More

    ಫಯಾಜ್ ತಾಯಿ ಮಮ್ತಾಜ್ ಆಗ್ರಹ; ಮಗ ಮಾಡಿದ ತಪ್ಪಿಗೆ ಕಾನೂನಿನಡಿ ಶಿಕ್ಷೆ ಆಗಲಿ

    ಧಾರವಾಡ: ನನ್ನ ಮಗ ಫಯಾಜ್ ಮಾಡಿದ್ದು ತಪ್ಪು. ನಾನು ನೂರಾರು ಮಕ್ಕಳಿಗೆ ಶಿಕ್ಷಣ ಕೊಡುತ್ತೇನೆ. ಮಗನ ತಪ್ಪಿನಿಂದ ನಾನು ತಲೆ ತಗ್ಗಿಸುವಂತಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಅವನ ತಪ್ಪಿಗೆ ಈ ನೆಲದ ಕಾನೂನಿನ ಅಡಿ ಶಿಕ್ಷೆ ಆಗಲಿ ಎಂದು ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಆರೋಪಿ ಫಯಾಜ್ ತಾಯಿ ಮಮ್ತಾಜ್ ಹೇಳಿದರು.
    ನಗರ ಹೊರವಲಯದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಹಾ ಕೂಡ ನನ್ನ ಮಗಳು ಇದ್ದ ಹಾಗೆ. ಅವಳ ತಂದೆ ತಾಯಿಗೆ ಆದಷ್ಟು ದುಃಖ ನನಗೂ ಆಗಿದೆ. ನನ್ನ ಮಗ ಮಾಡಿದ ತಪ್ಪಿಗೆ ಕರ್ನಾಟಕದ ಜನತೆ ಮತ್ತು ನೇಹಾಳ ತಂದೆ- ತಾಯಿಗೆ ಕೈ ಮುಗಿದು ಕ್ಷಮೆ ಕೇಳುತ್ತೇನೆ ಎಂದರು.

    • ಐಎಎಸ್ ಮಾಡಿಸಬೇಕೆಂದಿದ್ದೆ:
      ಫಯಾಜ್ ಆರಂಭದಿAದಲೂ ಪ್ರತಿಭಾವಂತ ವಿದ್ಯಾರ್ಥಿ. ಅವನನ್ನು ಐಎಎಸ್ ಅಽಕಾರಿ ಮಾಡಬೇಕು ಎಂದುಕೊAಡಿದ್ದೆ. ಆದರೆ, ನೇಹಾ ಜೊತೆ ಪ್ರೀತಿಗೆ ಬಿದ್ದು ಶಿಕ್ಷಣದಲ್ಲಿ ಹಿಂದೆ ಉಳಿದ. ಇಬ್ಬರದೂ ಒನ್ ಸೈಡ್ ಲವ್ ಅಲ್ಲ. ಮದುವೆ ಆಗಬೇಕು ಎಂದಿದ್ದರು. ನಾನು ಬೇಡ ಎಂದಿದ್ದೆ ಎಂದರು.
    • ಯುನಿವರ್ಸಿಟಿ ಬ್ಲೂ ಆಗಿದ್ದ:
      ಫಯಾಜ್ ಹುಡುಗಿಯರ ಸಹವಾಸಕ್ಕೆ ಹೋಗುತ್ತಿರಲಿಲ್ಲ. ಬಾಡಿ ಬಿಲ್ಡಿಂಗ್‌ನಲ್ಲಿ ಯುನಿವರ್ಸಿಟಿ ಬ್ಲೂ ಆದ ನಂತರ ಹುಡುಗಿಯರು ಪರಿಚಿತರಾಗಿದ್ದಾರೆ ಎಂದಿದ್ದ. ಇದೇ ಸಂದರ್ಭದಲ್ಲಿ ನೇಹಾ ಫಯಾಜ್‌ನನ್ನು ಭೇಟಿ ಮಾಡಿ ಮೊಬೈಲ್ ನಂಬರ್ ಪಡೆದಿದ್ದಳು. ಆಕೆ ತನ್ನನ್ನು ತುಂಬಾ ಹಚ್ಚಿಕೊಂಡಿದ್ದಾಳೆ, ಪ್ರೀತಿ ಮಾಡುತ್ತಿದ್ದಾಳೆ ಎಂದು ಹೇಳಿದ್ದ. ನಾನು ಬೇಡ ಎಂದರೂ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎಂದರು.
    • ಸುದ್ದಿ ನೋಡಿ ಕುಸಿದುಬಿದ್ದೆ:
      ಏ. ೧೬ರಂದು ಸಂಜೆ ೬ ಗಂಟೆಗೆ ಪರಿಚಯದವರೊಬ್ಬರು ಕರೆ ಮಾಡಿ ಟಿವಿ ನೋಡಿ ಎಂದರು. ಫಯಾಜ್ ನೇಹಾಳನ್ನು ಕೊಲೆ ಮಾಡಿದ್ದಾನೆ ಎಂಬ ಸುದ್ದಿ ನೋಡಿ ಕುಸಿದು ಬಿದ್ದೆ. ಪಕ್ಕದ ಮನೆಯವರು ಬಂದು ಎಬ್ಬಿಸಿದ್ದಾರೆ. ಮನೆಯಲ್ಲಿದ್ದು ಬೇಜಾರಾಗಿದೆ ಎಂದಿದ್ದ ಫಯಾಜ್, ಕೆಲಸ ಹುಡುಕುತ್ತೇನೆ ಎಂದು ಏ. ೧೩ರಂದು ಮನೆಯಿಂದ ಹೋಗಿದ್ದ. ಟಿವಿಯಲ್ಲಿ ಆತನ ಫೋಟೊ ನೋಡಿ ಗಾಬರಿಯಾಗಿ ಕುಸಿದು ಬಿದ್ದೆ ಎಂದು ಮಮ್ತಾಜ್ ಕಣ್ಣೀರಿಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts