ಮಳೆಯಿಂದ ಕುಸಿದ ರಸ್ತೆಯ ಹಳ್ಳಕ್ಕೆ ಬಿದ್ದ ಟ್ರಕ್​: ಭಯಾನಕ ವಿಡಿಯೋ ವೈರಲ್​!

ನವದೆಹಲಿ: ಬುಧವಾರ ರಾತ್ರಿ ಸುರಿದ ಭಾರಿ ಮಳೆಯಿಂದ ದೆಹಲಿಯ ನಜಾಫಗಢದ ರಸ್ತೆ ಕುಸಿದು ನಿರ್ಮಾಣವಾಗಿದ್ದ ಹಳ್ಳದಲ್ಲಿ ಟ್ರಕ್​ ಉರುಳಿಬಿದ್ದಿರುವ ಘಟನೆ ನಡೆದಿದೆ. ನಿನ್ನೆ ರಾತ್ರಿಯೇ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದೆ. ಟ್ರಕ್​ ಹಳ್ಳಕ್ಕೆ ಬಿದ್ದಿರುವ ಫೋಟೋವನ್ನು ಗುರುವಾರ ಬಿಡುಗಡೆ ಮಾಡಿದ್ದು, ಈಗಲೂ ಟ್ರಕ್​ ಹಳ್ಳದಲ್ಲೇ ಇದೆ. ತೌಕ್ತೆ ಚಂಡಮಾರುತದ ಪರಿಣಾಮದಿಂದ ಗುರುವಾರ ರಾತ್ರಿ ದೆಹಲಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. ದೆಹಲಿಯ ಅನೇಕ ಏರಿಯಾಗಳು ಜಲಾವೃತಗೊಂಡಿದೆ. ನವದೆಹಲಿ: ಬುಧವಾರ ರಾತ್ರಿ ಸುರಿದ ಭಾರಿ … Continue reading ಮಳೆಯಿಂದ ಕುಸಿದ ರಸ್ತೆಯ ಹಳ್ಳಕ್ಕೆ ಬಿದ್ದ ಟ್ರಕ್​: ಭಯಾನಕ ವಿಡಿಯೋ ವೈರಲ್​!