More

    ಸಿಬಿಐ ಮಾಜಿ ನಿರ್ದೇಶಕ, ನಾಗಾಲ್ಯಾಂಡ್​ ಮಾಜಿ ರಾಜ್ಯಪಾಲ ಅಶ್ವನಿ ಕುಮಾರ್ ಆತ್ಮಹತ್ಯೆ ಬೆನ್ನಲ್ಲೇ ಡೆತ್​ನೋಟ್​ ಪತ್ತೆ

    ಶಿಮ್ಲಾ: ಸಿಬಿಐನ ಮಾಜಿ ನಿರ್ದೇಶಕ ಮತ್ತು ನಾಗಾಲ್ಯಾಂಡ್​ನ ಮಾಜಿ ರಾಜ್ಯಪಾಲ ಅಶ್ವನಿ ಕುಮಾರ್ (69) ಶವ ನೇಣುಬಿಗಿದ ಸ್ಥಿತಿಯಲ್ಲಿ ಶಿಮ್ಲಾದ ಅವರ ಮನೆಯಲ್ಲಿ ಬುಧವಾರ ರಾತ್ರಿ ಪತ್ತೆಯಾಗಿದೆ.

    ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವು ದಿನಗಳಿಂದ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಶಿಮ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೋಹಿತ್ ಚಾವ್ಲಾ ಹೇಳಿದ್ದಾರೆ. ಕುಮಾರ್ ಮನೆಯಲ್ಲಿ ಮರಣ ಪತ್ರ (ಡೆತ್ ನೋಟ್) ಪತ್ತೆಯಾಗಿದ್ದು, ಜೀವನದಲ್ಲಿ ಬೇಸತ್ತಿರುವುದಾಗಿಯೂ, ಮುಂದಿನ ಹೊಸ ಪಯಣಕ್ಕೆ ಹೊರಟಿರುವೆ ಎಂದು ಬರೆದಿದೆ ಎಂದಿದ್ದಾರೆ.

    ಆತ್ಮಹತ್ಯೆಗೂ ಮುನ್ನ ಸಾಯಂಕಾಲ ವಾಯುವಿಹಾರಕ್ಕೂ ತೆರಳಿದ್ದರು. ಮನೆಯ ಪ್ರಾರ್ಥನ ಮಂದಿರದ ಬಳಿ ಮೃತದೇಹ ಪತ್ತೆಯಾಗಿದ್ದು, ಅವರ ಪತ್ನಿ, ಸಮ ಮತ್ತು ಮಗಳು ಕೆಳ ಮಹಡಿಯಲ್ಲಿ ಮಲಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಆರಂಭಿಸಲಾಗಿದ್ದು, ಮರಣೋತ್ತರ ವರದಿ ಬಂದ ಬಳಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದು ಮೋಹಿತ್ ಚಾವ್ಲಾ ಹೇಳಿದ್ದಾರೆ.

    ಖಿನ್ನತೆಗೆ ಒಳಗಾಗಿದ್ದರು ಎಂದು ಮೋಹಿತ್ ಚಾವ್ಲಾ ಹೇಳಿದ್ದಾರೆ. ಆದರೆ, ಕುಟುಂಬಸ್ಥರು ಈ ಬಗ್ಗೆ ಖಚಿತಪಡಿಸಿಲ್ಲ. ಸಂಜೆ ವಾಯುವಿಹಾರದ ಬಳಿಕ ಪ್ರತಿದಿನದಂತೆ ಮನೆಯ ಮಹಡಿಯ ಮೇಲೆ ಹೋಗಿ ಪ್ರಾರ್ಥನಾ ಮಂದಿರದಲ್ಲಿ ಕುಳಿತರು. ತುಂಬಾ ಸಮಯದವರೆಗೂ ಮರಳಿ ಬರದಿದ್ದಾಗ ಅವರ ಕುಟುಂಬ ಹೋಗಿ ಪರಿಶೀಲಿಸಿದಾಗ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆಂದು ಪೊಲೀಸ್​ ಮೂಲಗಳು ತಿಳಿಸಿವೆ.

    1973ನೇ ತಂಡದ ಐಪಿಎಸ್ ಅಧಿಕಾರಿಯಾದ ಅಶ್ವನಿ ಕುಮಾರ್, 2008ರ ಆಗಸ್ಟ್​ನಿಂದ 2010ರ ಡಿಸೆಂಬರ್​ವರೆಗೆ ಸಿಬಿಐ ನಿರ್ದೇಶಕರಾಗಿದ್ದರು. 2013ರ ಮಾರ್ಚ್​ನಿಂದ 2014ರ ಜುಲೈವರೆಗೆ ನಾಗಾಲ್ಯಾಂಡ್ ರಾಜ್ಯಪಾಲರಾಗಿದ್ದ ಅವರು, ಕೆಲವು ಕಾಲ ಮಣಿಪುರದ ಗವರ್ನರ್ ಆಗಿ ಹೆಚ್ಚುವರಿ ಹೊಣೆ ನಿರ್ವಹಿಸಿದ್ದರು. (ಏಜೆನ್ಸೀಸ್​)

    ಸಿಬಿಐ ಮಾಜಿ ನಿರ್ದೇಶಕ ಅಶ್ವನಿ ಕುಮಾರ್​​ ಸಾವು; ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts