More

    ಗೋಶಾಲೆಗಾಗಿ ಗೋಮಾಳ ಮೀಸಲಿಡಲಾಗುವುದಾಗಿ ಹೇಳಿದ ಶಾಸಕ ಪರಣ್ಣ ಮುನವಳ್ಳಿ

    ಗಂಗಾವತಿ : ಶ್ರೀಕೃಷ್ಣ ದೇವಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಗೋಮಾಳವನ್ನು ಜಾನುವಾರುಗಳ ರಕ್ಷಣೆಯ ಗೋಶಾಲೆಗಾಗಿ ಮೀಸಲಿಡಲಾಗುವುದು ಎಂದು ಶಾಸಕ ಪರಣ್ಣಮುನವಳ್ಳಿ ಹೇಳಿದರು.
    ನಗರದ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಯಾದವ ಕ್ಷೇಮಾಭಿವೃದ್ಧಿ ಸಂಘ ಮತ್ತು ತಾಲೂಕು ಆಡಳಿತದ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಉದ್ಘಾಟಿಸಿ ಮಾತನಾಡಿದರು. ಗೀತಾಸಾರದ ಮೂಲಕ ವಾಸ್ತವಿಕತೆ ಬದುಕನ್ನು ಕಲ್ಪಿಸಿದ ಶ್ರೀ ಕೃಷ್ಣ ಎಲ್ಲ ಸಮುದಾಯಕ್ಕೂ ಆರಾಧ್ಯ ದೈವ. ಯಾದವ ಸಮುದಾಯದ ಅಭಿವೃದ್ಧಿಗೆ ಶ್ರಮಿಸಲಾಗುವುದು. ನಗರದಲ್ಲಿರುವ ಗೋಮಾಳ ಜಾಗವನ್ನು ಕ್ಷೇಮಾಭಿವೃದ್ಧಿ ಸಂಘಕ್ಕೆ ಕೊಡಿಸಲು ಸರ್ಕಾರಕ್ಕೆ ಶಿಾರಸು ಮಾಡಲಾಗುವುದು ಎಂದರು.
    ಸ.ನಂ.53ರಲ್ಲಿನ ಗೋಮಾಳ ಭೂಮಿಯನ್ನು ಸಂಘದ ಹೆಸರಿಗೆ ನೋಂದಾಯಿಸುವಂತೆ ಸಮುದಾಯದ ಮುಖಂಡರು ಮನವಿ ಮಾಡಿದರು. ಉಪನ್ಯಾಸಕಿ ಸರಸ್ವತಿ ಯಾದವ್ ಉಪನ್ಯಾಸ ನೀಡಿದರು. ಇದಕ್ಕೂ ಮುನ್ನ ನಗರದ ಶ್ರೀ ಚನ್ನಮಲ್ಲಿಕಾರ್ಜುನ ಪುರಾಣ ಮಂಟಪದಿಂದ ಸರೋಜಮ್ಮ ಕಲ್ಯಾಣ ಮಂಟಪದವರೆಗೂ ಶ್ರೀಕೃಷ್ಣನ ಭಾವಚಿತ್ರದ ಮೆರವಣಿಗೆ ನೆರವೇರಿಸಲಾಯಿತು. ವಾದ್ಯ ಮೇಳ ಮತ್ತು ಹಗಲು ವೇಷಧಾರಿಗಳು ಭಾಗವಹಿಸಿದ್ದರು. ಗಾಂಧಿ ವೃತ್ತದಲ್ಲಿ ಹಾಲು ಗಡಿಗೆ ಒಡೆಯುವ ಮೂಲಕ ಚಾಲನೆ ನೀಡಲಾಯಿತು.
    ನಯೋಪ್ರಾ ಅಧ್ಯಕ್ಷ ಮಹಾಲಿಂಗಪ್ಪಬನ್ನಿಕೊಪ್ಪ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ನಗರಸಭೆ ಮಾಜಿ ಸದಸ್ಯ ಎಸ್.ರಾಘವೇಂದ್ರ ಶ್ರೇಷ್ಟಿ, ಯಾದವ ಸಮಾಜದ ಜಿಲ್ಲಾಧ್ಯಕ್ಷ ಜಗನ್ನಾಥ ಯಾದವ್, ತಾಲೂಕು ಅಧ್ಯಕ್ಷ ಎಚ್.ಸಿ.ಯಾದವ್, ಪದಾಧಿಕಾರಿಗಳಾದ ಎಂ.ಹನುಮಂತಪ್ಪ, ನಾರಾಯಣಗೌಡ, ಹುಲುಗಪ್ಪ, ವಿವಿಧ ಸಮಾಜದ ಪದಾಧಿಕಾರಿಗಳಾದ ಎಚ್.ಎಸ್.ಗಿರೇಗೌಡ, ನರಸಪ್ಪ ಅಮರಜ್ಯೋತಿ, ಗೌಳಿ ರಮೇಶ, ಈ.ಧನರಾಜ್, ಜೋಗದ ಹನುಮಂತಪ್ಪ ನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts