More

    ಕರ್ತವ್ಯ ಲೋಪ, ಗುನ್ನಾಳ ಗ್ರಾಮ ಪಂಚಾಯಿತಿ ಪಿಡಿಒ ಅಮಾನತು

    ಯಲಬುರ್ಗಾ: ಗುನ್ನಾಳ ಗ್ರಾಪಂ ಪಿಡಿಒ ಹನುಮಂತರಾಯ ಯಂಕಂಚಿಯನ್ನು ಜಿಪಂ ಸಿಇಒ ರಘುನಂದನ್‌ಮೂರ್ತಿ ಅಮಾನತುಗೊಳಿಸಿ ಬುಧವಾರ ಆದೇಶ ಹೊರಡಿಸಿದ್ದಾರೆ. ಜಿಪಂ ಉಪ ಕಾರ್ಯದರ್ಶಿ ಶರಣಬಸವರಾಜ ಜೂ. 10ರಂದು ಗ್ರಾಪಂ ಕಚೇರಿಗೆ ಭೇಟಿ ನೀಡಿ ದಾಖಲೆ ಪರಿಶೀಲಿಸುವಾಗ ಕರ್ತವ್ಯಲೋಪ, 14ನೇ ಹಣಕಾಸು ಯೋಜನೆಯ ಅನುದಾನದ ನಿಯಮ ಬಾಹಿರ ದುರ್ಬಳಕೆ ಮತ್ತಿತರ ದೋಷಗಳು ಪತ್ತೆಯಾಗಿದ್ದವು. ನಂತರ ಜೂ.18ರಂದು ಜಿಪಂ ಸಿಇಒಗೆ ವರದಿ ಸಲ್ಲಿಸಿದ್ದರು. ಪರಿಶೀಲನೆ ವೇಳೆ ಕರ್ತವ್ಯಲೋಪ ಎಸಗಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದಾರೆ.

    2019-20ನೇ ಸಾಲಿನ 14ನೇ ಹಣಕಾಸಿನ 1ನೇ ಕಂತಿನ ಅನುದಾನದ ಕ್ರಿಯಾ ಯೋಜನೆಯಲ್ಲಿ ಗ್ರಾಪಂ ಸಭಾಂಗಣ ನಿರ್ಮಾಣಕ್ಕಾಗಿ 3.25 ಲಕ್ಷ ರೂ. ನಿಗದಿಯಾಗಿತ್ತು. ಸಭಾಂಗಣ ಬದಲಾಗಿ ಅಸ್ಥಿತ್ವದಲ್ಲಿದ್ದ ಕಟ್ಟಡ ದುರಸ್ತಿಗೊಳಿಸಿದ್ದಾರೆ. ಗ್ರಾಪಂ ಸಭಾಂಗಣ ನಿರ್ಮಾಣಕ್ಕಾಗಿ 14ನೇ ಹಣಕಾಸು ಯೋಜನೆಯಡಿ ಎರಡು ಕಂತುಗಳಲ್ಲಿ 6.50 ಲಕ್ಷ ರೂ. ನಿಗದಿಪಡಿಸಿ ಕ್ರಿಯಾಯೋಜನೆ ಅನುಮೋದನೆಗೊಂಡಿತ್ತು. ನಿಯಮಾನುಸಾರ ಅನುಷ್ಠಾನಗೊಳಿಸದೇ ತುಂಡು ಗುತ್ತಿಗೆ ನೀಡಿ ನಿಯಮ ಉಲ್ಲಂಘಿಸಿದ್ದಾರೆ. 14ನೇ ಹಣಕಾಸಿನ ಎರಡು ಕಂತಿನ ಅನುದಾನದಲ್ಲಿ ಎಲ್ಲ ಕಾಮಗಾರಿಗಳನ್ನು ತುಂಡು ಗುತ್ತಿಗೆ ಆಧಾರದ ಮೇಲೆ ನಿರ್ವಹಿಸಿದ್ದಾರೆ. ದರಪಟ್ಟಿ ಆಹ್ವಾನಿಸಿಲ್ಲ. ಎಸ್‌ಸಿ, ಎಸ್‌ಟಿ ಸಮುದಾಯದ ಗುತ್ತಿಗೆದಾರರಿಗೆ ಶೇ.25ರಷ್ಟು ಕಾಮಗಾರಿ ವಹಿಸಿಲ್ಲ. 14ನೇ ಹಣಕಾಸಿನ 11.3 ಲಕ್ಷ ರೂ. ಮೊತ್ತದ ಕುಡಿವ ನೀರಿನ ಸಾಮಗ್ರಿ ಖರೀದಿಯಲ್ಲಿ ಕೆಟಿಪಿಪಿ ನಿಯಮ ಉಲ್ಲಂಘಿಸಿದ್ದಾರೆ. ಖರೀದಿ ನಂತರ ಸ್ಟಾಕ್ ರಿಜಿಸ್ಟರ್‌ನಲ್ಲಿ ದಾಖಲಿಸಿಲ್ಲ ಈ ಎಲ್ಲ ಕಾರಣಗಳಿಂದ ಅಮಾನತಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts