More

    ಮಹದಾಯಿಗಾಗಿ ನವಲಗುಂದದಲ್ಲಿ ಉಪವಾಸ ಸತ್ಯಾಗ್ರಹ, ಸಮಾವೇಶ ನಾಳೆ


    ನವಲಗುಂದ; ಮಹದಾಯಿಗಾಗಿ ಮಹಾವೇದಿಕೆಯಡಿ ಜು. 21ರಂದು ಬೆಳಗ್ಗೆ 9 ಗಂಟೆಗೆ ನವಲಗುಂದ ರೈತ ಭವನದ ಬಳಿಯ ಹುತಾತ್ಮ ರೈತ ಬಸಪ್ಪ ಲಕ್ಕುಂಡಿ ವೀರಗಲ್ಲಿಗೆ ಮಾಲಾರ್ಪಣೆ ಸಲ್ಲಿಸಿ, ಬೃಹತ್ ರೈತ ಸಮಾವೇಶ ಹಾಗೂ ಆಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಮಹದಾಯಿ, ಕಳಸಾ- ಬಂಡೂರಿ ರೈತ ಹೋರಾಟ ಒಕ್ಕೂಟದ ಅಧ್ಯಕ್ಷ ಲೋಕನಾಥ ಹೆಬಸೂರ ಹೇಳಿದರು.
    42ನೇ ರೈತ ಹುತಾತ್ಮ ದಿನಾಚರಣೆ ನಿಮಿತ್ತ ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
    ಮಹದಾಯಿ, ಕಳಸಾ- ಬಂಡೂರಿ ನಾಲಾ ಜೋಡಣೆ ಯೋಜನೆ ಅನುಷ್ಠಾನಗೊಳಿಸಲು ಮಹದಾಯಿ ನ್ಯಾಯಾಧೀಕರಣದ ಆದೇಶದ ಅಂತಿಮ ತೀರ್ಪು ರಾಜ್ಯದ ಪರವಾದರೂ ಸದ್ಬಳಕೆ ಮಾಡಿಕೊಳ್ಳುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಫಲವಾಗಿವೆ ಎಂದರು.
    ಮತ್ತೊಮ್ಮ ರೈತ ಬಂಡಾಯದ ಮೂಲಕ ರೈತರ ಬೇಡಿಕೆ ಈಡೇರಿಸಿಕೊಳ್ಳಲು ಸಿದ್ಧರಾಗಿದ್ದೇವೆ. ಅಂದು ವಿವಿಧ ರೈತ ಹೋರಾಟ ಒಕ್ಕೂಟಗಳು, ರೈತ ಚಳವಳಿಗಾರರು, ಕಾರ್ವಿುಕರು, ಕನ್ನಡಪರ ಸಂಘಟನೆಗಳು ಸೇರಿ ಎರಡು ಸಾವಿರಕ್ಕೂ ಹೆಚ್ಚು ರೈತರು ಸೇರಲಿದ್ದಾರೆ ಎಂದರು.
    ಮಹದಾಯಿ ಕಾಮಗಾರಿ ಆರಂಭ, ಮಹದಾಯಿ ಹೋರಾಟದ ವೇಳೆಯಲ್ಲಿ ದಾಖಲಾಗಿ ಬಾಕಿ ಉಳಿದಿರುವ ಆರು ಪ್ರಕರಣ ವಾಪಸ್ ಪಡೆಯುವುದು, ಕಡಲೆ, ಹೆಸರು, ತೊಗರಿ, ಇನ್ನಿತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ಭೂಮಿ ನೀಡಿದ ರೈತರಿಗೆ ಪರಿಹಾರ ನೀಡುವಂತೆ ಹಕ್ಕೊತ್ತಾಯ ಮಂಡಿಸುತ್ತೇವೆ ಎಂದರು.
    ರೈತ ಮುಖಂಡ ವೀರಣ್ಣ ಸೊಪ್ಪಿನ, ಬಿ.ಎಚ್. ಶಲವಡಿ, ರಮೇಶ ನವಲಗುಂದ, ಪಿ.ಎನ್. ಬೀಳಗಿ, ಆರ್.ಎಂ. ನಾಯ್ಕರ, ಈರಣ್ಣ ನಿಡವಣಿ, ಪ್ರಕಾಶ ಶಿರಹಟ್ಟಿ, ಬಸವರಾಜ ಶಿರಹಟ್ಟಿ, ದತ್ತಾತ್ರೇಯ ಹೆಬಸೂರ, ದ್ಯಾಮಣ್ಣ ಹಡಪದ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts