ಹೇಳಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ: ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ಮಮತಾ ಬ್ಯಾನರ್ಜಿ

    ಕೋಲ್ಕತ: ಕರೊನಾ ನಿಯಂತ್ರಣ ಸಂಬಂಧ ಪ್ರಧಾನಿ ಮೋದಿ ನೇತೃತ್ವದ ಸಭೆಯಲ್ಲಿ ನಮಗೆ ಮಾತನಾಡಲು ಅವಕಾಶ ನೀಡದೆ ಅವಮಾನಿಸಲಾಯಿತು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿದರು.

    10 ರಾಜ್ಯಗಳ ಜಿಲ್ಲಾಧಿಕಾರಿಗಳು ಮತ್ತು ಕೆಲವು ಮುಖ್ಯಮಂತ್ರಿಗಳ ಜತೆ ಪ್ರಧಾನಿ ಮೋದಿ ನಡೆಸಿದ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಒಂದು ಮಾತನ್ನು ಆಡದೇ, ನಮಗೂ ಮಾತನಾಡಲು ಅವಕಾಶ ನೀಡದೇ ಇದ್ದಿದ್ದು ದುರಾದೃಷ್ಟ ಎಂದು ಹೇಳಿದರು.

    ಸಭೆಯ ಕೊನೆಯಲ್ಲಿ ಕೆಲವು ಬಿಜೆಪಿ ಮುಖ್ಯಮಂತ್ರಿಗಳು ಮತ್ತು ಪ್ರಧಾನಿ ಮಂತ್ರಿಗಳು ಮಾತ್ರ ಮಾತನಾಡಿದರು. ನಿಜಕ್ಕೂ ನಮಗೆ ಅವಮಾನವಾದಂತಾಯಿತು. ಲಸಿಕೆ ಅಥವಾ ರೆಮಿಡೆಸ್ವಿರ್​ ಬಗ್ಗೆ ಕೇಳಲೇ ಇಲ್ಲ. ಬ್ಲ್ಯಾಕ್​ ಫಂಗಸ್​ ಬಗ್ಗೆಯೂ ಕೇಳಲಿಲ್ಲ ಎಂದರು.

    ಕರೊನಾ ಲಸಿಕೆ ಕೊರತೆ ಬಗ್ಗೆ ಕೇಳಬೇಕೆಂದುಕೊಂಡಿದ್ದೆ ಮತ್ತು ಹೆಚ್ಚು ಲಸಿಕಾ ಡೋಸ್​ ಬಗ್ಗೆ ಕೇಳಲು ಬಯಸಿದ್ದೆ. ಆದರೆ, ಇದ್ಯಾವುದಕ್ಕೂ ನಮಗೆ ಅವಕಾಶವನ್ನೇ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಹೊಸ ಕೋವಿಡ್ -19 ಪ್ರಕರಣಗಳು ಇಳಿಮುಖವಾಗುತ್ತಿವೆ ಎಂದು ಹೇಳಿದ ಪ್ರಧಾನಿ ಮೋದಿ ವಿರುದ್ಧವೇ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ, ಕರೊನಾ ವೈರಸ್ ಕಡಿಮೆಯಾಗುತ್ತಿದೆ ಎಂದು ಪಿಎಂ ಹೇಳಿದ್ದಾರೆ. ಈ ರೀತಿ ಹಿಂದೆಯೂ ಸಹ ಹೇಳಲಾಗಿತ್ತು. ಆದರೆ, ಪ್ರಕರಣಗಳು ಹೆಚ್ಚಾಗಿದ್ದು, ಮೋದಿ ಅವರು ಅಸುರಕ್ಷಿತರಾಗಿದ್ದಾರೆ. ಹೀಗಾಗಿ ಅವರು ನಮ್ಮ ಮಾತನ್ನು ಕೇಳಲಿಲ್ಲ ಎಂದರು. (ಏಜೆನ್ಸೀಸ್​)

    ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗ- ಆನ್‌ಲೈನ್‌ನಲ್ಲಿ ಸಂದರ್ಶನ: 45 ಸಾವಿರ ರೂ. ಸಂಬಳ

    ಮಳೆಯಿಂದ ಕುಸಿದ ರಸ್ತೆಯ ಹಳ್ಳಕ್ಕೆ ಬಿದ್ದ ಟ್ರಕ್​: ಭಯಾನಕ ವಿಡಿಯೋ ವೈರಲ್​!

    ಮಹಿಳೆ ಮರುಮದುವೆಯಾಗಿ ಹುಟ್ಟುವ ಮಗುವಿಗೆ ಮೊದಲ ಪತಿಯ ಆಸ್ತಿಯೂ ಸಿಗುತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts